Advertisement

ತುಮ್ಹಾರ ಫೋನ್ ನಂಬರ್ ದೇದೋ ಎಂದ ಯುವಕನಿಗೆ ಚಪ್ಪಲಿಯಿಂದ ಹೊಡೆದ ಮಹಿಳೆ

[ad_1]

ಹುಬ್ಬಳ್ಳಿ: ತುಮ್ಹಾರ ಫೋನ್ ನಂಬರ್ ದೇದೋ ಎಂದ ಯುವಕನಿಗೆ ಮಹಿಳೆಯೊಬ್ಬರು ಹಿಗ್ಗಾಮುಗ್ಗಾ ಚಪ್ಪಲಿಯಿಂದ ಹೊಡೆದಿರುವ ಘಟನೆ ಹುಬ್ಬಳ್ಳಿ ಶಿಗ್ಗಾಂವ್ ಪಾರ್ಕ್‌ನ ಗ್ಯಾರೇಜ್ ಬಳಿ ನಡೆದಿದೆ.

ಉತ್ತರ ಪ್ರದೇಶ ಮೂಲದ ಸಲೂನ್ ಅಂಗಡಿ ನಡೆಸುತ್ತಿದ್ದ ಫಾರೂಕ್ ಜಮೀಲ್ ಅಹ್ಮದ್ ಚಪ್ಪಲಿ ಏಟು ತಿಂದವನು. ಮಹಿಳೆಯ ಹಿಂದೆ-ಮುಂದೆ ಓಡಾಡುವುದಲ್ಲದೇ, ಬೈಕ್ ಮನೆಯ ಮುಂದೆ ನಿಲ್ಲಿಸುತ್ತಿದ್ದ. ಇದನ್ನೂ ಓದಿ:  ಭಾರತದ ಅತಿದೊಡ್ಡ ಬಯೋ-ಗ್ಯಾಸ್ ಯೋಜನೆ ಅನುಷ್ಠಾನಕ್ಕೆ ಬೆಂಗಳೂರು ಜಲಮಂಡಳಿ ಸಜ್ಜು

ಮಕ್ಕಳು ಕರಾಟೆ ಕ್ಲಾಸ್‌ಗೆ ಹೋದಾಗ ಹಿಂಬಾಲಿಸಿದ್ದ. ಮನೆಯೊಳಗೆ ಇಣುಕಿ ನೋಡುತ್ತಿದ್ದ. ಇದರಿಂದ ರೋಸಿಹೋಗಿದ್ದ ಮಹಿಳೆಯು ಮಕ್ಕಳನ್ನು ಕರಾಟೆ ಕ್ಲಾಸ್‌ನಿಂದ ಮನೆಗೆ ಕರೆತಂದಾಗ ಫಾರೂಕ್ ಮಹಿಳೆಯ ಮನೆಯ ಹತ್ತಿರ ಬಂದು ‘ತುಮ್ಹಾರ ಫೋನ್ ನಂಬರ್ ದೇದೋ’ ಎಂದು ಮೈಮೇಲೆ ಬೀಳಲು ಯತ್ನಿಸಿದ್ದ.

ಈತನ ಕಿರುಕುಳದಿಂದ ಮೊದಲೇ ರೋಸಿಹೋಗಿದ್ದ ಮಹಿಳೆ ಇಂದು ಯುವಕನಿಗೆ ಗೂಸಾ ಕೊಟ್ಟಿದ್ದಾರೆ. ಸ್ಥಳೀಯರು ಫಾರೂಕ್‌ನನ್ನು ಪೊಲೀಸರಿಗೆ ಒಪ್ಪಿಸಿದ್ದು, ವಿದ್ಯಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

[ad_2]

Source link publictv.in

Leave a Reply

Your email address will not be published. Required fields are marked *