Advertisement

ಮತ್ತೆ ಯುದ್ಧದ ಭೀತಿ, ಮಾತುಕತೆ ನಡೆಯೋದೇ ಡೌಟ್‌ – ಇರಾನ್ ನೌಕೆ ವಶಕ್ಕೆ ಪಡೆದ ಅಮೆರಿಕ

[ad_1]

donald trump iran supreme leader

ನಾಳಿನ ಮಾತುಕತೆಗೆ ಒಪ್ಪದ ತೆಹ್ರಾನ್‌

ವಾಷಿಂಗ್ಟನ್‌/ಇಸ್ಲಾಮಾಬಾದ್‌/ಟೆಹ್ರಾನ್‌: ಇಸ್ರೇಲ್-ಅಮೆರಿಕ-ಇರಾನ್ (Isreal-USA-Iran) ನಡುವಿನ ಯುದ್ಧ ಮತ್ತೆ ಆರಂಭವಾಗುವ ಎಲ್ಲಾ ಲಕ್ಷಣಗಳು ಕಾಣಿಸಲು ಆರಂಭವಾಗಿದೆ. ಕದನ ವಿರಾಮಕ್ಕೆ ಒಪ್ಪದೇ ಇದ್ದರೆ ಇರಾನ್‌ ಸರ್ವನಾಶ ಮಾಡುತ್ತೇವೆ ಎಂದು ಟ್ರಂಪ್‌ (Donald Trump) ಗುಡುಗಿದ್ದಾರೆ.

ಇಸ್ಲಾಮಾಬಾದ್‌ನಲ್ಲಿ ನಿಗದಿಯಾಗಿರುವ ಎರಡನೇ ಸುತ್ತಿನ ಮಹತ್ವದ ಮಾತುಕತೆಯನ್ನೂ ಇರಾನ್ ಅಧಿಕೃತವಾಗಿ ತಿರಸ್ಕಾರ ಮಾಡಿದೆ. ಅಮೆರಿಕದ ಅತಿಯಾದ ಬೇಡಿಕೆಗಳು, ನೌಕಾ ದಿಗ್ಬಂಧನವೇ ಈ ಬಿಕ್ಕಟ್ಟಿಗೆ ಕಾರಣ ಎಂದು ಇರಾನ್ ಹೇಳಿದೆ.

ಅಮೆರಿಕ ಜೊತೆ ಯಾವುದೇ ಮಾತುಕತೆಯ ಯೋಜನೆ ಇಲ್ಲ. ಮೊದಲಿಂದಲೂ ಅಮೆರಿಕ ಕದನ ವಿರಾಮ ಉಲ್ಲಂಘಿಸುತ್ತಿದೆ. ನಾವು ಯುದ್ಧವನ್ನು ಬಯಸುವುದಿಲ್ಲ ಎಂದು ಇರಾನ್ ಅಧ್ಯಕ್ಷ ಪೆಜೆಶ್ಕಿಯಾನ್ ಗುಡುಗಿದ್ದಾರೆ. ಹೀಗಾಗಿ ಇಸ್ಲಾಮಾಬಾದ್‌ನಲ್ಲಿ ನಾಳೆ ನಡೆಯಬೇಕಿರುವ ಎರಡನೇ ಸುತ್ತಿನ ಶಾಂತಿ-ಸಧಾನ ಸಭೆ ನಡೆಯೋದು ಬಹುತೇಕ ಸಂದೇಹವಾಗಿದೆ. ಇದನ್ನೂ ಓದಿ: ಹಾರ್ಮುಜ್‌ನಿಂದ ಹೈವೇವರೆಗೆ – ಇರಾನ್‌ ಯುದ್ಧದಿಂದ ಭಾರತದ ಹೆದ್ದಾರಿ ಯೋಜನೆಯಲ್ಲೂ ಸಮಸ್ಯೆ

 

ಮಾತುಕತೆಗಾಗಿ ಇಸ್ಲಾಮಾಬಾದ್‌ನಲ್ಲಿ(Ceasefire ರೆಡ್ ಝೋನ್ ಜಾರಿ ಮಾಡಲಾಗಿದೆ. ಸರ್ಕಾರಿ ಕಚೇರಿ, ಶಾಲಾ, ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ನೌಕರರಿಗೆ ಮನೆಯಿಂದಲೇ ಕೆಲಸ ಮಾಡಲು ಸೂಚನೆ ನೀಡಲಾಗಿದೆ. ಹಾರ್ಮುಜ್‌ಗೆ ನಿರ್ಬಂಧ ಹಾಕಿರೋದಕ್ಕೆ ಯುಎಇ ಕಿಡಿಕಾರಿದೆ. 600 ಮಿಲಿಯನ್ ಬ್ಯಾರೆಲ್ ತೈಲ ಸಿಲುಕಿಕೊಂಡಿದೆ. ಹೊರ್ಮುಜ್ ಜಲಸಂಧಿ ಇಡೀ ವಿಶ್ವಕ್ಕೆ ಸೇರಿದ್ದು, ಶೀಘ್ರವೇ ಜಲಸಂಧಿ ತೆರೆಯಿರಿ ಅಂತ ಯುಎಇ ಹೇಳಿದೆ.  ಇದನ್ನೂ ಓದಿ: ತೀವ್ರಗೊಂಡ ಇರಾನ್ ಸಂಘರ್ಷ – ತೈಲ ವ್ಯಾಪಾರಕ್ಕೆ ಡಾಲರ್ ಬದಲು ಯುವಾನ್ ಬಳಕೆಗೆ UAE ಚಿಂತನೆ

ಹಡಗು ವಶಕ್ಕೆ:
ಒಮಾನ್ ಕೊಲ್ಲಿಯಲ್ಲಿ ಇರಾನ್‌ನ ಸರಕು ಹಡಗು `ಟೌಸ್ಕಾ’ವನ್ನು ಅಮೆರಿಕ ನೌಕಾಪಡೆ ವಶಕ್ಕೆ ಪಡೆದಿದೆ. ಇದಕ್ಕೆ ಪ್ರತಿಯಾಗಿ ಅಮೆರಿಕ ನೌಕಾಪಡೆ ಮೇಲೆ ಇರಾನ್ ದಾಳಿ ಮಾಡಿದೆ. ಹೊರ್ಮುಜ್ ಜಲಸಂಧಿಯಲ್ಲಿ ಕಣ್ಗಾವಲನ್ನು ಇರಾನ್ ಹೆಚ್ಚಿಸಿದೆ. ಅಮೆರಿಕದ ಮಿಲಿಟರಿ ಹಡಗುಗಳ ಮೇಲೆ ಡ್ರೋಣ್‌ಗಳ ಮೂಲಕ ದಾಳಿ ಮಾಡಿದೆ. ಇದನ್ನೂ ಓದಿ: ಹಾರ್ಮುಜ್‌ ಆಯ್ತು, ಈಗ ಮಲಕ್ಕಾ ಟಾರ್ಗೆಟ್‌? – ಭಾರತ, ಚೀನಾ ಬುಡಕ್ಕೆ ಬಂತ ಅಮೆರಿಕಾ?

ಐಆರ್‌ಜಿಸಿ ಇರಾನ್ ಅನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದೆ. ಐಆರ್‌ಜಿಸಿ ಕಮಾಂಡರ್ ಅಹ್ಮದ್ ವಹಿದಿ ನೇತೃತ್ವದಲ್ಲಿ ಇರಾನ್ ಮೇಲೆ ನಿಯಂತ್ರಣ ಸಾಧಿಸಿದೆ. ಅಲ್ಲದೆ, ನಾವು ಯಾವುದೇ ಕಾರಣಕ್ಕೂ ಅಮೆರಿಕಕ್ಕೆ ಯುರೇನಿಯಂ ಒಪ್ಪಿಸುವುದಿಲ್ಲ ಎಂದು ಇರಾನ್ ಹೇಳಿದೆ. ಇಸ್ರೇಲ್‌ಗೆ ಬೇಹುಗಾರಿಕೆ ನಡೆಸಿದ ಇಬ್ಬರು ವ್ಯಕ್ತಿಗಳನ್ನು ಇರಾನ್ ಗಲ್ಲಿಗೇರಿಸಿದೆ.

[ad_2]

Source link publictv.in

Leave a Reply

Your email address will not be published. Required fields are marked *