Advertisement

ಹೈದರಾಬಾದ್‌ನಲ್ಲಿ ಸನ್‌ ಶೈನ್‌ – ಸಿಎಸ್‌ಕೆ ವಿರುದ್ಧ 10 ರನ್‌ಗಳ ಸೂಪರ್‌ ಜಯ

[ad_1]

ಹೈದರಾಬಾದ್‌: ಸ್ಫೋಟಕ ಬ್ಯಾಟಿಂಗ್‌, ಸಂಘಟಿತ ಬೌಲಿಂಗ್‌ ದಾಳಿ ನೆರವಿನಿಂದ ಸನ್‌ ರೈಸರ್ಸ್‌ ಹೈದರಾಬಾದ್‌ ತಂಡವು ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ 10 ರನ್‌ಗಳ ರೋಚಕ ಗೆಲುವು ಸಾಧಿಸಿದೆ.

ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಎಸ್‌ಆರ್‌ಹೆಚ್‌ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 194 ರನ್‌ ಗಳಿಸಿತ್ತು. ಗೆಲುವಿಗೆ 195 ರನ್‌ಗಳ ಗುರಿ ಪಡೆದ ಸಿಎಸ್‌ಕೆ 8 ವಿಕೆಟ್‌ ನಷ್ಟಕ್ಕೆ 184 ರನ್‌ಗಳಷ್ಟೇ ಗಳಿಸಲು ಸಾಧ್ಯವಾಗಿ ಸೋಲೊಪ್ಪಿಕೊಂಡಿತು.

CSK 2 1

ಬೃಹತ್‌ ಮೊತ್ತದ ಚೇಸಿಂಗ್‌
195 ರನ್‌ಗಳ ಬೃಹತ್‌ ಗುರಿ ಬೆನ್ನಟ್ಟಿದ ಸಿಎಸ್‌ಕೆ ಆರಂಭದಲ್ಲೇ ಪ್ರಮುಖ ವಿಕೆಟ್‌ಗಳನ್ನ ಕಳೆದುಕೊಂಡಿತು. ಕಳೆದ 2 ಪಂದ್ಯಗಳಲ್ಲಿ ಭರ್ಜರಿ ಬ್ಯಾಟಿಂಗ್‌ ಮೂಲಕ ನಿರೀಕ್ಷೆ ಹೆಚ್ಚಿಸಿದ ಸಂಜು ಸ್ಯಾಮ್ಸನ್‌ ಕೇವಲ 7 ರನ್‌ಗಳಿಗೆ ವಿಕೆಟ್‌ ಒಪ್ಪಿಸಿ ಪೆವಿಲಿಯನ್‌ಗೆ ಮರಳಿದ್ರು. ಬಳಿಕ ಕ್ರೀಸ್‌ಗೆ ಬಂದ ಆಯುಷ್‌ ಮಾತ್ರೆ ಸ್ಫೋಟಕ ಪ್ರದರ್ಶನ ನೀಡುತ್ತಿದ್ದರು. ಗಾಯದ ಸಮಸ್ಯೆಗೆ ತುತ್ತಾದ ಬಳಿಕವೂ ಬ್ಯಾಟಿಂಗ್‌ಗೆ ಇಳಿದ್ದರು. ಆದ್ರೆ, 5ನೇ ಓವರ್‌ನಲ್ಲಿ ನಿತೀಶ್‌ ರೆಡ್ಡಿ ಎಸೆತದಲ್ಲಿ ಸಿಕ್ಸರ್‌ ಸಿಡಿಸಲು ಯತ್ನಿಸಿದ ಮ್ಹಾತ್ರೆ ಕ್ಲಾಸೆನ್‌ ಸ್ಟನಿಂಗ್‌ ಕ್ಯಾಚ್‌ನಿಂದ ಔಟಾದರು.

ಆಯುಷ್‌ ಮ್ಹಾತ್ರೆ ವಿಕೆಟ್‌ ಪತನದ ಬಳಿಕ ರನ್‌ ವೇಗ ಕಡಿತಗೊಂಡಿತು. ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳು ನಿರೀಕ್ಷಿತ ರನ್‌ ಗಳಿಸದೇ ಪೆವಿಲಿಯನ್‌ ಸೇರಿಕೊಂಡರು. ಮ್ಹಾತ್ರೆ 13 ಎಸೆತಗಳಲ್ಲಿ ಸ್ಫೋಟಕ 30 ರನ್‌ ಚಚ್ಚಿದ್ರೆ, ನಾಯಕ ರುತುರಾಜ್‌ 19 ರನ್‌, ಮ್ಯಾಥೀವ್‌ ಶಾರ್ಟ್‌ 34 ರನ್‌, ಸರ್ಫರಾಜ್‌ ಖಾನ್‌ 25 ರನ್‌, ಶಿವಂ ದುಬೆ 21 ರನ್‌ ಬಾರಿಸಿದ್ರೆ, ಸ್ಫೋಟಕ ಬ್ಯಾಟರ್‌ ಡೇವಾಲ್ಡ್‌ ಬ್ರೇವಿಸ್‌ ಶೂನ್ಯ ಸುತ್ತಿದರು.

CSK vs SRH

ಕೊನೆಯಲ್ಲಿ ಗೆಲುವಿಗಾಗಿ ಹೋರಾಟ ನಡೆಸಿದ ಜೇಮಿ ಓವರ್ನಟನ್‌ 16 ರನ್‌, ಅನ್ಶುಲ್‌ ಕಾಂಬೋಜ್‌ 13 ರನ್‌ ಗಳಿಸಿದ್ರೆ, ನೂರ್‌ ಅಹ್ಮದ್‌ ಅಜೇಯ 1 ರನ್‌ ಗಳಿಸಿದರು.

ಸ್ಪರ್ಧಾತ್ಮಕ ಗುರಿ
ಟಾಸ್‌ ಸೋತರೂ ಮೊದಲು ಬ್ಯಾಟ್ ಮಾಡಿದ ಸನ್‌ ರೈಸರ್ಸ್‌ ಹೈದರಾಬಾದ್‌ ತಂಡದ ಪರ ಟ್ರಾವಿಸ್ ಹೆಡ್ ಹಾಗೂ ಅಭಿಷೇಕ್ ಶರ್ಮಾ ಜೋಡಿ ಮೊದಲ ವಿಕೆಟ್‌ಗೆ 5.5 ಓವರ್‌ಗಳಲ್ಲಿ 75 ರನ್‌ ಕಾಣಿಕೆ ನೀಡಿತ್ತು. ನಾಯಕ ಇಶಾನ್‌ ಕಿಶನ್‌ ರನ್ ಕಲೆ ಹಾಕುವಲ್ಲಿ ವಿಫಲರಾದರು.

CSK 4

ಅಭಿಷೇಕ್ ಶರ್ಮಾ 22 ಎಸೆತಗಳಲ್ಲಿ 59 ರನ್‌ (6 ಬೌಂಡರಿ, 4 ಸಿಕ್ಸರ್) ಚಚ್ಚಿದ್ರೆ, ಮಧ್ಯಮ ಕ್ರಮಾಂಕದಲ್ಲಿ ಹೆನ್ರಿಕ್ ಕ್ಲಾಸೆನ್‌ ಜವಾಬ್ದಾರಿಯುತ ಇನ್ನಿಂಗ್ಸ್‌ ಕಟ್ಟಿದರು. ಕ್ಲಾಸೆನ್‌ 6 ಬೌಂಡರಿ, 2 ಸಿಕ್ಸರ್ ನೆರವಿನಿಂದ 59 ರನ್ ಬಾರಿಸಿದರು. ಅಂತಿಮವಾಗಿ ಸನ್‌ರೈಸರ್ಸ್ ತಂಡ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 194 ರನ್‌ ಸೇರಿಸಿತು.

ಸಿಎಸ್‌ಕೆ ಪರ ಅನ್ಶುಲ್ ಕಾಂಬೋಜ್, ಜೆಮಿ ಓವರ್‌ಟನ್‌ ತಲಾ 3 ವಿಕೆಟ್ ಕಿತ್ತರೇ, ಮುಖೇಶ್‌ ಚೌಧರಿ 2 ವಿಕೆಟ್‌ ಪಡೆದು ಮಿಂಚಿದರು.

[ad_2]

Source link publictv.in

Leave a Reply

Your email address will not be published. Required fields are marked *