Advertisement

ಕಬ್ಬಿನಂತೆ ಮಂಡ್ಯ ಜನರ ಮಾತೂ ಸಿಹಿ: ಹಾಡಿಹೊಗಳಿದ ಮೋದಿ

[ad_1]

pm modi 1

– ಭಾಷಣದಲ್ಲಿ ರಾಗಿ ಮುದ್ದೆ, ಕಾವೇರಿ ನೀರಿನ ಮಹತ್ವ ಸಾರಿದ ಪ್ರಧಾನಿ

ಮಂಡ್ಯ: ಕಬ್ಬಿನಂತೆ ಮಂಡ್ಯ ಜನರ ಮಾತೂ ಸಿಹಿ. ಸಕ್ಕರೆ ನಾಡು ಮಂಡ್ಯ ಮಹತ್ವಪೂರ್ಣವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಕೊಂಡಾಡಿದರು.

ಆದಿಚುಂಚನಗಿರಿ ಮಠದ ಶ್ರೀಗುರು ಭೈರವೈಕ್ಯ ಮಂದಿರ ಉದ್ಘಾಟಿಸಿ ಮಾತನಾಡಿದ ಮೋದಿ, ಸಕ್ಕರೆ ನಗರ ಮಧುರ ಮಂಡ್ಯ ಎಂದು ಕನ್ನಡದಲ್ಲಿ ಹೇಳಿದರು. ಆಗ ಕಾರ್ಯಕ್ರಮದಲ್ಲಿದ್ದ ಜನರೆಲ್ಲ ಮೋದಿ ಮಾತಿಗೆ ಕೂಗುತ್ತಾ ಖುಷಿ ವ್ಯಕ್ತಪಡಿಸಿದರು.

ಸಕ್ಕರೆ ಮಂಡ್ಯ ಮಹತ್ವಪೂರ್ಣವಾಗಿದೆ. ಈ ಜಾಗ ಕಬ್ಬಿನ ಸಿಹಿಗೆ ಫೇಮಸ್. ಜನರು ಕೂಡ ಕಬ್ಬಿನಂತೆ ಸಿಹಿಯ ಮನಸ್ಸಿನವರು. ಕಬ್ಬಿನಂತೆ ಇಲ್ಲಿನ ಜನರ ಮಾತೂ ಸಿಹಿ. ಕರ್ನಾಟಕ ರಾಜ್ಯ ತಂತ್ರಜ್ಞಾನ, ತತ್ವಜ್ಞಾನ ಎರಡರಲ್ಲೂ ಸಮೃದ್ಧವಾಗಿದೆ ಎಂದು ಮೋದಿ ಬಣ್ಣಿಸಿದರು.

ಮಂಡ್ಯ ಜಿಲ್ಲೆ ರಾಗಿ ಮುದ್ದೆಗೂ ಜನಪ್ರಿಯ ಎಂಬುದನ್ನು ಇದೇ ವೇಳೆ ಮೋದಿ ನೆನಪಿಸಿಕೊಂಡರು. ನಮ್ಮ ಮುಂದೆ ದೇವೇಗೌಡರು ಇದ್ದಾರೆ. ಅವರು ರಾಗಿ ಮುದ್ದೆಯನ್ನು ಫೇಮಸ್ ಮಾಡಿದ್ದಾರೆ. ರಾಗಿಯನ್ನು ಆಹಾರದಲ್ಲಿ ಬಳಸಿದ್ರೆ ಬೊಜ್ಜು ಇರಲ್ಲ. ಎಣ್ಣೆ ಪದಾರ್ಥಗಳ ಸೇವನೆ ಕಡಿಮೆ ಮಾಡಿ. ಆಹಾರದಲ್ಲಿ ಸಿರಿಧಾನ್ಯ ಸೇವನೆ ರೂಢಿಸಿಕೊಳ್ಳಿ ಎಂದು ಕರೆ ನೀಡಿದರು.

[ad_2]

Source link publictv.in

Leave a Reply

Your email address will not be published. Required fields are marked *