Advertisement

ಕೋಲ್ಕತ್ತಾಗೆ 4ನೇ ಸೋಲು- ಚೆನ್ನೈಗೆ 32 ರನ್‌ಗಳ ಸೂಪರ್‌ ಜಯ, ಮುಂಬೈ ಹಿಂದಿಕ್ಕಿದ ಕಿಂಗ್ಸ್‌


ಚೆನೈ: ಸಂಜು ಸ್ಯಾಮ್ಸನ್, ಡೆವಾಲ್ಡ್ ಬ್ರೆವಿಸ್ ಬ್ಯಾಟಿಂಗ್ ಹಾಗೂ ನೂರ್ ಅಹ್ಮದ್ ಮಾರಕ ಬೌಲಿಂಗ್ ನೆರವಿನಿಂದ ಚೆನ್ನೈ ಸೂಪರ್‌ ಕಿಂಗ್ಸ್‌ (CSK) ಕೋಲ್ಕತ್ತಾ ನೈಟ್‌ರೈಡರ್ಸ್‌ (KKR) ವಿರುದ್ಧ 32 ರನ್‌ಗಳ ಜಯ ಸಾಧಿಸಿದೆ. ಈ ಮೂಲಕ ಸತತ ಎರಡು ಜಯ ಸಾಧಿಸಿದ ಚೆನ್ನೈ ಅಂಕಪಟ್ಟಿಯಲ್ಲಿ 9ನೇ ಸ್ಥಾನದಿಂದ 8ನೇ ಸ್ಥಾನಕ್ಕೆ ಜಿಗಿದಿದೆ.

ಇಲ್ಲಿನ ಚೆಪಾಕ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಟಾಸ್ ಗೆದ್ದ ಕೆಕೆಆರ್ ಬೌಲಿಂಗ್ ಆಯ್ದುಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಸಿಎಸ್‌ಕೆ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 192 ರನ್ ಗಳಿಸಿತು. ಸವಾಲಿನ ಮೊತ್ತವನ್ನು ಬೆನ್ನಟ್ಟಿದ ಕೆಕೆಆರ್ 7 ವಿಕೆಟ್ ನಷ್ಟಕ್ಕೆ 160 ರನ್ ಗಳಿಸಿ ಸೋಲು ಕಂಡಿತು.

ಎರಡು ಜಯದಿಂದ -0.846 ನೆಟ್‌ರನ್‌ ರೇಟ್‌ನೊಂದಿಗೆ ಅಂಕ ಪಟ್ಟಿಯಲ್ಲಿ 4 ಅಂಕ ಪಡೆದು ಚೆನ್ನೈ 8ನೇ ಸ್ಥಾನಕ್ಕೆ ಜಿಗಿದರೆ ಅಷ್ಟೇ ಅಂಕ ಸಂಪಾದಿಸಿರುವ ಮುಂಬೈ -0.772 ನೆಟ್‌ ರನ್‌ರೇಟ್‌ನೊಂದಿಗೆ 9ನೇ ಸ್ಥಾನಕ್ಕೆ ಜಾರಿದೆ.

KKR 2

ಕೆಕೆಆರ್ ತಂಡ ಆರಂಭದಲ್ಲೇ ಹಿನ್ನಡೆ ಅನುಭವಿಸಿತು. ಅನ್ಶುಲ್ ಕಂಬೋಜ್ ಎಸೆದ 2ನೇ ಓವರ್‌ನ 3ನೇ ಎಸೆತದಲ್ಲಿ ಫಿನ್ ಅಲೆನ್ 1 ರನ್ (3 ಎಸೆತ) ಗಳಿಸಿ ಸುಲಭ ಕ್ಯಾಚ್ ನೀಡಿ ಔಟಾದರು. ಕೇವಲ 2 ಓವರ್‌ಗಳಲ್ಲಿ 14 ರನ್ ಕಲೆಹಾಕಿ ಕೆಕೆಆರ್ ತಂಡದ ಮೊದಲ ವಿಕೆಟ್ ಪತನಗೊಂಡಿತು. ಖಲೀಲ್ ಅಹ್ಮದ್ ಎಸೆದ 5ನೇ ಓವರ್‌ನ 2ನೇ ಎಸೆತದಲ್ಲಿ ಸ್ಲಿಪ್‌ನಲ್ಲಿ ಕ್ಯಾಚ್ ನೀಡಿ ಸುನಿಲ್ ನರೈನ್ 24 ರನ್ (17 ಎಸೆತ, 2 ಬೌಂಡರಿ, 2 ಸಿಕ್ಸ್) ಗಳಿಸಿ ಔಟಾದರು. ಮೊದಲ 6 ಓವರ್‌ಗಳಲ್ಲಿ ಸಿಎಸ್‌ಕೆ ತಂಡ 2 ವಿಕೆಟ್ ಕಬಳಿಸಿತು.

ಅಂಗ್‌ಕ್ರಿಶ್ ರಘುವಂಶಿ 27 ರನ್ (19 ಎಸೆತ, 3 ಫೋರ್, 1 ಸಿಕ್ಸ್) ಗಳಿಸಿ ಪೆವಿಲಿಯನ್‌ಗೆ ಮರಳಿದರು. ನಾಯಕ ಅಜಿಂಕ್ಯ ರಹಾನೆ 28 ರನ್ (22 ಎಸೆತ, 2 ಸಿಕ್ಸ್) ಕಲೆಹಾಕಿದರು. ರಹಾನೆ ಹಾಗೂ ರಘವಂಶಿ 50 ರನ್‌ಗಳ (31 ಎಸೆತ) ಜೊತೆಯಾಟವಾಡಿದರು. ನೂರ್ ಅಹ್ಮದ್ ಎಸೆದ 11ನೇ ಓವರ್‌ನ ಕೊನೆಯ ಎಸೆತದಲ್ಲಿ ಕ್ಯಾಮರೋನ್ ಗ್ರೀನ್ ಕ್ಲೀನ್ ಬೌಲ್ಡ್ ಆದರು. ಮೊದಲ ಎಸೆತದಲ್ಲೇ ಸೊನ್ನೆ ಸುತ್ತಿ ಗ್ರೀನ್ ನಿರ್ಗಮಿಸಿದರು. ರಿಂಕು ಸಿಂಗ್ 6 ರನ್ (12 ಎಸೆತ) ಗಳಿಸಿ ಔಟಾದರು. ಪೋವೆಲ್ ಹಾಗೂ ರಮಣ್‌ದೀಪ್ 63 (40 ಎಸೆತ) ರನ್‌ಗಳ ಜೊತೆಯಾಟವಾಡಿದರು. 19ನೇ ಓವರ್‌ನ 3ನೇ ಎಸೆತದಲ್ಲಿ ರಮಣ್‌ದೀಪ್ 35 ರನ್ ಗಳಿಸಿ (23 ಎಸೆತ, 4 ಫೋರ್, 1 ಸಿಕ್ಸ್) ಔಟಾದರು. ಪೋವೆಲ್ ಔಟಾಗದೇ 31 ರನ್ (22 ಎಸೆತ, 1 ಫೋರ್, 2 ಸಿಕ್ಸ್) ಗಳಿಸಿದರೇ, ಅನುಕೂಲ್ ರಾಯ್ 1 ರನ್ ಗಳಿಸಿದರು.

ಚೆನ್ನೈ ಪರ ನೂರ್ ಅಹ್ಮದ್ 3 ವಿಕೆಟ್ ಕಿತ್ತರೆ, ಅನ್ಶುಲ್ ಕಂಬೋಜ್ 2 ವಿಕೆಟ್ ಪಡೆದರು. ಖಲೀಲ್, ಅಕೇಲ್ ಹೊಸೈನ್ ತಲಾ ಒಂದು ವಿಕೆಟ್ ಕಿತ್ತರು.

Sanju Samson

ಸವಾಲಿನ ಮೊತ್ತ:
ಚೆನ್ನೈ ಪರ ಸಂಜು ಸ್ಯಾಮ್ಸನ್ 48 ರನ್ (32 ಎಸೆತ, 4 ಬೌಂಡರಿ, 3 ಸಿಕ್ಸ್), ಡೆವಾಲ್ಡ್ ಬ್ರೆವಿಸ್ 41 ರನ್ (29 ಎಸೆತ, 4 ಫೋರ್, 2 ಸಿಕ್ಸ್) ಔಟಾದರೆ, ಆಯುಷ್ ಮ್ಹಾತ್ರೆ 38 ರನ್ (17 ಎಸೆತ, 6 ಬೌಂಡರಿ, 2 ಸಿಕ್ಸ್) ಗಳಿಸಿ ಪೆವಿಲಿಯನ್‌ಗೆ ಮರಳಿದರು. ಸರ್ಫರಾಜ್ ಖಾನ್ 23 ರನ್ (18 ಎಸೆತ, 1 ಫೋರ್, 2 ಸಿಕ್ಸ್) ಗಳಿಸಿ ತಂಡವನ್ನು 150ರ ಗಡಿ ದಾಟಿಸಿದರು.

ನಾಯಕ ಋತುರಾಜ್ ಗಾಯಕ್ವಾಡ್ ಕೇವಲ 7 ರನ್ (6 ಎಸೆತ, 1 ಫೋರ್) ಗಳಿಸಿ ಔಟಾದರು. ಸಂಜು ಹಾಗೂ ಮ್ಹಾತ್ರೆ 47 ರನ್‌ಗಳ (22 ಎಸೆತ) ಜೊತೆಯಾಟವಾಡಿದರೆ, ಸ್ಯಾಮ್ಸನ್ ಹಾಗೂ ಬ್ರೆವಿಸ್ ಜೊತೆಯಾಟವಾಡಿ 39 ರನ್ (32 ಎಸೆತ) ಗಳಿಸಿಕೊಟ್ಟರು. ಸರ್ಫರಾಜ್ ಖಾನ್ ಹಾಗೂ ಬ್ರೆವಿಸ್ 51 ರನ್‌ಗಳ (29 ಎಸೆತ) ಜೊತೆಯಾಟವಾಡಿದರು. ಶಿವಂ ದುಬೆ ಔಟಾಗದೇ 13 ರನ್ (12 ಎಸೆತ, 1 ಫೋರ್), ಜೇಮಿ ಓವರ್ಟನ್ 7 ರನ್ (6 ಎಸೆತ, 1 ಬೌಂಡರಿ) ಗಳಿಸಿದರು.

Ayush Mhatre

ಕೆಕೆಆರ್ ಪರ ಕಾರ್ತಿಕ್ ತ್ಯಾಗಿ 2 ವಿಕೆಟ್ ಕಿತ್ತರೇ, ವೈಭವ್ ಅರೋರಾ, ಸುನಿಲ್ ನರೈನ್, ಅನುಕೂಲ್ ರಾಯ್ ತಲಾ ಒಂದೊಂದು ವಿಕೆಟ್ ಕಬಳಿಸಿದರು.



Source link publictv.in

Leave a Reply

Your email address will not be published. Required fields are marked *