Advertisement

ಮದುವೆಗೆ ಸರ್ಪ್ರೈಸ್ ಎಂಟ್ರಿ ಕೊಟ್ಟು ವಧು-ವರರಲ್ಲಿ ಕ್ಷಮೆ ಕೇಳಿದ ಪ್ರಧಾನಿ ಮೋದಿ!!

[ad_1]

West Bengal : ಬರ್ತಡೇ, ಎಂಗೇಜ್ಮೆಂಟ್, ಮದುವೆ ಸೇರಿದಂತೆ ಅನೇಕ ಕಾರ್ಯಕ್ರಮಗಳಿಗೆ ಸ್ನೇಹಿತರಿಲ್ಲರೂ ಬಂದು ಕೆಲವೊಮ್ಮೆ ಸರ್ಪ್ರೈಸ್ ಕೊಡುವುದು ಉಂಟು. ಇದೆಲ್ಲವೂ ಕಾಮನ್ ಬಿಡಿ. ಆದರೆ ದೇಶದ ಪ್ರಧಾನಿಯೇ ಬಂದು ಸರ್ಪ್ರೈಸ್ ಕೊಟ್ಟರೆ ಅದು ಹೇಗಿರುತ್ತದೆ? ಇದೆಲ್ಲ ಸಾಧ್ಯವಾ? ಎಂದು ನೀವು ಪ್ರಶ್ನೆ ಮಾಡಬಹುದು. ಆದರೆ ಇದು ನಡೆದೇ ಬಿಟ್ಟಿದೆ.

ಹೌದು, ಪಶ್ಚಿಮ ಬಂಗಾಳದಲ್ಲಿ ನಡೆದ ಒಂದು ಮದುವೆ ಸಮಾರಂಭಕ್ಕೆ ದೇಶದ ಪ್ರಧಾನಿ ನರೇಂದ್ರ ಮೋದಿಯವರು ಸರ್ಪ್ರೈಸ್ ಎಂಟ್ರಿ ಕೊಟ್ಟಿದ್ದಾರೆ. ಪ್ರಧಾನಿ ಮೋದಿ ಅವರ ಆಗಮನವನ್ನು ಕಂಡು ಎಲ್ಲರೂ ಅಚ್ಚರಿ ಹಾಗೂ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ. ಅಷ್ಟು ಮಾತ್ರವಲ್ಲ ತಾನು ಸರ್ಪ್ರೈಸ್ ಎಂಟ್ರಿ ಕೊಟ್ಟ ಮದುವೆ ಸಮಾರಂಭದ ನವ ದಂಪತಿಗಳಲ್ಲಿ ಪ್ರಧಾನಿ ಮೋದಿ ಕ್ಷಮೆ ಕೂಡ ಕೋರಿದ್ದಾರೆ.

ಇತ್ತೀಚೆಗೆ ಪಶ್ಚಿಮಬಂಗಾಳದ ಸಿಲಿಗುರಿಗೆ ಭೇಟಿನೀಡಿದ್ದ ಪ್ರಧಾನಿ ನರೇಂದ್ರಮೋದಿ ಅವರು, ಅಲ್ಲಿನ ಮೇಫೇರ್ಟೀ ರೆಸಾರ್ಟ್‌ನಲ್ಲಿ ನಡೆಯುತ್ತಿದ್ದ ನವದಂಪತಿಗಳ ವಿವಾಹ ಸಮಾರಂಭಕ್ಕೆ ದಿಢೀರ್ ಭೇಟಿ ನೀಡುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ. ಈ ಅಪರೂಪದ ಕ್ಷಣದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿವೈರಲ್ ಆಗಿದೆ.

ಮದುವೆ ಸಮಾರಂಭಕ್ಕೆ ಆಗಮಿಸಿದ ಮೋದಿ ನವದಂಪತಿಗಳ ಬಳಿ ಕ್ಷಮೆ ಕೋರಿದ್ದು, ತಾವು ಕೂಡ ಮದುವೆ ನಡೆಯುತ್ತಿದ್ದ ಈ ರೆಸಾರ್ಟ್ ನಲ್ಲಿ ಉಳಿದುಕೊಂಡಿದ್ದು, ಮದುವೆಗೆ ಅನಿರೀಕ್ಷಿತವಾಗಿ ಭೇಟಿ ನೀಡಿದ್ದೇನೆ. ಇದರಿಂದ ಸೆಕ್ಯೂರಿಟಿ ದೃಷ್ಟಿಯಿಂದ ಅತಿಥಿಗಳಿಗೆ ಹಾಗೂ ಮದುವೆ ಸಮಾರಂಭಕ್ಕೆ ಏನಾದರೂ ಅಡಚಣೆ ಉಂಟಾಗಿದ್ದರೆ ದಯವಿಟ್ಟು ಕ್ಷಮಿಸಬೇಕೆಂದು ಹೇಳಿದ್ದಾರೆ. 

banner

ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಅನೇಕರು ಬಗೆ ಬಗೆಯ ಕಮೆಂಟ್ ಮಾಡುತ್ತಿದ್ದು, ಕೆಲವರು ನವದಂಪತಿಗಳು ಬಾರಿ ಅದೃಷ್ಟವಂತರು ಎಂದು ಹೇಳಿದರೆ ಮತ್ತೆ ಕೆಲವರು ಇದೆಲ್ಲ ಚುನಾವಣಾ ಲಿಮಿಟ್ ಎಂದು ಹೇಳಿದ್ದಾರೆ.

ವಿಡಿಯೋ 👇

https://x.com/i/status/2043499994771079264



[ad_2]

Source link

Leave a Reply

Your email address will not be published. Required fields are marked *