Advertisement

Parliament : ಲೋಕಸಭಾ ಕ್ಷೇತ್ರ ಪುನರ್ ವಿಂಗಡಣೆ

[ad_1]

Parliament : ಭಾರತದ ಸಂಸತ್ತಿನಲ್ಲಿಐತಿಹಾಸಿಕ ಮಹಿಳಾ ಮೀಸಲಾತಿ, ಕೇಂದ್ರಾಡಳಿತ ಪ್ರದೇಶಗಳ ಕಾನೂನುಗಳು ಮತ್ತು ಕ್ಷೇತ್ರ ಪುನರ್‌ವಿಂಗಡಣೆ ಮಸೂದೆಗಳನ್ನು ಲೋಕಸಭೆಯಲ್ಲಿ ಮಂಡಿಸಲಾಗಿದೆ. ಒಟ್ಟಾರೆ ದೇಶದಲ್ಲಿ ಲೋಕಸಭಾ ಕ್ಷೇತ್ರಗಳ ಪುನರ್ ವಿಂಗಡಣೆಯಾದರೆ ದಕ್ಷಿಣ ಭಾರತದಲ್ಲಿ ಲೋಕಸಭಾ ಸ್ಥಾನಗಳ ಸಂಖ್ಯೆ ಎಷ್ಟು ಹೆಚ್ಚಾಗಲಿದೆ? ಎಂಬ ವಿಚಾರ ಇದೀಗ ಮುನ್ನಡೆಗೆ ಬಂದಿದೆ. ಇಲ್ಲಿದೆ ನೋಡಿ ಡಿಟೈಲ್ಸ್.

 ದೇಶದಲ್ಲಿ ಲೋಕಸಭಾ ಕ್ಷೇತ್ರಗಳ ಪುನರ್ ವಿಂಗಡಣೆಯಿಂದಾಗಿ ದಕ್ಷಿಣ ಭಾರತಕ್ಕೆ ಅನ್ಯಾಯವಾಗಲಿದೆ ಎಂಬ ಕೂಗು ಕೇಳಿ ಬರುತ್ತಿದೆ. ಈ ಎಲ್ಲಾ ಗೊಂದಲಗಳಿಗೆ, ಊಹಾಪೂಹಗಳಿಗೆ ಲೋಕಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ ಅವರು ಸ್ಪಷ್ಟೀಕರಣ ನೀಡಿ, ಉತ್ತರಿಸಿದ್ದಾರೆ.

ಕ್ಷೇತ್ರ ಪುನರ್ ವಿಂಗಡಣೆಯ ನಂತರ ಕರ್ನಾಟಕದಲ್ಲಿ (Karnataka) ಲೋಕಸಭಾ ಕ್ಷೇತ್ರಗಳ ಸಂಖ್ಯೆಯು ಸದ್ಯದ 28 ರಿಂದ 42 ಕ್ಕೆ ಏರಿಕೆಯಾಗಲಿದೆ. ಇದರಿಂದ ದಕ್ಷಿಣ ರಾಜ್ಯಗಳಿಗೆ ಅನ್ಯಾಯವಾಗಲಿದೆ ಎಂಬ ಆರೋಪಕ್ಕೆ ಲೋಕಸಭೆಯಲ್ಲಿ ಉತ್ತರ ನೀಡಿದ ಅವರು, ಕ್ಷೇತ್ರ ಪುನರ್ ವಿಂಗಡನೆ ಮಸೂದೆಯಿಂದಾಗಿ ಕರ್ನಾಟಕದ ಪ್ರಾತಿನಿಧ್ಯವು 14 ಸ್ಥಾನಗಳಷ್ಟು ಹೆಚ್ಚಾಗಲಿದ್ದು, ಒಟ್ಟು 42 ಸಂಸದರು ರಾಜ್ಯದಿಂದ ಆಯ್ಕೆಯಾಗಲಿದ್ದಾರೆ. ಸದ್ಯ ಲೋಕಸಭೆಯ (Lok Sabha) ಒಟ್ಟು 543 ಸ್ಥಾನಗಳಲ್ಲಿ ಕರ್ನಾಟಕದ ಪಾಲು ಶೇ. 5.15 ರಷ್ಟಿದೆ. 816 ಸದಸ್ಯರ ಸದನದಲ್ಲಿ ಅದರ ಪಾಲು ಸುಮಾರು 5.14 ಪ್ರತಿಶತದಷ್ಟಿರುತ್ತದೆ. ಮರುವಿಂಗಡಣೆಯ ನಂತರ ಇದರ ಪ್ರಾತಿನಿಧ್ಯ ಶೇ. 5.44 ಕ್ಕೆ ಏರಿಕೆಯಾಗಲಿರುವುದರಿಂದ ಕರ್ನಾಟಕಕ್ಕೆ ಯಾವುದೇ ನಷ್ಟವಾಗುವುದಿಲ್ಲ ಎಂದು ಅವರು ಹೇಳಿದ್ದಾರೆ.

ದಕ್ಷಿಣದಲ್ಲಿ ಒಟ್ಟು ಸ್ಥಾನ 195ಕ್ಕೆ ಏರಿಕೆ:

banner

ಕರ್ನಾಟಕದಲ್ಲಿ 28 ಸ್ಥಾನ 42ಕ್ಕೆ ಏರಿಕೆ ಆಗಲಿದೆ. ಆಂಧ್ರಪ್ರದೇಶದ ಸೀಟುಗಳ ಸಂಖ್ಯೆ 25 ರಿಂದ 38 ಕ್ಕೆ, ತೆಲಂಗಾಣದ ಸ್ಥಾನಗಳು 17 ರಿಂದ 26 ಕ್ಕೆ ಏರಿಕೆಯಾಗಲಿವೆ. ತಮಿಳುನಾಡಿನ ಸಂಸದರ ಸಂಖ್ಯೆ 39 ರಿಂದ 59 ಕ್ಕೆ ಹಾಗೂ ಕೇರಳದ ಸ್ಥಾನಗಳು 20 ರಿಂದ 30 ಕ್ಕೆ ಹೆಚ್ಚಾಗಲಿವೆ. ಒಟ್ಟಾರೆಯಾಗಿ ದಕ್ಷಿಣದ ಐದು ರಾಜ್ಯಗಳ ಒಟ್ಟು ಲೋಕಸಭಾ ಸ್ಥಾನಗಳ ಸಂಖ್ಯೆ ಈಗಿರುವ 129 ರಿಂದ 195 ಕ್ಕೆ ಏರಲಿದೆ. ಇದರಿಂದ ಸಂಸತ್ತಿನಲ್ಲಿ ದಕ್ಷಿಣ ಭಾರತದ ಅಧಿಕಾರದ ಪಾಲು ಈಗಿನ ಶೇ. 23.76 ರಿಂದ ಶೇ. 24 ಕ್ಕೆ ಏರಿಕೆಯಾಗಲಿದೆ ಎಂದು ಗೃಹ ಸಚಿವರು ಅಂಕಿಅಂಶಗಳ ಮೂಲಕ ಸಾಬೀತುಪಡಿಸಿದ್ದಾರೆ.



[ad_2]

Source link

Leave a Reply

Your email address will not be published. Required fields are marked *