1
Belthangady : ಬೆಳ್ತಂಗಡಿ ತಾಲೂಕಿನ ವಿವಿಧೆಡೆ ತುರ್ತು ನಿರ್ವಹಣಾ ಕಾಮಗಾರಿಗಳು ಹಾಗೂ ರಸ್ತೆ ಅಗಲೀಕರಣದ ಹಿನ್ನೆಲೆಯಲ್ಲಿ ವಿದ್ಯುತ್ ಕಂಬಗಳ ಸ್ಥಳಾಂತರ ಕಾರ್ಯ ನಡೆಯುತ್ತಿದ್ದು, ಈ ಹಿನ್ನಲೆಯಲ್ಲಿ ಇಂದು (ಏಪ್ರಿಲ್ 16ರ) ಗುರುವಾರದಂದು ಬೆಳ್ತಂಗಡಿ ಮತ್ತು ಧರ್ಮಸ್ಥಳ ವಿದ್ಯುತ್ ಉಪಕೇಂದ್ರಗಳ ವ್ಯಾಪ್ತಿಯ ಹಲವು ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.


ಬೆಳ್ತಂಗಡಿ 33/11ಕೆವಿ ಉಪಕೇಂದ್ರದ 33ಕೆವಿ ಭೂಗತ ಕೇಬಲ್ ಚೇತನಗೊಳಿಸುವಿಕೆ, ಹೊಸ 11ಕೆವಿ ಲಿಂಕ್ ಲೈನ್ ಕಾಮಗಾರಿ ಹಾಗೂ ಲೈನ್‌ಗಳಿಗೆ ತಾಗುತ್ತಿರುವ ಮರದ ಗೆಲ್ಲುಗಳನ್ನು ತೆರವುಗೊಳಿಸುವ ಕಾರ್ಯ ನಡೆಯಲಿದೆ.ವಿದ್ಯುತ್ ಸ್ಥಗಿತಗೊಳ್ಳುವ ಸಮಯ: ಬೆಳಿಗ್ಗೆ 10:00 ರಿಂದ ಸಂಜೆ 5:30 ರವರೆಗೆ.ಬಾಧಿತವಾಗುವ ಪ್ರದೇಶಗಳು (ಫೀಡರುಗಳು):ಬೆಳ್ತಂಗಡಿ ಕೇಂದ್ರದಿಂದ: ಕೊಲ್ಲಿ, ಬಂಗಾಡಿ, ಕೊಯ್ಯರು, ಉಜಿರೆ, ಬೆಳಾಲು, ಲ್ಯಾಲ, ಕುವೆಟ್ಟು, ಗೇರುಕಟ್ಟೆ, ಮಡಂತ್ಯಾರು ಹಾಗೂ ಬಳ್ಳಮಂಜ. ಧರ್ಮಸ್ಥಳ ಕೇಂದ್ರದಿಂದ: ಧರ್ಮಸ್ಥಳ ಟೆಂಪಲ್, ಕನ್ಯಾಡಿ, ಪುದುವೆಟ್ಟು, ಅರಸಿನಮಕ್ಕಿ, ನಿಷ್ಠೆ ಮತ್ತು ಪಟ್ರಮೆ.ಸಾರ್ವಜನಿಕರು ಹಾಗೂ ವಿದ್ಯುತ್ ಗ್ರಾಹಕರು ಈ ಕಾಮಗಾರಿಗೆ ಸಹಕರಿಸಬೇಕಾಗಿ ಮೆಸ್ಕಾಂ ಪ್ರಕಟಣೆಯಲ್ಲಿ ಕೋರಿದೆ.

















Leave a Reply