Advertisement

ಹುಬ್ಬಳ್ಳಿಯಲ್ಲಿ ತಪ್ಪಿತು ದುರಂತ – 4 ಗಂಟೆ ಆಗಸದಲ್ಲೇ ಫ್ಲೈಟ್‌ ಸುತ್ತಾಟ – ಆತಂಕದಲ್ಲಿ ಪ್ರಯಾಣಿಕರ ಕಣ್ಣೀರು

[ad_1]

FLY91 hubballi technical issue

– ತಾಂತ್ರಿಕ ದೋಷದಿಂದ ಕಂಟ್ರೋಲ್‌ ಕಳೆದಕೊಂಡಿದ್ದ ವಿಮಾನ

ಹುಬ್ಬಳ್ಳಿ: ತಾಂತ್ರಿಕ ದೋಷದಿಂದ ನಿಯಂತ್ರಣ ಕಳೆದುಕೊಂಡು 4 ಗಂಟೆಗಳ ಕಾಲ ವಿಮಾನ ಆಗಸದಲ್ಲೇ ಸುತ್ತಾಟ ನಡೆಸಿದ್ದು, ಹುಬ್ಬಳ್ಳಿಯಲ್ಲಿ (Hubballi) ಮಹಾ ದುರಂತವೊಂದು ತಪ್ಪಿದೆ.

Fly91 ಏರ್‌ಲೈನ್ಸ್ IC3401( ATRTURBOPROP AT7) ಸಂಖ್ಯೆ ಫ್ಲೈಟ್‌ ಹೈದರಾಬಾದ್‌ನಿಂದ ಹುಬ್ಬಳ್ಳಿಗೆ ಹೊರಟಿತ್ತು. ನಿನ್ನೆ ಮಧ್ಯಾಹ್ನ 3 ಗಂಟೆ ಹೈದರಾಬಾದ್ ರಾಜೀವ್ ಗಾಂಧಿ ಇಂಟರ್ ನ್ಯಾಷನಲ್ ವಿಮಾನ ನಿಲ್ದಾಣದಿಂದ ಟೇಕಾಫ್‌ ಆಗಿತ್ತು. ಸಂಜೆ 4:30 ಕ್ಕೆ ಹುಬ್ಬಳ್ಳಿಯಲ್ಲಿ ಲ್ಯಾಂಡ್ ಆಗಬೇಕಿತ್ತು. ಆದರೆ, ಹುಬ್ಬಳ್ಳಿ ಸಮೀಪಿಸುತ್ತಿದ್ದಂತೆ ಏಕಾಏಕಿ ತಾಂತ್ರಿಕ ದೋಷದಿಂದ ವಿಮಾನ ನಿಯಂತ್ರಣ ಕಳೆದುಕೊಂಡಿತು. ಹುಬ್ಬಳ್ಳಿಯಲ್ಲಿ ಲ್ಯಾಂಡ್ ಆಗದೇ ಸುಮಾರು ನಾಲ್ಕು ಗಂಟೆ ಆಗಸದಲ್ಲಿಯೇ ಮುಂಡಗೋಡ, ದಾವಣಗೆರೆ, ಶಿವಮೊಗ್ಗದಲ್ಲಿ ಸುತ್ತಾಟ ನಡೆಸಿದೆ. ಎಲ್ಲಿಯೂ ಫ್ಲೈಟ್‌ ಲ್ಯಾಂಡ್‌ ಆಗಲಿಲ್ಲ. ಕೊನೆಗೆ ಸಂಜೆ 7:30 ಕ್ಕೆ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ವಿಮಾನ ಲ್ಯಾಂಡ್‌ ಆಗಿದೆ. ಇದನ್ನೂ ಓದಿ: ಬಿರು ಬೇಸಿಗೆಗೆ ಬತ್ತುತ್ತಿವೆ ಬೆಂಗಳೂರಿನ ಪ್ರಮುಖ ಕೆರೆಗಳು – ನಾಲ್ಕೈದು ಅಡಿ ಕುಸಿದ ನೀರಿನ ಮಟ್ಟ

ಇದರಿಂದ ಕಂಗಾಲಾದ ಪ್ರಯಾಣಿಕರು, ಫ್ಲೈಟ್‌ನಲ್ಲಿಯೇ ದೇವರಿಗೆ ಕೈಮುಗಿದು ಬೇಡಿಕೊಂಡು ಕಣ್ಣೀರಿಟ್ಟಿದ್ದರು. 4 ಗಂಟೆ ಜೀವ ಕೈಯಲ್ಲಿ ಹಿಡಿದುಕೊಂಡು ಪ್ರಯಾಣಿಕರು ವಿಮಾನದಲ್ಲಿದ್ದರು. ನಾವಿನ್ನು ಜೀವಂತವಾಗಿ ಬರೋದು ಅನುಮಾನ ಅಂತ ಕುಟುಂಬಸ್ಥರಿಗೆ ಮೊಬೈಲ್‌ನಲ್ಲಿ ಸಂದೇಶ ಕಳುಹಿಸಿದ್ದರು. ಮತ್ತೊಂದು ಕಡೆ Fly91 ಏರ್‌ಲೈನ್ಸ್ ವಿರುದ್ಧ ಪ್ರಯಾಣಿಕರ ಕುಟುಂಬಸ್ಥರು ಅಸಮಾಧಾನಗೊಂಡಿದ್ದರು. ಫ್ಲೈಟ್ ಘಟನೆ ಬಗ್ಗೆ ಯಾವುದೇ ಮಾಹಿತಿ ನೀಡದೆ ನಿರ್ಲಕ್ಷ್ಯ ತೋರಿದ್ದಾರೆಂದು ಆರೋಪಿಸಿ ಕಿಡಿಕಾರಿದ್ದರು.

[ad_2]

Source link publictv.in

Leave a Reply

Your email address will not be published. Required fields are marked *