Advertisement

ಮನೆ ಬಿಟ್ಟು ಓಡಿ ಹೋದ 21 ವರ್ಷದ ಯುವಕನಿಗೆ ತಾಯಿ ವಯಸ್ಸಿನ ಮಹಿಳೆ ಜೊತೆ ಲವ್, ಮದುವೆ!!

[ad_1]

UP: ಮೊದಲೆಲ್ಲ ಮನೆಯಲ್ಲಿ ಹೆಣ್ಣು ಅಥವಾ ಗಂಡು ಮಕ್ಕಳಿದ್ದರೆ ಅತಿ ಚಿಕ್ಕ ವಯಸ್ಸಿಗೆ ಮದುವೆ ಮಾಡಲಾಗುತ್ತಿತ್ತು. ಅಲ್ಲದೆ ಮದುವೆ ಎಂದರೆ ಹುಡುಗ ದೊಡ್ಡವನಾಗಿರಬೇಕು, ಹುಡುಗಿ ಸಣ್ಣವಳಾಗಿರಬೇಕು ಎಂದು ಹಿರಿಯರು ಹೇಳುತ್ತಿದ್ದರು. ಆದರೆ ಕಾಲ ಬದಲಾಗಿದೆ. ಇಂದು ಮದುವೆಯಾಗೋ ಹುಡುಗ -ಹುಡುಗಿ ಇಬ್ಬರು ಒಂದೇ ವಯಸಿನವಾರಾಗಿರುತ್ತಾರೆ. ಆದರೆ ಅಚ್ಚರಿ ಏನಂದ್ರೆ ಇಂದಿನ ದಿನಗಳಲ್ಲಿ ಹರೆಯದ ಹುಡುಗರು ತಮ್ಮ ತಾಯಿಯ ವಯಸ್ಸಿನ ಮಹಿಳೆಯರ ಜೊತೆ ಮದುವೆಯಾಗುತ್ತಿರುವ ಅನೇಕ ಪ್ರಕರಣಗಳು ಬೆಳಕಿಗೆ ಬರುತ್ತಿರುವುದು. ಇದೀಗ ಅಂತದ್ದೇ ಒಂದು ಘಟನೆ ಬೆಳಕಿಗೆ ಬಂದಿದ್ದು 21ರ ವಯಸ್ಸಿನ ಯುವಕನೊಬ್ಬ ತನ್ನ ತಾಯಿಯ ವಯಸ್ಸಿನ ಮಹಿಳೆಯನ್ನು ವರಿಸಿ ಮನೆಯವರಿಗೆಲ್ಲ ಶಾಕ್ ನೀಡಿದ್ದಾನೆ.

ಕೆಲವು ದಿನಗಳ ಹಿಂದಷ್ಟೇ ಮೂರು ಮಕ್ಕಳ ತಾಯಿ, ವಿವಾಹಿತ ಮಹಿಳೆಯೊಬ್ಬಳ ಪ್ರೀತಿಯಲ್ಲಿ ಬಿದ್ದ 25 ವರ್ಷದ ಹುಡುಗನನ್ನು ಆಕೆಯ ಮನೆಯವರು ಮರಕ್ಕೆ ಕಟ್ಟಿ ಹೊಡೆದು ಸಾಯಿಸಿದ ಘಟನೆಯೊಂದು ಪಂಜಾಬ್‌ನಲ್ಲಿ ನಡೆದಿತ್ತು. ಈ ಘಟನೆ ಮಾಸುವ ಮೊದಲೇ ಉತ್ತರಪ್ರದೇಶದ ಅಮ್ರೋಹಾದಲ್ಲಿ ಇದೇ ರೀತಿಯ ಘಟನೆಯೊಂದು ಬೆಳಕಿಗೆ ಬಂದಿದೆ. 

21ರ ಹರೆಯದ ಅಮ್ರೋಹಾದ ಯುವಕ ಕೆಲವು ದಿನಗಳ ಹಿಂದೆ ಮನೆ ಬಿಟ್ಟು ಓಡಿ ಹೋಗಿದ್ದ. ಮಗ ಹಠಾತ್ ನಾಪತ್ತೆಯಾಗಿದ್ದರಿಂದ ಆತಂಕಗೊಂಡ ಆತನ ತಾಯಿ ಪೊಲೀಸರಿಗೆ ದೂರು ನೀಡಿ ಮಗನಿಗಾಗಿ ಹುಡುಕಾಟ ನಡೆಸಿದಾಗ ಆತ ಆಗ್ರಾದಲ್ಲಿ 40ರ ಹರೆಯದ ಮಹಿಳೆಯ ಜೊತೆ ಪತ್ತೆಯಾಗಿದ್ದಾನೆ.

ಹೌದು, ಯುವಕನಿಗೆ ಸೋಶಿಯಲ್ ಮೀಡಿಯಾದಲ್ಲಿ ಆಗ್ರಾದ ನಿವಾಸಿಯಾಗಿದ್ದ 40 ವರ್ಷದ ಮಹಿಳೆಯ ಪರಿಚಯವಾಗಿದ್ದು, ಪರಿಚಯ ಸ್ವಲ್ಪ ಸಮಯದಲ್ಲೇ ಗಾಢವಾದ ಪ್ರೇಮಕ್ಕೆ ತಿರುಗಿದ್ದು, ಬಿಟ್ಟಿರಲಾರದ ಬಂಧವಾಗಿ ಬದಲಾಗಿದೆ. ಮಹಿಳೆಯ ಜೊತೆಗಿನ ಪ್ರೇಮ ಸಂಬಂಧದಲ್ಲಿ ಭಾವನಾತ್ಮಕವಾಗಿ ತೀವ್ರವಾಗಿ ತೊಡಗಿಸಿಕೊಂಡಿದ್ದ ಪರಿಣಾಮ 21ರ ಹರೆಯದ ತರುಣ ಮನೆಯಲ್ಲಿ ಪೋಷಕರಿಗೂ ಹೇಳದೇ ಮನೆಬಿಟ್ಟು ಓಡಿ ಬಂದಿದ್ದು, ಮಹಿಳೆಯ ಜೊತೆ ವಾಸ ಮಾಡುವುದಕ್ಕೆ ಶುರು ಮಾಡಿದ್ದಾನೆ. ಇದು ಎರಡು ಕುಟುಂಬಗಳನ್ನು ತೀವ್ರ ಆಘಾತಕ್ಕೀಡು ಮಾಡಿದೆ.

banner

ವರದಿಗಳ ಪ್ರಕಾರ ಅವರಿಬ್ಬರು ದೇಗುಲವೊಂದರಲ್ಲಿ ಯಾರಿಗೂ ಹೇಳದೇ ಯಾರ ಒಪ್ಪಿಗೆಯನ್ನು ಪಡೆಯದೇ ಮದುವೆಯಾಗಿದ್ದಾರೆ ಎನ್ನಲಾಗಿದೆ. ಯುವಕನ ಪಾಲಿಗೆ ಇದು ಪ್ರೇಮವಾದರೆ ಆತನ ಪೋಷಕರ ಪಾಲಿಗೆ ಇದು ನುಂಗಲಾರದ ತುತ್ತಾಗಿದೆ. ಅವರು ಮಗನ ಈ ಸಂಬಂಧವನ್ನು ಒಪ್ಪಿಕೊಳ್ಳಲಾಗದೇ ಚಡಪಡಿಸುತ್ತಿದ್ದಾರೆ. ಇತ್ತ ಯುವಕನಿಗೆ ಇದು ನಿಜವಾದ ಪ್ರೀತಿಯೇ ಅಥವಾ ತಾತ್ಕಾಲಿಕ ಆಕರ್ಷಣೆಯೋ ತಿಳಿಯದಾಗಿದೆ.



[ad_2]

Source link

Leave a Reply

Your email address will not be published. Required fields are marked *