Advertisement

ಸಿಎಸ್‌ಕೆ ವಿರುದ್ಧ 15 ಎಸೆತಗಳಲ್ಲಿ ಫಿಫ್ಟಿ – ತನ್ನದೇ ದಾಖಲೆ ಮುರಿದ ಅಭಿ

[ad_1]

ಹೈದರಾಬಾದ್‌: ಚೆನ್ನೈ ಸೂಪರ್‌ ಕಿಂಗ್ಸ್‌ (CSK) ವಿರುದ್ಧ ಇಂದು (ಶನಿವಾರ) ನಡೆದ ಪಂದ್ಯದಲ್ಲಿ ಸಿಡಿಲಬ್ಬರದ ಬ್ಯಾಟಿಂಗ್‌ ಪ್ರದರ್ಶಿಸಿದ ಅಭಿಷೇಕ್‌ ಶರ್ಮಾ (Abhishek Sharma) ತನ್ನದೇ ದಾಖಲೆ ಮುರಿದಿದ್ದಾರೆ.

ಟಾಸ್‌ ಸೋತು ಕ್ರೀಸ್‌ಗಿಳಿದ ಸನ್‌ರೈಸರ್ಸ್‌ ಹೈದರಾಬಾದ್ (SRH) ಪರ ಆರಂಭದಲ್ಲೇ ಸ್ಫೋಟಕ ಪ್ರದರ್ಶನ ನೀಡಿದ ಅಭಿಷೇಕ್‌ ಶರ್ಮಾ 15 ಎಸೆತಗಳಲ್ಲೇ ಫಿಫ್ಟಿ ಬಾರಿಸುವ ಮೂಲಕ ತಂಡದ ಪರ ವಿಶೇಷ ದಾಖಲೆ ನಿರ್ಮಿಸಿದ್ದಾರೆ. ಇದನ್ನೂ ಓದಿ: 26 ರನ್‌ ಹೊಡೆದರೂ ಐಪಿಎಲ್‌ನಲ್ಲಿ ವಿಶೇಷ ಸಾಧನೆ ಮಾಡಿದ ಟಿಮ್ ಡೇವಿಡ್‌

Abhishek Sharma

ಟಾಸ್‌ ಸೋತರೂ ಮೊದಲು ಬ್ಯಾಟ್ ಮಾಡಿದ ಎಸ್‌ಆರ್‌ಹೆಚ್‌ ತಂಡದ ಆರಂಭ ಭರ್ಜರಿಯಾಗಿತ್ತು. ಆರಂಭದಲ್ಲಿ ತಾಳ್ಮೆಯಿಂದ ಬ್ಯಾಟಿಂಗ್ ನಡೆಸಿದ ಜೋಡಿ ಬಳಿಕ ಆರ್ಭಟಿಸಿತು. ತಂಡದ ಪರ ಆರಂಭಿಕರಾದ ಟ್ರಾವಿಸ್ ಹೆಡ್ ಹಾಗೂ ಅಭಿಷೇಕ್‌ ಶರ್ಮಾ ಅಬ್ಬರದ ಆಟವಾಡಿದರು. ಈ ಜೋಡಿ 4 ಓವರ್‌ಗಳಲ್ಲಿ 38 ರನ್‌ ಗಳಿಸಿತ್ತು. ಆದರೆ 5ನೇ ಓವರ್ ಬೌಲ್ ಮಾಡಿದ ಮ್ಯಾಥ್ಯೂ ಶಾರ್ಟ್ 25 ರನ್‌ ನೀಡಿ ದುಬಾರಿಯಾದರು. ಈ ಮೂಲಕ ಹೈದರಾಬಾದ್ ತಂಡ 5 ಓವರ್‌ಗಳಲ್ಲಿ 63 ರನ್ ಗಳಿಸಿತು.

ರನ್‌ ಸುರಿಮಳೆ
ಶಾರ್ಟ್‌ ಮಾಡಿದ ತಮ್ಮ 2ನೇ ಓವರ್‌ನ ಮೊದಲ ಎಸೆತದಲ್ಲಿ ಟ್ರಾವಿಸ್ ಹೆಡ್‌ ಸಿಂಗಲ್ ರನ್ ಪಡೆದರು. ಬಳಿಕ ಅಭಿಷೇಕ್‌ ಶರ್ಮಾ ಹ್ಯಾಟ್ರಿಕ್‌ ಬೌಂಡರಿ, 2 ಸಿಕ್ಸರ್‌ ಬಾರಿಸಿ ಅಬ್ಬರಿಸಿದರು. ಈ ಮೂಲಕ ಅಭಿ ಕೇವಲ 15 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ತಮ್ಮದೇ ದಾಖಲೆಯನ್ನ ಮುರಿದರು. ಇದನ್ನೂ ಓದಿ: 26 ರನ್‌ ಹೊಡೆದರೂ ಐಪಿಎಲ್‌ನಲ್ಲಿ ವಿಶೇಷ ಸಾಧನೆ ಮಾಡಿದ ಟಿಮ್ ಡೇವಿಡ್‌

Abhishek Sharma

SRH ಪರ ವೇಗದ ಅರ್ಧಶತಕ ಗಳಿಸಿದ ಬ್ಯಾಟರ್‌ಗಳು

* 15 ಎಸೆತಗಳು – ಅಭಿಷೇಕ್ ಶರ್ಮಾ, ಸಿಎಸ್‌ಕೆ ವಿರುದ್ಧ
* 16 ಎಸೆತಗಳು – ಅಭಿಷೇಕ್ ಶರ್ಮಾ, ಮುಂಬೈ ವಿರುದ್ಧ
* 16 ಎಸೆತಗಳು – ಟ್ರಾವಿಸ್ ಹೆಡ್, ಡೆಲ್ಲಿ ವಿರುದ್ಧ
* 16 ಎಸೆತಗಳು – ಟ್ರಾವಿಸ್ ಹೆಡ್, ಎಲ್‌ಎಸ್‌ಜಿ ವಿರುದ್ಧ

ಈ ಹಿಂದೆ ಮುಂಬೈ ಇಂಡಿಯನ್ಸ್‌ ವಿರುದ್ಧ 16 ಎಸೆತಗಳಲ್ಲಿ ಫಿಫ್ಟಿ ಬಾರಿಸಿ ಟ್ರಾವಿಸ್‌ ಹೆಡ್‌ ದಾಖಲೆ ಸರಿಗಟ್ಟಿದ್ದ ಅಭಿಷೇಕ್‌, 15 ಎಸೆತಗಳಲ್ಲಿ ಬಾರಿಸಿ, ತನ್ನದೇ ದಾಖಲೆಯನ್ನ ಮುರಿದರು. ಇದನ್ನೂ ಓದಿ: ಫೋನ್ ಬಳಸಿ ಸಿಕ್ಕಿಬಿದ್ದ ಆರ್‌ಆರ್ ವ್ಯವಸ್ಥಾಪಕನಿಗೆ 1 ಲಕ್ಷ ದಂಡ – ಬಿಸಿಸಿಐ ವಾರ್ನಿಂಗ್



[ad_2]

Source link publictv.in

Leave a Reply

Your email address will not be published. Required fields are marked *