Advertisement

ಉತ್ತರ ಜಪಾನ್‌ನಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ – ಸುನಾಮಿ ಎಚ್ಚರಿಕೆ

[ad_1]

japan earthquake

ಟೋಕಿಯೊ: ಉತ್ತರ ಜಪಾನ್‌ನಲ್ಲಿ (Japan Earthquake) ಸೋಮವಾರ 7.4 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ ಎಂದು ಜಪಾನ್‌ನ ಹವಾಮಾನ ಸಂಸ್ಥೆ (ಜೆಎಂಎ) ತಿಳಿಸಿದೆ. ಮೂರು ಮೀಟರ್ (10 ಅಡಿ) ಎತ್ತರದ ಅಲೆಗಳ ಸುನಾಮಿ ಎಚ್ಚರಿಕೆ ನೀಡಿದೆ.

ಉತ್ತರ ಇವಾಟೆ ಪ್ರಾಂತ್ಯದ ಪೆಸಿಫಿಕ್ ಸಮುದ್ರದಲ್ಲಿ ಸಂಜೆ 4:53 ಕ್ಕೆ ಭೂಕಂಪ ಸಂಭವಿಸಿದೆ. ನೂರಾರು ಕಿಲೋಮೀಟರ್ ದೂರದಲ್ಲಿರುವ ಟೋಕಿಯೊದವರೆಗಿನ ದೊಡ್ಡ ಕಟ್ಟಡಗಳು ಕಂಪಿಸುವಷ್ಟು ಪ್ರಬಲವಾಗಿತ್ತು. ಇದನ್ನೂ ಓದಿ: ತೀವ್ರಗೊಂಡ ಇರಾನ್ ಸಂಘರ್ಷ – ತೈಲ ವ್ಯಾಪಾರಕ್ಕೆ ಡಾಲರ್ ಬದಲು ಯುವಾನ್ ಬಳಕೆಗೆ UAE ಚಿಂತನೆ

ಆರಂಭಿಕ ಸುನಾಮಿ ಅಲೆಗಳು ಉತ್ತರ ಕರಾವಳಿಯನ್ನು ತಕ್ಷಣವೇ ತಲುಪಬಹುದು ಎಂದು ಹವಾಮಾನ ಸಂಸ್ಥೆ ತಿಳಿಸಿದೆ. ಸುನಾಮಿ ಅಲೆಗಳಿಂದ ಹಾನಿಯಾಗುವ ನಿರೀಕ್ಷೆಯಿದೆ. ತಕ್ಷಣ ಸುರಕ್ಷಿತ ಪ್ರದೇಶಗಳಿಗೆ ತೆರಳುವಂತೆ ಜನರಿಗೆ ಎಚ್ಚರಿಕೆ ನೀಡಲಾಗಿದೆ.

ವಿಶ್ವದ ಭೂಕಂಪ ಪೀಡಿತ ದೇಶಗಳಲ್ಲಿ ಜಪಾನ್‌ ಕೂಡ ಒಂದು. ಪೆಸಿಫಿಕ್ ‘ರಿಂಗ್ ಆಫ್ ಫೈರ್’ನ ಪಶ್ಚಿಮ ಅಂಚಿನಲ್ಲಿರುವ ನಾಲ್ಕು ಪ್ರಮುಖ ಟೆಕ್ಟೋನಿಕ್ ಪ್ಲೇಟ್‌ಗಳ ಮೇಲ್ಭಾಗದಲ್ಲಿ ಜಪಾನ್ ಇದೆ. ಹೀಗಾಗಿ, ದೇಶದಲ್ಲಿ ನಿರಂತರವಾಗಿ ಭೂಕಂಪವಾಗುತ್ತಿರುತ್ತದೆ. ಇದನ್ನೂ ಓದಿ: ಹಾರ್ಮುಜ್‌ನಲ್ಲಿ ಗುಂಡಿನ ಮೊರೆತ – ಇರಾನ್‌ ಹಡಗಿನ ಮೇಲೆ ಅಮೆರಿಕ ದಾಳಿ

ಸುಮಾರು 12.5 ಕೋಟಿ ಜನರಿಗೆ ನೆಲೆಯಾಗಿರುವ ಈ ದ್ವೀಪಸಮೂಹವು ಪ್ರತಿ ವರ್ಷ ಸುಮಾರು 1,500 ಕಂಪನಗಳನ್ನು ಅನುಭವಿಸುತ್ತದೆ. ವಿಶ್ವದ ಭೂಕಂಪಗಳಲ್ಲಿ ಸುಮಾರು 18%ನಷ್ಟು ಇಲ್ಲೇ ಸಂಭವಿಸುತ್ತದೆ. 2011 ರಲ್ಲಿ ಜಪಾನ್‌ನಲ್ಲಿ 9.0 ತೀವ್ರತೆಯ ಭೂಕಂಪವು ಸುನಾಮಿಗೆ ಕಾರಣವಾಗಿತ್ತು. ಇದು 18,500 ಜನರನ್ನು ಬಲಿ ತೆಗೆದುಕೊಂಡಿತ್ತು.

[ad_2]

Source link publictv.in

Leave a Reply

Your email address will not be published. Required fields are marked *