Advertisement

ದೆಹಲಿ ಏರ್‌ಪೋರ್ಟ್‌ನಲ್ಲಿ ಎರಡು ವಿಮಾನಗಳ ನಡುವೆ ಡಿಕ್ಕಿ – ತಪ್ಪಿದ ಭಾರೀ ಅನಾಹುತ

[ad_1]

SpiceJet Akasa Air

ನವದೆಹಲಿ: ಇಲ್ಲಿನ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Delhi IGI Airport) ಎರಡು ವಿಮಾನಗಳ ನಡುವ ಡಿಕ್ಕಿ ಸಂಭವಿಸಿದ್ದು, ಭಾರೀ ಅನಾಹುತ ತಪ್ಪಿದೆ.

ಇಂದು (ಏ.16) ದೆಹಲಿ ವಿಮಾನ ನಿಲ್ದಾಣದಲ್ಲಿ ನಿಲ್ಲಿಸಿದ್ದ ಆಕಾಸ ಏರ್ (Akasa Air) ವಿಮಾನಕ್ಕೆ ಸ್ಪೈಸ್‌ ಜೆಟ್ ವಿಮಾನ ಡಿಕ್ಕಿ ಹೊಡೆದಿದೆ. ಟ್ಯಾಕ್ಸಿವೇಯಲ್ಲಿ ಚಲಿಸುತ್ತಿದ್ದಾಗ ನಿಂತಿದ್ದ ಆಕಾಸ ಏರ್ ವಿಮಾನದ ರೆಕ್ಕೆಗೆ ಸ್ಪೈಸ್‌ಜೆಟ್ ವಿಮಾನ ಡಿಕ್ಕಿ ಹೊಡೆದಿದ್ದು, ಆಕಾಸ ಏರ್‌ ವಿಮಾನದ ಎಡ ಭಾಗದ ರೆಕ್ಕೆ, ಸ್ಪೈಸ್‌ ಜೆಟ್‌ನ (SpiceJet) ಬಲ ಭಾಗದ ರೆಕ್ಕೆಗೆ ಹಾನಿಯಾಗಿದೆ. ಇದನ್ನೂ ಓದಿ: ಲೋಕಸಭೆ ಬಲಾಬಲ 815 ಕ್ಕೆ ಏರಿಕೆ – ಮಹಿಳೆಯರಿಗೆ 272 ಸೀಟು ಮೀಸಲು: ಸಚಿವ ಅರ್ಜುನ್ ರಾಮ್ ಮೇಘವಾಲ್

SpiceJet Akasa Air 2

ಡಿಕ್ಕಿ ಹೊಡೆದ ಪ್ರಮಾಣ ಸಣ್ಣದಾಗಿತ್ತು, ಆದ್ದರಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ವಿಮಾನಯಾನ ಸಂಸ್ಥೆಗಳು ತಿಳಿಸಿವೆ. ಇದನ್ನೂ ಓದಿ: ಇನ್ಫೋಸಿಸ್‌ನಲ್ಲೂ ಕಾರ್ಪೋರೇಟ್‌ ಜಿಹಾದ್‌ ಆರೋಪ – ಮಹಾ ಸಚಿವರಿಗೆ ದೂರು

ಸ್ಪೈಸ್‌ಜೆಟ್ ಬಿ737-700 ವಿಮಾನವು ಏರ್‌ಪೋರ್ಟ್‌ನಲ್ಲಿ ಟ್ಯಾಕ್ಸಿ ವೇನಲ್ಲಿ ನಿಂತಿದ್ದಾಗ ನೆಲಕ್ಕೆ ಉರುಳಿತ್ತು. ಇದರ ಪರಿಣಾಮ ಅದರ ಬಲ ರೆಕ್ಕೆ ಆಕಾಸ ಏರ್‌ನ ವಿಮಾನಕ್ಕೆ ತಾಗಿ ಹಾನಿಯಾಗಿದೆ. ಇದೇ ವೇಳೆ ಆಕಾಸ ಏರ್‌ನ ಎಡ ರೆಕ್ಕೆ ಹಾನಿಯಾಗಿದ್ದು, ಸ್ಟೆಬಿಲೈಸರ್ ಕೂಡ ಹಾಳಾಗಿದೆ.

ಹಾನಿಗೆ ಒಳಗಾದ ಆಕಾಸ ಏರ್‌ ವಿಮಾನವು (ಸಂಖ್ಯೆ QP 1406) ದೆಹಲಿಯಿಂದ ಹೈದರಾಬಾದ್‌ಗೆ ಹಾರುತ್ತಿತ್ತು ಎಂದು ಆಕಾಸ ಏರ್ ತಿಳಿಸಿದೆ. ಇದನ್ನೂ ಓದಿ: ಮುಂಬೈ ಏರ್‌ಪೋರ್ಟ್‌ನಲ್ಲಿ ಆಕಾಸ ಏರ್ ವಿಮಾನಕ್ಕೆ ಟ್ರಕ್‌ ಡಿಕ್ಕಿ

[ad_2]

Source link publictv.in

Leave a Reply

Your email address will not be published. Required fields are marked *