Advertisement

ಬೆಳ್ತಂಗಡಿ ಬಿಜೆಪಿ ಯುವಮೋರ್ಚಾ ಮಂಡಲದ ಸಭೆ: ಹೊಸ ಪದಾಧಿಕಾರಿಗಳ ನೇಮಕ

[ad_1]

ಬೆಳ್ತಂಗಡಿ: ಭಾರತೀಯ ಜನತಾ ಪಾರ್ಟಿ ಯುವಮೋರ್ಚಾ ಬೆಳ್ತಂಗಡಿ ಮಂಡಲದ ವತಿಯಿಂದ ಏ.21 ರಂದು ಮಂಡಲ ಅಧ್ಯಕ್ಷರಾದ ಶಶಿರಾಜ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ವಿಶೇಷ ಸಭೆಯನ್ನು ಆಯೋಜಿಸಲಾಗಿತ್ತು.ಸಭೆಯಲ್ಲಿ ಸಂಘಟನೆಯ ಬಲವರ್ಧನೆ ಹಾಗೂ ಮುಂದಿನ ಕಾರ್ಯಯೋಜನೆಗಳ ಕುರಿತು ಸುದೀರ್ಘ ಚರ್ಚೆ ನಡೆಸಲಾಯಿತು.

ಇದೇ ಸಂದರ್ಭದಲ್ಲಿ ಯುವಮೋರ್ಚಾ ತಂಡಕ್ಕೆ ಹೊಸ ಪದಾಧಿಕಾರಿಗಳನ್ನು ನೇಮಕ ಮಾಡಿ ಆದೇಶಿಸಲಾಯಿತು.

ಹೊಸ ಪದಾಧಿಕಾರಿಗಳ ವಿವರ:ಮಂಡಲ ಉಪಾಧ್ಯಕ್ಷರು: ಹರೀಶ್ ಸಂಬೋಳ್ಯ, ಮಂಡಲ ಕಾರ್ಯದರ್ಶಿ: ಜಗದೀಶ್ ಹೆಗ್ಗಡೆ ಕಣ್ಣಾಜೆ, ಮಂಡಲ ಸದಸ್ಯರು: ಮನೀಶ್ DA ಧರ್ಮಸ್ಥಳ ಹಾಗೂ ಸಂತೋಷ್ ಪೂಜಾರಿ ಇಂದಬೆಟ್ಟು ಇವರುಗಳನ್ನು ಆಯ್ಕೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಭಾರಿ ಸುರೇಶ್ ಕೋಟ್ಯಾನ್, ಮಂಡಲ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಪಾರೆಂಕಿ, ಬಿಜೆಪಿ ಯುವಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಉಮೇಶ್ ಕುಲಾಲ್ ಮತ್ತು ಭರತ್ ಕೃಷ್ಣಾಪುರ ಭಾಗವಹಿಸಿ, ಪಕ್ಷದ ಸಂಘಟನೆಯ ಕುರಿತು ಕಾರ್ಯಕರ್ತರಿಗೆ ಮಾರ್ಗದರ್ಶನ ನೀಡಿದರು.ವಿನೀತ್ ಕೋಟ್ಯಾನ್ ಅವರು ಎಲ್ಲರನ್ನು ಸ್ವಾಗತಿಸಿದರು. ಗಣೇಶ್ ಲಾಯಿಲ ವಂದನಾರ್ಪಣೆ ಮಾಡಿದರು.

banner



[ad_2]

Source link

Leave a Reply

Your email address will not be published. Required fields are marked *