Advertisement

ಆನ್‌ಲೈನ್ ಹೂಡಿಕೆ ಮೋಸ – ನಿವೃತ್ತ ನೌಕರರಿಂದ 21.76 ಲಕ್ಷ ವಂಚನೆ



Cyber Crime

ಕಾರವಾರ: ಆನ್‌ಲೈನ್ ಹೂಡಿಕೆ ಹೆಸರಿನಲ್ಲಿ ನಿವೃತ್ತ ನೌಕರನಿಂದ ಲಕ್ಷಾಂತರ ರೂಪಾಯಿ ವಂಚಿಸಿರುವ ಘಟನೆ ಬೆಳಕಿಗೆ ಬಂದಿದ್ದು, ಈ ಸಂಬಂಧ ಕಾರವಾರ (Karwar) ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಿರಸಿ ಮೂಲದ ಹಾಗೂ ಪ್ರಸ್ತುತ ಕೈಗಾ ಟೌನ್ಶಿಪ್‌ನಲ್ಲಿ ವಾಸಿಸುತ್ತಿರುವ ಮೆಥ್ಯು ಡಿಯೋಗ ಪರ್ನಾಂಡಿಸ್ (60) ಅವರು ನೀಡಿದ ದೂರಿನ ಪ್ರಕಾರ, ಮಾ.10ರಂದು ಅವರ ಮೊಬೈಲ್‌ಗೆ ವಾಟ್ಸಪ್ ಮೂಲಕ ‘VIP New Berry Core Strategy’ ಎಂಬ ಕಂಪನಿಯಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಗಳಿಸಬಹುದು ಎಂಬ ಸಂದೇಶ ಬಂದಿದೆ. ಇದನ್ನೂ ಓದಿ: ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ – ಮೂವರು ಅರೆಸ್ಟ್, ಓರ್ವ ಮಹಿಳೆಯ ರಕ್ಷಣೆ

ಸಂದೇಶದಲ್ಲಿದ್ದ ಲಿಂಕ್ ಕ್ಲಿಕ್ ಮಾಡಿದ ಬಳಿಕ ಅವರು ‘NBCPL (New Berry Credit Pvt Ltd, Mumbai)’ ಎಂಬ ಹೆಸರಿನ ಟ್ರೇಡಿಂಗ್ ಆ್ಯಪ್‌ಗೆ ಸಂಬಂಧಿಸಿದ ವಾಟ್ಸಪ್ ಗುಂಪಿಗೆ ಸೇರಿಸಲ್ಪಟ್ಟಿದ್ದಾರೆ. ಈ ಗುಂಪಿನ ಆಡ್ಮಿನ್‌ಗಳಾಗಿ ಮೀನಾ ಜೋಶಿ ಮತ್ತು ರಾಜೇಶ್ ಮೋದಿ ಎಂಬವರು ಕಾರ್ಯನಿರ್ವಹಿಸುತ್ತಿದ್ದು, ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಪಡೆಯುವ ಕುರಿತು ಮಾರ್ಗದರ್ಶನ ನೀಡುತ್ತಿದ್ದರು.

ಆರೋಪಿತರ ಮಾತು ನಂಬಿದ ಮೆಥ್ಯು ಅವರು ಮಾ.12ರಿಂದ ಏ.7 ರವರೆಗೆ ವಿವಿಧ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ ಒಟ್ಟು 21,76,100 ರೂ. ಜಮೆ ಮಾಡಿದ್ದಾರೆ. ಆದರೆ, ನಂತರ ಯಾವುದೇ ಲಾಭಾಂಶ ಅಥವಾ ಹೂಡಿಕೆ ಮಾಡಿದ ಹಣವನ್ನು ಮರಳಿ ನೀಡದೇ ಆರೋಪಿತರು ಸಂಪರ್ಕ ಕಡಿತಗೊಳಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಯೋಗೇಶ್ ಗೌಡ ಹತ್ಯೆ ಕೇಸ್‌ | ಮಧ್ಯಾಹ್ನ 3 ಗಂಟೆಗೆ ತೀರ್ಪು – ಆರೋಪಿಗಳ ಎದೆಯಲ್ಲಿ ಢವಢವ

ಈ ಕುರಿತು ಕಾರವಾರ ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ಕಲಂ 319(2), 318(4) ಬಿಎನ್‌ಎಸ್-2023 ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆ-2000ರ ಕಲಂ 66(2) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.



Source link publictv.in

Leave a Reply

Your email address will not be published. Required fields are marked *