Advertisement

ಮನೆಮಗನ ಆಟಕ್ಕೆ ಮಲಗಿದ ಮುಂಬೈ – ಪಂಜಾಬ್‌ಗೆ 7 ವಿಕೆಟ್‌ಗಳ ಭರ್ಜರಿ ಜಯ, 2ನೇ ಸ್ಥಾನಕ್ಕೆ ಕುಸಿದ RCB

[ad_1]

Shreyas Iyer 4

ಮುಂಬೈ: ಫೀಲ್ಡಿಂಗ್‌ ವೇಳೆ ಅದ್ಭುತ ‘ರಿಲೇ ಕ್ಯಾಚ್’ ಮೂಲಕ ಹಾರ್ದಿಕ್ ಪಾಂಡ್ಯ (Hardik Pandya) ವಿಕೆಟ್ ಪಡೆಯಲು ನೆರವಾದ ಪಂಜಾಬ್‌ ಕಿಂಗ್ಸ್‌ ತಂಡದ ನಾಯಕ ಶ್ರೇಯಸ್‌ ಅಯ್ಯರ್‌ (Shreyas Iyer), ಬ್ಯಾಟಿಂಗ್‌ನಲ್ಲಿ ಸ್ಫೋಟಕ ಫಿಫ್ಟಿ ಬಾರಿಸುವ ಮೂಲಕ ಗೆಲುವು ತಂದುಕೊಡುವಲ್ಲಿ ಯಶಸ್ವಿಯಾದರು.

ವಾಂಖೆಡೆ ಕ್ರೀಡಾಂಗಣದಲ್ಲಿಂದು ನಡೆದ ಪಂದ್ಯದಲ್ಲಿ ಪಂಜಾಬ್‌ ಕಿಂಗ್ಸ್‌ (Punjab Kings) ತಂಡವು ಮುಂಬೈ ವಿರುದ್ಧ 7 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತು. ಇದರೊಂದಿಗೆ 5 ಪಂದ್ಯಗಳಲ್ಲಿ 9 ಅಂಕ (4 ಗೆಲುವು – ಒಂದು ಫಲಿತಾಂಶವಿಲ್ಲ) ಗಳಿಸುವ ಮೂಲಕ ಅಗ್ರಸ್ಥಾನಕ್ಕೇರಿತು. 8 ಅಂಕ ಪಡೆದು ನಂ.1 ಸ್ಥಾನದಲ್ಲಿದ್ದ ಆರ್‌ಸಿಬಿ (RCB) 2ನೇ ಸ್ಥಾನಕ್ಕೆ ಕುಸಿದಿದೆ.

ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ್ದ ಮುಂಬೈ 20 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 195 ರನ್‌ ಗಳಿಸಿತ್ತು. ಬೃಹತ್‌ ಮೊತ್ತದ ಗುರಿ ಬೆನ್ನಟ್ಟಿದ ಪಂಜಾಬ್‌ 16.3 ಓವರ್‌ಗಳಲ್ಲೇ ಕೇವಲ 3 ವಿಕೆಟ್‌ ನಷ್ಟಕ್ಕೆ 198 ರನ್‌ ಬಾರಿಸಿ ಗೆದ್ದು ಬೀಗಿತು.

Jasprit Bumrah

ಬೃಹತ್‌ ಮೊತ್ತದ ಚೇಸಿಂಗ್‌ ಆರಂಭಿಸಿದ ಪಂಜಾಬ್‌ 2.2 ಓವರ್‌ಗಳಲ್ಲಿ 27 ರನ್‌ಗಳಿಗೆ ಮೊದಲ ವಿಕೆಟ್‌, 45 ರನ್‌ಗಳಿಗೆ 2ನೇ ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ತಂಡಕ್ಕೆ ಬಲ ತುಂಬಿದ್ದು, ನಾಯಕ ಶ್ರೇಯಸ್‌ ಅಯ್ಯರ್‌ ಹಾಗೂ ಪ್ರಭ್‌ಸಿಮ್ರನ್‌ ಸಿಂಗ್‌ (Prabhsimran Singh) ಶತಕದ ಜೊತೆಯಾಟ.

ಅಯ್ಯರ್‌-ಸಿಮ್ರನ್‌ ಶತಕದ ಜೊತೆಯಾಟ
3ನೇ ವಿಕೆಟ್‌ಗೆ ಜೊತೆಯಾದ ಈ ಜೋಡಿ ಮುಂಬೈ ಬೌಲರ್‌ಗಳನ್ನ ಹಿಗ್ಗಾಮುಗ್ಗ ಚಚ್ಚಿ ಚೆಂಡಾಡಿದ್ರು. ಸಿಕ್ಸರ್‌, ಬೌಂಡರಿಗಳೊಂದಿಗೆ ಅಬ್ಬರಿಸಿದ ಈ ಜೋಡಿ 67 ಎಸೆತಗಳಲ್ಲಿ 139 ರನ್‌ ಬಾರಿಸಿತ್ತು. ಈ ಮೂಲಕ 15 ಓವರ್‌ಗಳಲ್ಲೇ 166 ರನ್‌ ಬಾರಿಸಿ ಗೆಲುವಿನ ಹಾದಿಯನ್ನು ಸುಲಭವಾಗಿಸಿದ್ರು.

Shreyas Iyer 2 2

ಪಂಜಾಬ್‌ ಪರ ಪ್ರಭ್‌ ಸಿಮ್ರನ್‌ ಸಿಂಗ್‌ 39 ಎಸೆತಗಳಲ್ಲಿ ಅಜೇಯ 80 ರನ್‌ (2 ಸಿಕ್ಸರ್‌, 11 ಬೌಂಡರಿ) ಚಚ್ಚಿದ್ರೆ, ಕ್ಯಾಪ್ಟನ್‌ ಶ್ರೇಯಸ್‌ ಅಯ್ಯರ್‌ 35 ಎಸೆತಗಳಲ್ಲಿ 66 ರನ್‌ (4 ಸಿಕ್ಸರ್‌, 5 ಬೌಂಡರಿ), ಪ್ರಿಯಾಂಶ್‌ ಆರ್ಯ 15 ರನ್‌, ಸ್ಟೋಯ್ನಿಸ್‌ 10 ರನ್‌ ಕೊಡುಗೆ ನೀಡಿದ್ರು.

ಇದಕ್ಕೂ ಮುನ್ನ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಮುಂಬೈ ಅಗ್ರ ಬ್ಯಾಟರ್‌ಗಳ ವೈಫಲ್ಯದ ಹೊರತಾಗಿಯೂ 20 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 195 ರನ್‌ ಗಳಿಸಿತ್ತು.

Quinton de Kock

ಡಿಕಾಕ್‌-ನಮನ್‌ ಹೋರಾಟ ವ್ಯರ್ಥ 
ಮುಂಬೈ ಪರ ಆರಂಭಿಕನಾಗಿ ಕಣಕ್ಕಿಳಿದ ಕ್ವಿಂಟನ್‌ ಡಿಕಾಕ್‌ ಕೊನೆಯವರೆಗೂ ಅಜೇಯ ಹೋರಾಟ ನಡೆಸಿದ್ದರು. 60 ಎಸೆತಗಳಲ್ಲಿ 112 ರನ್‌ (7 ಸಿಕ್ಸರ್ಮ 8 ಬೌಂಡರಿ) ಚಚ್ಚಿದ್ರೆ, ನಮನ್‌ ಧೀರ್‌ 50 ರನ್‌ (31 ಎಸೆತ, 3 ಸಿಕ್ಸರ್‌, 3 ಬೌಂಡರಿ) ಬಾರಿ ದಿಟ್ಟ ಹೋರಾಟ ನಡೆಸಿದ್ರು.

ಇನ್ನುಳಿದಂತೆ ಹಾರ್ದಿಕ್‌ ಪಾಂಡ್ಯ 14 ರಮ್‌, ತಿಲಕ್‌ ವರ್ಮಾ ಅಜೇಯ 8 ರನ್‌, ರಿಕಲ್ಟನ್‌ 2 ರನ್‌ ಗಳಿಸಿದ್ರೆ, ಶೆರ್ಫೇನ್ ರುದರ್‌ಫೋರ್ಡ್ 1 ರನ್‌, ಸೂರ್ಯಕುಮಾರ್‌ ಶೂನ್ಯ ಸುತ್ತಿದರು.

[ad_2]

Source link publictv.in

Leave a Reply

Your email address will not be published. Required fields are marked *