Advertisement

ಅಥಣಿಯಲ್ಲಿ ಗಾಳಿ ಮಳೆ ಅಬ್ಬರ – ಧರೆಗುರುಳಿದ 40ಕ್ಕೂ ಹೆಚ್ಚು ವಿದ್ಯುತ್‌ ಕಂಬಗಳು

[ad_1]

more than 40 electric poles have been broken due to wind and rain in athani

ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ಅಥಣಿ (Athani) ತಾಲೂಕಿನಲ್ಲಿ ಅಕಾಲಿಕ‌ ಮಳೆ ಅವಾಂತರ ಸೃಷ್ಟಿಸಿದೆ. ಬಿರುಗಾಳಿ ಮಳೆ (Rain) ಅಬ್ಬರಕ್ಕೆ ತಾಲೂಕಿನ ಬೇವನೂರ ಗ್ರಾಮದಲ್ಲಿ 40ಕ್ಕೂ ಅಧಿಕ ಕಂಬಗಳು (Electric Poles) ಧರೆಗುರಳಿವೆ. ಪರಿಣಾಮ ತಾಲೂಕಿನ ವಿವಿಧ ಭಾಗಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದೆ.

ಹಲವೆಡೆ ಆಲಿಕಲ್ಲು ಸಹಿತ ಮಳೆಯಾಗಿದೆ. ಕೊಹಳ್ಳಿ ಗ್ರಾಮದಲ್ಲಿ ರಸ್ತೆ ಮಧ್ಯೆ ಮರ ಬಿದ್ದಿದೆ. ಗಾಳಿಯ ಅಬ್ಬರಕ್ಕೆ ಗ್ರಾಮದ ಶಾಲೆಯ ಮೇಲ್ಛಾವಣಿ ಕಿತ್ತು ಹೋಗಿದೆ. ತಾಲೂಕಿನ, ತಾವಂಶಿ, ಮದಭಾವಿ, ಮಲಬಾದ ಸೇರಿದಂತೆ ಹಲವು ಗ್ರಾಮಗಳಲ್ಲಿ ಆಲಿಕಲ್ಲು ಮಳೆಯಾಗಿದೆ. ಇದನ್ನೂ ಓದಿ: ಉರಿಬಿಸಿಲಿನ ಮಧ್ಯೆಯೂ ಏ.21ರವರೆಗೆ ರಾಜ್ಯದ ಹಲವೆಡೆ ಮಳೆ ಮುನ್ಸೂಚನೆ

ಚಿಕ್ಕೋಡಿ, ಹುಕ್ಕೇರಿ ತಾಲೂಕುಗಳಲ್ಲೂ ಅಬ್ಬರದಿಂದ ಮಳೆ ಸುರಿದಿದೆ. ಬಿಸಿಲಿನಿಂದ ಕಂಗೆಟ್ಟ ಜನ ಮಳೆಯಿಂದಾಗಿ ನಿಟ್ಟುಸಿರು ಬಿಟ್ಟಿದ್ದಾರೆ. ಇದನ್ನೂ ಓದಿ: ಕಾಫಿನಾಡು, ಮಲೆನಾಡಲ್ಲಿ ತಡರಾತ್ರಿ ಭಾರೀ ಮಳೆ – ಧರೆಗುರುಳಿದ ವಿದ್ಯುತ್‌ ಕಂಬ, ಮರಗಳು


[ad_2]

Source link publictv.in

Leave a Reply

Your email address will not be published. Required fields are marked *