Advertisement

ಮಧ್ಯಪ್ರಾಚ್ಯ ದೇಶಗಳ ಯುದ್ಧದ ಎಫೆಕ್ಟ್: ಪಾತಾಳಕ್ಕೆ ಕುಸಿದ ಈರುಳ್ಳಿ ಬೆಲೆ

[ad_1]

– 6 ಕೆಜಿ 100 ರೂ.; ರೈತರ ಕಣ್ಣಲ್ಲಿ ನೀರು ತರಿಸಿದ ಈರುಳ್ಳಿ

ರಾಯಚೂರು: ಮಧ್ಯಪ್ರಾಚ್ಯ ದೇಶಗಳ ಯುದ್ದದ ಎಫೆಕ್ಟ್ ರಾಯಚೂರು (Raichuru) ಜಿಲ್ಲೆಯ ಈರುಳ್ಳಿ ಬೆಳೆಗಾರರಿಗೂ ತಟ್ಟಿದೆ. ಟೊಮ್ಯಾಟೊ ಬೆಲೆ ಸ್ವಲ್ಪ ಚೇತರಿಸಿಕೊಳ್ಳುತ್ತಿದ್ದರೆ, ಈರುಳ್ಳಿ (Onion Price) ಬೆಲೆ ಪಾತಾಳಕ್ಕೆ ಕುಸಿಯುತ್ತಿದೆ.

ಸೊಲ್ಲಾಪುರ ಸೇರಿ ಮಹಾರಾಷ್ಟ್ರ ಈರುಳ್ಳಿ ವಿದೇಶಕ್ಕೆ ರಫ್ತಾಗದ ಹಿನ್ನೆಲೆ ರಾಯಚೂರು ಜಿಲ್ಲೆಯಲ್ಲಿ ಬೆಳೆದ ಈರುಳ್ಳಿ ಬೇಡಿಕೆ ಕುಸಿತವಾಗುತ್ತಿದೆ. ಹೊರ ರಾಜ್ಯಗಳ ಖರೀದಿದಾರರು, ದಲ್ಲಾಳಿಗಳು ಬಾರದ ಹಿನ್ನೆಲೆ ಬೆಲೆ ಕುಸಿಯುತ್ತಿದ್ದು, ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ 600 ರಿಂದ 800 ರೂಪಾಯಿಗೆ ಕ್ವಿಂಟಾಲ್ ಈರುಳ್ಳಿ ಮಾರಾಟವಾಗುತ್ತಿದೆ. ಇದನ್ನೂ ಓದಿ: ಹಾರ್ಮುಜ್‌ ಆಯ್ತು, ಈಗ ಮಲಕ್ಕಾ ಟಾರ್ಗೆಟ್‌? – ಭಾರತ, ಚೀನಾ ಬುಡಕ್ಕೆ ಬಂತ ಅಮೆರಿಕಾ?

ಕಡಿಮೆ ಗುಣಮಟ್ಟದ ಈರುಳ್ಳಿಯನ್ನ ಕೇಳುವವರೇ ಇಲ್ಲದ ಪರಸ್ಥಿತಿ ಎದುರಾಗಿದೆ. ತರಕಾರಿ ಮಾರುಕಟ್ಟೆಯಲ್ಲಿ 100 ರೂಪಾಯಿಗೆ 6 ಕೆಜಿ ಈರುಳ್ಳಿ ಮಾರಾಟವಾಗುತ್ತಿದೆ.

ಎಕರೆಗೆ 50 ರಿಂದ 60 ಸಾವಿರ ರೂ. ಖರ್ಚು ಮಾಡಿ ಈರುಳ್ಳಿ ಬೆಳೆದ ರೈತರ ಕಣ್ಣಲ್ಲಿ ನೀರು ಬರುತ್ತಿದೆ. ಮಾರುಕಟ್ಟೆಗೆ ಈರುಳ್ಳಿ ಸಾಗಣೆ ಮಾಡುವ ವೆಚ್ಚವೂ ಸಹ ವಾಪಸ್ ಬರುತ್ತಿಲ್ಲ ಅಂತ ರೈತರ ಅಳಲು ತೋಡಿಕೊಂಡಿದ್ದಾರೆ. ಸರ್ಕಾರ ಬೆಂಬಲ ಬೆಲೆ ಘೋಷಿಸಿ ಈರುಳ್ಳಿ ಖರೀದಿಸುವಂತೆ ರೈತರು ಒತ್ತಾಯಿಸುತ್ತಿದ್ದಾರೆ. ಇದನ್ನೂ ಓದಿ: ಹಾರ್ಮುಜ್‌ನಿಂದ ಹೈವೇವರೆಗೆ – ಇರಾನ್‌ ಯುದ್ಧದಿಂದ ಭಾರತದ ಹೆದ್ದಾರಿ ಯೋಜನೆಯಲ್ಲೂ ಸಮಸ್ಯೆ

[ad_2]

Source link publictv.in

Leave a Reply

Your email address will not be published. Required fields are marked *