Advertisement

ನಮ್ಮ ಕಾಲೇಜಿನ ಮೇಲೆ ಬಾಂಬ್‌ ಹಾಕಿ: ನೆತನ್ಯಾಹುಗೆ ಕೇಳಿಕೊಂಡು ಪೋಸ್ಟ್‌ ಹಾಕಿದ್ದ ವಿದ್ಯಾರ್ಥಿನಿ ಬಂಧನ

[ad_1]

US student

ವಾಷಿಂಗ್ಟನ್: ನಮ್ಮ ಕಾಲೇಜಿನ ಮೇಲೆ ಬಾಂಬ್‌ ಹಾಕಿ ಅಂತ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹುಗೆ (Benjamin Netanyahu) ಒತ್ತಾಯಿಸಿ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಹಂಚಿಕೊಂಡ ವಿದ್ಯಾರ್ಥಿನಿಯನ್ನು ಬಂಧಿಸಲಾಗಿದೆ.

ಕಾಲೇಜಿಗೆ ಬಾಂಬ್‌ ಹಾಕಿ ಎಂಬ ಸಂದೇಶವನ್ನು ವಾಟ್ಸಾಪ್ ಗುಂಪಿನಲ್ಲಿ ಪೋಸ್ಟ್ ಮಾಡಿದ್ದಕ್ಕಾಗಿ ಅಮೆರಿಕ ಸಂಯುಕ್ತ ಸಂಸ್ಥಾನದ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯನ್ನು ಗುರುವಾರ ಬಂಧಿಸಲಾಗಿದೆ. ಫ್ಲೋರಿಡಾ ಇಂಟರ್ನ್ಯಾಷನಲ್ ಯೂನಿವರ್ಸಿಟಿಯ 23 ವರ್ಷದ ವಿದ್ಯಾರ್ಥಿನಿ ಗೇಬ್ರಿಯೆಲಾ ಸಲ್ಡಾನಾ ಬಂಧಿತ ಆರೋಪಿಯಾಗಿದ್ದಾಳೆ. ಇದನ್ನೂ ಓದಿ: ಕದನ ವಿರಾಮಕ್ಕೆ ಇನ್ನೊಂದೇ ದಿನ ಬಾಕಿ – ಅಮೆರಿಕ ಹಠ ಬಿಟ್ಟರಷ್ಟೇ ಚರ್ಚೆ ಎಂದ ಇರಾನ್

ನೆತನ್ಯಾಹು, ನೀವು ನನ್ನ ಮಾತು ಕೇಳಲು ಸಾಧ್ಯವಾದರೆ ಓಷನ್ ಬ್ಯಾಂಕ್ ಘಟಿಕೋತ್ಸವ ಕೇಂದ್ರದಲ್ಲಿರುವ ಕ್ಯಾಪ್‌ಸ್ಟೋನ್ ಮೇಲೆ ಬಾಂಬ್‌ ಹಾಕಿ ಎಂದು ವಿಶ್ವವಿದ್ಯಾನಿಲಯದ ವಾಟ್ಸಾಪ್ ಗುಂಪಿನಲ್ಲಿ ಸಂದೇಶವನ್ನು ವಿದ್ಯಾರ್ಥಿನಿ ಶೇರ್‌ ಮಾಡಿಕೊಂಡಿದ್ದಳು.

ಸಲ್ಡಾನಾ ಆ ಪೋಸ್ಟನ್ನು ತಮಾಷೆಗೆ ಹಾಕಿದ್ದಾಳೆ. ಕಾರ್ಯಕ್ರಮದ ವಿಚಾರವಾಗಿ ಆವಳು ಬೇಸರ ಮಾಡಿಕೊಂಡಿದ್ದಳು. ಹೀಗಾಗಿ, ಆ ರೀತಿ ಪೋಸ್ಟ್‌ ಹಾಕಿದ್ದಾಳೆ ಎಂದು ಇತರೆ ವಿದ್ಯಾರ್ಥಿಗಳು ಸ್ಪಷ್ಟಪಡಿಸಿದರು. ಕೊನೆಗೆ ತನ್ನ ಪೋಸ್ಟ್‌ಗೆ ವಿದ್ಯಾರ್ಥಿನಿ ಕ್ಷಮೆಯಾಚಿಸಿದಳು. ಆದರೂ, ಆಕೆಯನ್ನು ಬಂಧಿಸಲಾಯಿತು. ಇದನ್ನೂ ಓದಿ: ಮಾತಾಡಿದ್ರೆ ಬಗೆಹರಿಯದೇ ಇರೋದೇನಿದೆ? – ಜಗತ್ತಿನ ಪ್ರಮುಖ ಕದನ ವಿರಾಮಗಳು

ಕ್ಯಾಂಪಸ್‌ನ ಪಾರ್ಕಿಂಗ್ ಗ್ಯಾರೇಜ್ ಬಳಿ ಬಂಧಿಸಿದ ನಂತರ ಆಕೆಯನ್ನು ಮಿಯಾಮಿಯ ಟರ್ನರ್ ಗಿಲ್‌ಫೋರ್ಡ್ ನೈಟ್ ತಿದ್ದುಪಡಿ ಕೇಂದ್ರಕ್ಕೆ ಕರೆದೊಯ್ಯಲಾಯಿತು. ನಂತರ ಆಕೆ ನ್ಯಾಯಾಧೀಶ ಮಿಂಡಿ ಎಸ್ ಗ್ಲೇಜರ್ ಮುಂದೆ ಹಾಜರಾದಳು. ಆಕೆಗೆ 5,000 ಡಾಲರ್‌ (4,65,391 ರೂಪಾಯಿ) ದಂಡ ವಿಧಿಸಿ ಜಾಮೀನು ನೀಡಲಾಯಿತು.

[ad_2]

Source link publictv.in

Leave a Reply

Your email address will not be published. Required fields are marked *