Advertisement

ತವರಿನಲ್ಲೇ ತಿಣುಕಾಡಿ ಗೆದ್ದ ಗುಜರಾತ್‌ – ಕೆಕೆಆರ್‌ಗೆ ಡಬಲ್‌ ಹ್ಯಾಟ್ರಿಕ್‌ ಸೋಲು

[ad_1]

Gill

ಅಹಮದಾಬಾದ್‌: ಕೊನೆಯವರೆಗೂ ರೋಚಕತೆಯಿಂದ ಕೂಡಿದ್ದ ಪಂದ್ಯದಲ್ಲಿ ಗುಜರಾತ್‌ 5 ವಿಕೆಟ್‌ಗಳ ಅಮೋಘ ಜಯ ಸಾಧಿಸಿದೆ. ಇನ್ನೂ ತೀವ್ರ ಪೈಪೋಟಿ ನೀಡಿದ್ದ ಕೋಲ್ಕತ್ತಾ ನೈಟ್‌ ರೈಡರ್ಸ್‌ ಸತತ 6ನೇ ಸೋಲು ಕಂಡು, ಅಂಕಪಟ್ಟಿಯಲ್ಲಿ ಕೊನೇ ಸ್ಥಾನದಲ್ಲೇ ಉಳಿದಿದೆ.

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಕೆಕೆಆರ್‌ 20 ಓವರ್‌ಗಳಲ್ಲಿ 180 ರನ್‌ಗಳಿಗೆ ಆಲೌಟ್‌ ಆಯಿತು. ಸ್ಪರ್ಧಾತ್ಮಕ ರನ್‌ ಗುರಿ ಬೆನ್ನಟ್ಟಿದ ಗುಜರಾತ್‌ 19.4 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 181 ರನ್‌ ಗಳಿಸಿ ಗೆಲುವು ಸಾಧಿಸಿತು.

KKR vs GT

ತವರಿನಲ್ಲೇ ತಿಣುಕಾಡಿದ ಜಿಟಿ
ಪವರ್‌ಪ್ಲೇ ನಲ್ಲಿ ಸ್ಫೋಟಕ ಗುಜರಾತ್‌ ಪರ ಸ್ಫೋಟಕ ಪ್ರದರ್ಶನ ನೀಡಿದ ನಾಯಕ ಶುಭಮನ್‌ ಗೊಲ್‌ ಬಳಿಕ ನಿಧಾನಗತಿಯ ಬ್ಯಾಟಿಂಗ್‌ಗೆ ಇಳಿದರು. 50 ಎಸೆತಗಳನ್ನು ಎದುರಿಸಿದ ಗಿಲ್‌ 86 ರನ್‌ (4 ಸಿಕ್ಸರ್‌, 8 ಬೌಂಡರಿ) ಚಚ್ಚಿದ್ರೆ, ಬಟ್ಲರ್‌ 25 ರನ್‌, ಸುದರ್ಶನ್‌ 22 ರನ್‌, ವಾಷಿಂಗ್ಟನ್‌ ಸುಂದರ್‌ 13 ರನ್‌, ಗ್ಲೆನ್‌ ಫಿಲಿಪ್ಸ್‌ 19 ರನ್‌ ಗಳಿಸಿ ಔಟಾದ್ರೆ, ರಾಹುಲ್‌ ತೆವಾಟಿಯಾ 7 ರನ್‌, ಎಂ. ಶಾರೂಖ್‌ ಕಾನ್‌ 3 ರನ್‌ ಗಳಿಸಿ ಅಜೇಯರಾಗುಳಿದರು.

Green

ಕೊನೇ 3 ಓವರ್‌ಗಳಲ್ಲಿ ಕೇವಲ 15 ರನ್‌
ಇದಕ್ಕೂ ಮುನ್ನ ಬ್ಯಾಟ್‌ ಮಾಡಿದ ಕೆಕೆಆರ್‌ ಕ್ಯಾಮರೂನ್‌ ಗ್ರೀನ್‌ ಅವರ ಅರ್ಧಶತಕದ ನೆರವಿನಿಂದ 180 ರನ್‌ ಗಳಿಸಿತ್ತು. ಮಧ್ಯಮ ಕ್ರಮಾಂಕದಲ್ಲಿ ಗ್ರೀನ್‌ ಆರ್ಭಟದಿಂದ ಚೇತರಿಸಿಕೊಂಡಿದ್ದ ಕೆಕೆಆರ್‌ 200 ರನ್‌ಗಳ ಗಡಿದಾಟುವ ನಿರೀಕ್ಷೆ ಮೂಡಿಸಿತ್ತು. ಆದ್ರೆ ಕ್ರೀಸ್‌ಗೆ ಬರುತ್ತಿದ್ದಂತೆ ಆರ್ಭಟಕ್ಕಿಳಿಯುತ್ತಿದ್ದ ಬ್ಯಾಟರ್‌ಗಳು ಅತಿಬೇಗ ಪೆವಿಲಿಯನ್‌ ಪರೇಡ್‌ ನಡೆಸಲು ಶುರು ಮಾಡಿದ್ರು. ಅಲ್ಲದೇ ಸಿಕ್ಸರ್‌, ಬೌಂಡರಿ ಅಬ್ಬರಿಸುತ್ತಿದ್ದ ಗ್ರೀನ್‌ ಕೂಡ ಮಂಕಾದರು. ಪರಿಣಾಮ ಕೊನೇ 3 ಓವರ್‌ಗಳಲ್ಲಿ ಕೇವಲ 15 ರನ್‌ಗಳಷ್ಟೇ ತಂಡಕ್ಕೆ ಸೇರ್ಪಡೆ ಆಯಿತು.

ಕೆಕೆಆರ್‌ ಪರ ಕ್ಯಾಮರೂನ್‌ ಗ್ರೀನ್‌ 55 ಎಸೆತಗಳಲ್ಲಿ 79 ರನ್‌ (4 ಸಿಕ್ಸರ್‌, 7 ಬೌಂಡರಿ) ಚಚ್ಚಿದ್ರೆ, ಟಿಮ್‌ ಸೈಫರ್ಟ್‌ 19 ರನ್‌, ರೋವ್ಮನ್‌ ಪೋವೆಲ್‌ 27 ರನ್‌, ರಮಣದೀಪ್‌ 17 ರನ್‌ ಗಳಿಸಿದ್ದು ಬಿಟ್ಟರೆ, ಉಳಿದೆಲ್ಲರೂ ಅಲ್ಪಮೊತ್ತಕ್ಕೆ ಔಟಾದರು.

[ad_2]

Source link publictv.in

Leave a Reply

Your email address will not be published. Required fields are marked *