Advertisement

ಪಬ್ಲಿಕ್‌ ಟಿವಿ ‘ವಿದ್ಯಾಪೀಠ’ಕ್ಕೆ ಬನ್ನಿ.. ಲ್ಯಾಪ್‌ಟಾಪ್‌ ಗೆಲ್ಲಿ

[ad_1]

– ಇದೇ ಏ.25, 26 ರಂದು ನಡೆಯಲಿರೋ ಶೈಕ್ಷಣಿಕ ಮೇಳ

ದ್ವಿತೀಯ ಪಿಯುಸಿ, ಪದವಿ ಫಲಿತಾಂಶ ಬಂದ್ಮೇಲೆ ಮಕ್ಕಳನ್ನು ಯಾವ ಕಾಲೇಜಿಗೆ ಸೇರಿಸಬೇಕು? ಯಾವ ಕೋರ್ಸ್‌ ಕೊಡಿಸಬೇಕು? ಮುಂದಿನ ಅವರ ಉದ್ಯೋಗ ಭವಿಷ್ಯ ಹೇಗೆ ಎಂಬ ಬಗ್ಗೆ ಪೋಷಕರಲ್ಲಿ ಗೊಂದಲ ಮೂಡುವುದು ಸಹಜ. ಅವರಿಗಾಗಿ ಒಂದೇ ಸೂರಿನಡಿ ಸೂಕ್ತ ವೇದಿಕೆ ಕಲ್ಪಿಸಿ ಗೊಂದಲ ನಿವಾರಿಸಲು ಪಬ್ಲಿಕ್‌ ಟಿವಿಯು (PUBLiC TV) 9ನೇ ಆವೃತ್ತಿಯ ವಿದ್ಯಾಪೀಠ ಶೈಕ್ಷಣಿಕ ಮೇಳ (Vidhyapeeta 2026) ಆಯೋಜಿಸಿದೆ. ಕರ್ನಾಟಕದ ಅತಿದೊಡ್ಡ ಶೈಕ್ಷಣಿಕ ಮೇಳವು ಇದೇ ಏಪ್ರಿಲ್‌ 25 (ಶನಿವಾರ), ಏಪ್ರಿಲ್‌ 26 (ಭಾನುವಾರ) ಬೆಂಗಳೂರಿನ ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ (ಗೇಟ್‌ ನಂಬರ್‌ 4) ನಡೆಯಲಿದೆ. ಶೈಕ್ಷಣಿಕ ಮೇಳದಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳಿಗೆ ಲಕ್ಕಿ ಡ್ರಾ ಹಾಗೂ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿದ್ದು, ಗೆದ್ದವರು ಲ್ಯಾಪ್‌ಟಾಪ್‌, ಬೈಸಿಕಲ್‌ ಸೇರಿ ಆಕರ್ಷಕ ಬಹುಮಾನ ಗೆಲ್ಲಬಹುದು.

‘ಇಂದಿನ ಕಲಿಕೆ, ನಾಳಿನ ದಾರಿ ದೀಪ’ ಎಂಬ ಘೋಷವಾಕ್ಯದೊಂದಿಗೆ ಪಬ್ಲಿಕ್‌ ಟಿವಿ ಪ್ರಸ್ತುತ ಪಡಿಸುವ Ad6 Advertising ಸಹಯೋಗದಲ್ಲಿ ಆಯೋಜನೆಗೊಂಡಿರುವ ವಿದ್ಯಾಪೀಠ ಶೈಕ್ಷಣಿಕ ಮೇಳ (Education Expo) ಬೆಳಗ್ಗೆ 9 ರಿಂದ ಸಂಜೆ 6 ಗಂಟೆವರೆಗೆ ನಡೆಯಲಿದೆ. ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಉಚಿತ ಪ್ರವೇಶವಿರುತ್ತದೆ.

Public tv Vidhyapeeta 2026 9th edition karnataka biggest education Expo April 25 27 Palace ground Bengaluru 1

ಲ್ಯಾಪ್‌ಟಾಪ್‌, ಬೈಸಿಕಲ್‌ ಉಡುಗೊರೆ
ಏ.25ರಂದು ಬೆಳಗ್ಗೆ 9:00ರಿಂದ 10:30ರೊಳಗೆ ರಿಜಿಸ್ಟರ್ ಮಾಡುವ ವಿದ್ಯಾರ್ಥಿಗಳಿಗೆ ಲಕ್ಕಿ ಡ್ರಾ ಮೂಲಕ ಲ್ಯಾಪ್‌ಟಾಪ್ ಗೆಲ್ಲುವ ಅವಕಾಶವಿದೆ.

ವಿವಿಧ ಸ್ಪರ್ಧೆಯಲ್ಲಿ ಗೆದ್ದ ವಿಜೇತರಿಗೆ ಬೈಸಿಕಲ್‌ ಸೇರಿದಂತೆ ವಿಶೇಷ ಉಡುಗೊರೆ ನೀಡಲಾಗುವುದು. ಪ್ರತಿ ಅರ್ಧಗಂಟೆಗೆ ಅಚ್ಚರಿಯ ಉಡುಗೊರೆಗಳು ಸಿಗುತ್ತವೆ. ವಿದ್ಯಾರ್ಥಿಗಳಿಗೆ ಬಂಪರ್‌ ಬಹುಮಾನಗಳಿವೆ. ಸ್ಥಳದಲ್ಲೇ ತಕ್ಷಣ ಪ್ರವೇಶಾತಿಗೂ ಅವಕಾಶ ಇರುತ್ತದೆ. ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 90% ಗಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು ಅಂಕಪಟ್ಟಿಯ ಫೋಟೋಕಾಪಿ ತಂದು ತೋರಿಸಿದಲ್ಲಿ ಅವರಿಗೂ ಉಡುಗೊರೆ ಸಿಗಲಿದೆ. ಇದನ್ನೂ ಓದಿ: ಏ.25, 26ಕ್ಕೆ ಪಬ್ಲಿಕ್ ಟಿವಿ ‘ವಿದ್ಯಾಪೀಠ’ಕ್ಕೆ ಬನ್ನಿ

125 ಕ್ಕೂ ಹೆಚ್ಚು ಸಂಸ್ಥೆಗಳು ಭಾಗಿ:
ಕರ್ನಾಟಕದ ಅತಿದೊಡ್ಡ ಶೈಕ್ಷಣಿಕ ಮೇಳ ವಿದ್ಯಾಪೀಠದಲ್ಲಿ ರಾಜ್ಯದ ನಾನಾ ಭಾಗಗಳ 125ಕ್ಕೂ ಹೆಚ್ಚು ಪ್ರತಿಷ್ಠಿತ ವಿದ್ಯಾಸಂಸ್ಥೆಗಳು ಪಾಲ್ಗೊಳ್ಳಲಿವೆ. ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಪದವಿ, ಸ್ನಾತಕೋತ್ತರ ಪದವಿ, ಕೆಸಿಇಟಿ, ನೀಟ್‌ ಮತ್ತು ಕಾಮೆಡ್‌ ಕೆ, ವೃತ್ತಿಪರ ಮತ್ತು ಔದ್ಯೋಗಿಕ ಕೋರ್ಸ್‌ಗಳ ಬಗ್ಗೆ ಒಂದೇ ಸ್ಥಳದಲ್ಲಿ ಸಮಗ್ರ ಮಾಹಿತಿ ಸಿಗಲಿದೆ. ಸಂವಾದದ ಮೂಲಕ ಪ್ರಮುಖ ಶಿಕ್ಷಣ ಸಂಸ್ಥೆಗಳ ದಾಖಲಾತಿ ಮತ್ತು ವಿದ್ಯಾರ್ಥಿ ವೇತನಕ್ಕೆ ಸಂಬಂಧಿಸಿದ ಮಾಹಿತಿ ಪಡೆದುಕೊಳ್ಳಲು ಈ ಮೇಳದಲ್ಲಿ ಅವಕಾಶ ಇದೆ.

ಯಾರೆಲ್ಲ ಭಾಗವಹಿಸುತ್ತಾರೆ?
– ಅನಿಮೇಷನ್, ಮಾಧ್ಯಮ ಮತ್ತು ಗೇಮಿಂಗ್
– ಫ್ಯಾಷನ್ ಮತ್ತು ಹೋಟೆಲ್ ನಿರ್ವಹಣೆ
– ವಾಸ್ತುಶಿಲ್ಪ
– ಕಾನೂನು ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳು
– ತರಬೇತಿ ಸಂಸ್ಥೆಗಳು
– ಸಮೂಹ ಸಂವಹನ
– ವಾಣಿಜ್ಯ ಮತ್ತು ಬ್ಯಾಂಕಿಂಗ್ ಕ್ಲೈಂಟ್‌ಗಳು
– ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಕಾಲೇಜುಗಳು
– ಎಂಬಿಎ ಸಂಸ್ಥೆಗಳು
– ವಿದೇಶದಲ್ಲಿ ಅಧ್ಯಯನ ಸಂಸ್ಥೆಗಳು

Public tv Vidhyapeeta 2026 9th edition karnataka biggest education Expo April 25 27 Palace ground Bengaluru 2

ಯಾರು ಭಾಗವಹಿಸಬಹುದು?
– ಸಲಹೆಗಾರರು
– ವಿದ್ಯಾರ್ಥಿಗಳು
– ಶಿಕ್ಷಣ ಸಲಹೆಗಾರರು
– ವೃತ್ತಿಪರ ಕೋರ್ಸ್‌ಗಳ ವಿದ್ಯಾರ್ಥಿಗಳು
– ಹಣಕಾಸು ಸಲಹೆಗಾರರು
– ಪದವಿಪೂರ್ವ ವಿದ್ಯಾರ್ಥಿಗಳು
– ಪೋಷಕರು
– ಕೆಲಸದ ವೃತ್ತಿಪರರು

ಪ್ಲಾಟಿನಂ ಆಯೋಜಕರು:
ಗಾರ್ಡನ್‌ ಸಿಟಿ ಯೂನಿರ್ವಸಿಟಿ, ಸಿಎಂಆರ್‌ ಯೂನಿವರ್ಸಿಟಿ, ಕೇಂಬ್ರಿಡ್ಜ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ, ರಾಮಯ್ಯ ಯೂನಿವರ್ಸಿಟಿ ಆಫ್‌ ಅಪ್ಲೈಡ್‌ ಸೈನ್ಸಸ್‌, ಪ್ರೆಸಿಡೆನ್ಸಿ ಯೂನಿವರ್ಸಿಟಿ, ಸಪ್ತಗಿರಿ ಎನ್‌ಪಿಎಸ್‌ ಯೂನಿವರ್ಸಿಟಿ

ಗೋಲ್ಡ್‌ ಪ್ರಾಯೋಜಕರು:
ಈಸ್ಟ್‌ ಪಾಯಿಂಟ್‌ ಗ್ರೂಪ್‌ ಆಫ್‌ ಇನ್‌ಸ್ಟಿಟ್ಯೂಷನ್ಸ್‌, ಎಎಂಸಿ ಗ್ರೂಪ್‌ ಆಫ್‌ ಇನ್‌ಸ್ಟಿಟ್ಯೂಷನ್ಸ್‌,ದಿ ಆಕ್ಸ್‌ಫರ್ಡ್‌ ಎಜುಕೇಷನಲ್‌ ಇನ್‌ಸ್ಟಿಟ್ಯೂಷನ್ಸ್‌, ಆರ್‌ಆರ್‌ ಇನ್‌ಸ್ಟಿಟ್ಯೂಷನ್ಸ್‌, ರಾಮಯ್ಯ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ,

ಕ್ರಿಯೇಟಿವ್‌ ಸ್ಟಾಲ್‌ ಪಾರ್ಟ್ನರ್ಸ್‌:
ಅಮಿಟಿ ಯೂನಿವರ್ಸಿಟಿ, ನ್ಯೂ ಹಾರಿಜನ್‌ ಕಾಲೇಜ್‌ ಆಫ್‌ ಇಂಜಿನಿಯರಿಂಗ್‌, ಜ್ಯೋತಿ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ, ಕೆಎಲ್‌ಇ ಟೆಕ್ನಾಲಜಿ ಯೂನಿವರ್ಸಿಟಿ, ಪಾರುಲ್‌ ಯೂನಿವರ್ಸಿಟಿ, ICFAI ಫೌಂಡೇಶನ್‌ ಫಾರ್‌ ಹೈಯರ್‌ ಎಜುಕೇಶನ್‌

ಸಿಲ್ವರ್‌ ಪ್ರಯೋಜಕರು:
ಚಾಣಕ್ಯ ಯೂನಿವರ್ಸಿಟಿ, ಪಿಇಎಸ್‌ ಯೂನಿವರ್ಸಿಟಿ, ದಯಾನಂದ ಸಾಗರ ಯೂನಿವರ್ಸಿಟಿ, ಬೃಂದಾವನ ಗ್ರೂಪ್‌ ಆಫ್‌ ಇನ್‌ಸ್ಟಿಟ್ಯೂಷನ್ಸ್‌, ಜಿಎಂ ಯೂನಿವರ್ಸಿಟಿ, ಆಚಾರ್ಯ ಬೆಂಗಳೂರು ಬಿ ಸ್ಕೂಲ್‌, ಕೃಪಾನಿಧಿ ಗ್ರೂಪ್‌ ಆಫ್‌ ಇನ್‌ಸ್ಟಿಟ್ಯೂಷನ್‌, ಎಸ್‌ಇಎ ಗ್ರೂಪ್‌ ಆಫ್‌ ಇನ್‌ಸ್ಟಿಟ್ಯೂಷನ್ಸ್‌, ಸಿಟಿ ಇನ್‌ಸ್ಟಿಟ್ಯೂಷನ್ಸ್‌, ಆಚಾರ್ಯ ಬೆಂಗಳೂರು.

ಬೆವರೇಜ್‌ ಪಾರ್ಟ್‌ನರ್‌:
ಬಾಯರ್ಸ್‌ ಕಾಫಿ

ಗಿಫ್ಟ್‌ ಸ್ಪಾನ್ಸರ್‌:
ಸಪ್ತಗಿರಿ ಎನ್‌ಪಿಎಸ್‌ ಯೂನಿವರ್ಸಿಟಿ, ಅರವಿಂದ್‌ ರೆಸಿಡೆನ್ಶಿಯಲ್‌ ಸ್ಕೂಲ್‌ ಆಂಡ್‌ ಪಿಯು ಕಾಲೇಜ್‌

ದಿನಾಂಕ: ಏಪ್ರಿಲ್‌ 25 ಮತ್ತು 26
ಸ್ಥಳ: ಗಾಯತ್ರಿ ವಿಹಾರ, ಅರಮನೆ ಮೈದಾನ, ಬೆಂಗಳೂರು
ಸಮಯ: ಬೆಳಗ್ಗೆ 9 ರಿಂದ ಸಂಜೆ 6 ಗಂಟೆಯವರೆಗೆ

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 99000 60815/ 99000 60891

[ad_2]

Source link publictv.in

Leave a Reply

Your email address will not be published. Required fields are marked *