Advertisement

ಬಂಜರು ಭೂಮಿಯ ಕಮಾಲ್‌ – ಒಂದು ಕೆಜಿ ಮಾವಿಗೆ 1 ಲಕ್ಷ ರೂ.



Mango

ವಿಜಯಪುರ: ಜಿಲ್ಲೆಯಲ್ಲಿ ಸಾಮಾನ್ಯವಾಗಿ ಮಾವಿನ ಹಣ್ಣು 500 ರೂ.ಯಿಂದ 2000 ರೂ.ವರೆಗೆ ಮಾರಾಟವಾಗುತ್ತದೆ. ಆದರೆ ಇದೀಗ ಒಂದು ಕೆ.ಜಿ ಮಾವು 1 ಲಕ್ಷ ರೂ.ಗೆ ಮಾರಾಟವಾಗಿದೆ.

Mango 2

ಹೌದು, ಬೇಸಿಗೆ ಬಂದ್ರೆ ಸಾಕು ಹಣ್ಣು ಪ್ರಿಯರಿಗೆ ತುಂಬಾ ಖುಷಿ. ಅದಕ್ಕೆ ಕಾರಣ ಮಾವಿನ  ಹಣ್ಣು. ಸಾಮಾನ್ಯವಾಗಿ 500 ರೂ.ಯಿಂದ 2000 ರೂ.ವರೆಗೆ ಒಂದು ಕೆ.ಜಿ ಮಾವು ಮಾರಾಟವಾಗುತ್ತದೆ. ಆದರೆ ವಿಜಯಪುರದ (Vijayapura) ಇಂಡಿ (Indi) ಪಟ್ಟಣದಲ್ಲಿ 1 ಲಕ್ಷ ರೂ.ಗೆ ಒಂದು ಕೆ.ಜಿ ಮಾವು ಮಾರಾಟವಾಗಿದೆ. ಅನಂತ ಹಾಗೂ ರಾಜಶ್ರೀ ದಂಪತಿಗಳ ತೋಟದಲ್ಲಿ ಬೆಳೆದ ಮಿಯಾಝಕಿ ತಳಿಯ ಮಾವು (Miyazaki Mango) 1 ಲಕ್ಷ ರೂ.ಗೆ ಒಂದು ಕ.ಜಿ ಮಾರಾಟವಾಗಿದೆ. ಇದನ್ನೂ ಓದಿ: ಕಾಫಿನಾಡು, ಮಲೆನಾಡಲ್ಲಿ ತಡರಾತ್ರಿ ಭಾರೀ ಮಳೆ – ಧರೆಗುರುಳಿದ ವಿದ್ಯುತ್‌ ಕಂಬ, ಮರಗಳು

ಈ ಬೆಲೆ ಬಾಳುವ ಮಾವು ಇಂಡಿಯಂತಹ ಬಂಜರ ಭೂಮಿಯಲ್ಲಿ ಬೆಳೆದಿದ್ದು ಇನ್ನೊಂದು ವಿಶೇಷ. ಆಂಧ್ರದ (Andhra Pradesh) ರಾಜಮಂಡ್ರಿಯಿಂದ(Rajamandri) ಹತ್ತು ಸಾವಿರ ರೂ.ಗೆ ಒಂದರಂತೆ ಒಟ್ಟು 25 ಮಿಯಾಝಕಿ ಸಸಿ ತಂದು ಅನಂತ ದಂಪತಿ ನೆಟ್ಟಿದ್ದರು. ಈಗ ಒಂದು ಗಿಡ 25 ರಿಂದ 30 ಹಣ್ಣು ನೀಡುತ್ತಿವೆ. ಬಂಜರ ಭೂಮಿಯಲ್ಲಿ ಈ ತಳಿ ಬೆಳೆಯುತ್ತದೋ ಇಲ್ಲವೋ ಎಂಬ ಆತಂಕದಲ್ಲೇ ತಂದು ನೆಟ್ಟಿದ್ದರಂತೆ. ಆದರೆ ದೇವರ ದಯೆಯಿಂದ ಉತ್ತಮ ಫಸಲು ಬಂದಿದೆ.

Mango 1

ಇದೀಗ ಕೋಲ್ಕತ್ತಾ, ಮುಂಬೈನಿಂದ ದಲ್ಲಾಳಿಗಳ ಕರೆ ಮಾಡಿ ಮಾವಿಗಾಗಿ ಮುಗಿಬಿದ್ದಿದ್ದಾರೆ. ಕಳೆದ ವರ್ಷವೇ ಈ ಮಾವು ಬಂದಿತ್ತಾದ್ರೂ ಮನೆಯವರೇ ಈ ಮಾವನ್ನ ಸವಿದಿದ್ದರು. ಆದ್ರೆ ಈ ಬಾರಿ ಫಸಲು ಬಂದ ನಂತರ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದ ಫೋಟೊ ವೈರಲ್ ಆಗಿ ರಾಜಶ್ರೀ ಜೈನ್ ಅವರಿಗೆ ಕರೆ ಮಾಡಿ ಬೇಡಿಕೆ ಇಟ್ಟಿದ್ದಾರೆ.

Mango 3

ಈ ಮಾವಿಗೆ ವಿದೇಶದಲ್ಲಿ ಭಾರಿ ಬೇಡಿಕೆ ಇದ್ದು, ಅಲ್ಲಿ ಕೆ.ಜಿಗೆ 2 ರಿಂದ 2.5 ಲಕ್ಷಕ್ಕೆ ಮಾವು ಮಾರಾಟವಾಗುತ್ತದೆ. ಇನ್ನು 20 ವರ್ಷದ ಹಿಂದೆ ಅನಂತ-ರಾಜಶ್ರಿ ದಂಪತಿ ಖರೀದಿಸಿದ್ದ ಬಂಜರು ಭೂಮಿ ಇದೀಗ ನಂದನವನವಾಗಿದೆ. ಈ ತಳಿಯ ಮಾವಿನ ಬೆಲೆ ಕಂಡು ಖುದ್ದು ರಾಜಶ್ರೀ ದಂಪತಿ ಬೆರಗಾಗಿದ್ದಾರೆ. ಜಿಲ್ಲೆಯ ಜನರು ಬಾಯಿ ತೆರದು ನೋಡುವಂತಾಗಿದೆ.ಇದನ್ನೂ ಓದಿ: ಇಸ್ರೇಲ್, ಲೆಬನಾನ್ ನಡುವೆ ಅಮೆರಿಕ ಮಧ್ಯಸ್ಥಿಕೆ – 10 ದಿನಗಳ ಕದನ ವಿರಾಮ ಘೋಷಣೆ




Source link publictv.in

Leave a Reply

Your email address will not be published. Required fields are marked *