Advertisement

ಅಮೆರಿಕದ ವಿರುದ್ಧ ಮುನೀರ್‌ ಡಬಲ್‌ಗೇಮ್‌ – ಟ್ರಂಪ್‌ಗೆ ಗುಪ್ತಚರ ಸಂಸ್ಥೆಯಿಂದ ಎಚ್ಚರಿಕೆ

[ad_1]

Donald Trump Asim Munir Shehbaz Sharif

ವಾಷಿಂಗ್ಟನ್‌: ಪಾಕಿಸ್ತಾನ ಸೇನಾ ಮುಖ್ಯಸ್ಥ ಅಸಿಮ್ ಮುನೀರ್(Asim Munir) ಅವರನ್ನು ಅಮೆರಿಕದ ಗುಪ್ತಚರ ಸಂಸ್ಥೆ ಮತ್ತು ಮಾಧ್ಯಮಗಳು ಅಮೆರಿಕ ಆಡಳಿತಕ್ಕೆ ಒಂದು ‘ರೆಡ್ ಫ್ಲಾಗ್’ (ಎಚ್ಚರಿಕೆಯ ಸಂಕೇತ) ಎಂದು ಬಣ್ಣಿಸಿವೆ.

ಮುನೀರ್ ಅವರು ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ನಾಯಕತ್ವದೊಂದಿಗೆ ವೈಯಕ್ತಿಕ ಮತ್ತು ಹಳೆಯ ಸ್ನೇಹ ಹೊಂದಿದ್ದಾರೆ ಎನ್ನುವುದು ಅಮೆರಿಕದ (USA) ಆತಂಕಕ್ಕೆ ಮುಖ್ಯ ಕಾರಣ. ಬಹಳ ಮುಖ್ಯವಾಗಿ ಹತ್ಯೆಯಾದ ಇರಾನ್ ಕಮಾಂಡರ್ ಖಾಸಿಂ ಸುಲೈಮಾನಿ ಮತ್ತು ಪ್ರಸ್ತುತ ಕಮಾಂಡರ್ ಹೊಸೈನ್ ಸಲಾಮಿ ಅವರೊಂದಿಗೆ ಮುನೀರ್‌ಗೆ ನಿಕಟ ಸಂಬಂಧವಿದೆ ಎಂದು ವರದಿಯಾಗಿದೆ.

ಮುನೀರ್ ಅವರು ಇರಾನ್(Iran) ನಾಯಕರ ಭೇಟಿಯ ಸಮಯದಲ್ಲಿ ಸೇನಾ ಸಮವಸ್ತ್ರ ಧರಿಸುವುದು ಮತ್ತು ಅಮೆರಿಕದ ಜೊತೆಗಿನ ಮಾತುಕತೆಗಳಲ್ಲಿ ಸೂಟ್‌ ಧರಿಸುವುದು ಅವರ “ದ್ವಂದ್ವ ಮುಖ”ವನ್ನು ತೋರಿಸುತ್ತದೆ ಎಂದು ವಿಶ್ಲೇಷಿಸಲಾಗಿದೆ.

Pakistan Asim Munir USA Iran

ಅಫ್ಘಾನಿಸ್ತಾನ(Afghanistan) ವಿರುದ್ಧ ಯುದ್ಧದ ಸಂದದರ್ಭದಲ್ಲಿ ಅಮೆರಿಕದ ಮಿತ್ರನಂತೆ ನಟಿಸಿದರೂ ಪಾಕಿಸ್ತಾನ ತಾಲಿಬಾನ್‌ಗೆ(Taliban) ಬೆಂಬಲ ನೀಡಿತ್ತು. ಬಹಳ ಮುಖ್ಯವಾಗಿ ಒಸಾಮಾ ಬಿನ್ ಲಾಡೆನ್ ಪಾಕಿಸ್ತಾನದ ಅಬೋಟಾಬಾದ್‌ನಲ್ಲಿ ನೆಲೆಸಿದ್ದ. ಇದೇ ರೀತಿ ಮುನೀರ್ ಅವರೂ ಕೂಡ ಅಮೆರಿಕಕ್ಕೆ ದ್ರೋಹ ಎಸಗಬಹುದು ಎಂದು ವಿಶ್ಲೇಷಕರು ಎಚ್ಚರಿಸಿದ್ದಾರೆ.

ಅಮೆರಿಕ ಮತ್ತು ಇರಾನ್ ನಡುವೆ ಸಂಧಾನಕಾರನಂತೆ ನಟಿಸುತ್ತಲೇ, ಮುನೀರ್ ಅವರು ಇರಾನ್‌ನ ಹಿತಾಸಕ್ತಿಗಳನ್ನು ರಕ್ಷಿಸಬಹುದು ಎಂದು ಅಮೆರಿಕದ ಭದ್ರತಾ ತಜ್ಞರು ಎಚ್ಚರಿಸಿದ್ದಾರೆ. ಸಂಧಾನಕಾರರಾಗಿ ಅವರು ಕಾರ್ಯನಿರ್ವಹಿಸುತ್ತಿದ್ದರೂ, ಮುನೀರ್ ಅವರನ್ನು ನಂಬುವುದು ಅಪಾಯಕಾರಿ ಎಂದು ಪರಿಗಣಿಸಿವೆ. ಮುನೀರ್ ಅವರನ್ನು ಸಂಭಾವ್ಯ ಅಪಾಯಕಾರಿ ವ್ಯಕ್ತಿ ಎಂದು ಗುರುತಿಸಲಾಗಿದೆ. ಇದನ್ನೂ ಓದಿ: Explainer| ದಲ್ಲಾಳಿ ಕೆಲಸಕ್ಕೆ ಪಾಕಿಸ್ತಾನವನ್ನೇ ಟ್ರಂಪ್‌ ಆಯ್ಕೆ ಮಾಡಿದ್ದು ಯಾಕೆ?

ಡೊನಾಲ್ಡ್‌ ಟ್ರಂಪ್‌ (Donald Trump) ಅವರು ಅಸಿಮ್ ಮುನೀರ್‌ ಅವರನ್ನು “ನನ್ನ ನೆಚ್ಚಿನ ಫೀಲ್ಡ್ ಮಾರ್ಷಲ್” ಮತ್ತು ಒಬ್ಬ ಅದ್ಭುತ ಹೋರಾಟಗಾರ ಎಂದು ಹಲವು ಬಾರಿ ಬಹಿರಂಗವಾಗಿ ಹೊಗಳಿದ್ದಾರೆ. ಮುನೀರ್‌ ಅವರನ್ನು ಟ್ರಂಪ್‌ ಹೊಗಳಿದರೂ ಅಮೆರಿಕದ ಗುಪ್ತಚರ ಇಲಾಖೆ ಮಾತ್ರ ಮುನೀರ್‌ ಅವರ ಇರಾನ್ ಸ್ನೇಹವನ್ನು ಸಂಶಯದ ಕಣ್ಣಿನಿಂದ ನೋಡುತ್ತಿದೆ.

ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಮುನೀರ್ ಅವರು ಶಹಬಾಜ್ ಷರೀಫ್ ಅವರೊಂದಿಗೆ ವೈಟ್ ಹೌಸ್‌ನಲ್ಲಿ ಟ್ರಂಪ್‌ ಅವರನ್ನು ಭೇಟಿ ಮಾಡಿದ್ದರು. ಇತ್ತೀಚಿನ ವರದಿಗಳ ಪ್ರಕಾರ ಅಮೆರಿಕ ಮತ್ತು ಇರಾನ್ ನಡುವಿನ ಬಿಕ್ಕಟ್ಟನ್ನು ಬಗೆಹರಿಸಲು ಮುನೀರ್‌ ಅವರು ಟ್ರಂಪ್‌ ಆಡಳಿತದ ಪರವಾಗಿ ಬ್ಯಾಕ್-ಚಾನಲ್ ಸಂಧಾನಕಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

[ad_2]

Source link publictv.in

Leave a Reply

Your email address will not be published. Required fields are marked *