Advertisement

30 ಮಕ್ಕಳ ರಕ್ಷಣೆಗೆ ವಿಷಪೂರಿತ ಹಾವಿನೊಂದಿಗೆ ಕಾದಾಡಿ ನಾಯಿ ಸಾವು – ಮೆರವಣಿಗೆ ಮಾಡಿ, ಗ್ರಾಮಸ್ಥರಿಂದ ಅಂತ್ಯಕ್ರಿಯೆ

[ad_1]

Odisha dog

ಭುವನೇಶ್ವರ್: 30 ಶಾಲಾ ಮಕ್ಕಳ ರಕ್ಷಣೆಗೆ ವಿಷಪೂರಿತ ಹಾವಿನೊಂದಿಗೆ ಬೀದಿನಾಯಿಯೊಂದು ಕಾದಾಡಿ ಸಾವನ್ನಪ್ಪಿದೆ. ಮೃತ ನಾಯಿಗೆ ಗ್ರಾಮಸ್ಥರು ಮೆರವಣಿಗೆ, ಅಂತ್ಯಕ್ರಿಯೆ ನೆರವೇರಿಸಿದ್ದಾರೆ.

ಒಡಿಶಾದ (Odisha) ಮಯೂರ್‌ಭಂಜ್ ಜಿಲ್ಲೆಯಲ್ಲಿರುವ ಜಗನಾಥ ವಿದ್ಯಾಮಂದಿರದಲ್ಲಿ ಈ ಘಟನೆ ನಡೆದಿದೆ. ಮಂದಿರಕ್ಕೆ 30 ಶಾಲಾ ಮಕ್ಕಳು ಆಗಮಿಸಿದ್ದರು. ಈ ವೇಳೆ ಮಕ್ಕಳು ಮೈದಾನದಲ್ಲಿ ಆಟವಾಡುತ್ತಿದ್ದಾಗ, ವಿಷಪೂರಿತ ಹಾವೊಂದು ಕಾಣಿಸಿಕೊಂಡಿದೆ. ಮಕ್ಕಳ ಕಡೆ ಬರುತ್ತಿದ್ದ ಹಾವಿನ ಮೇಲೆ ಕಾಳಿ ಹೆಸರಿನ ನಾಯಿ ದಿಢೀರ್ ದಾಳಿ ಮಾಡಿದೆ. ಹಾವಿನೊಂದಿಗೆ ಕಾಳಗ ನಡೆಸಿ ಕೆಲ ಸಮಯದ ಬಳಿಕ ಹಾವನ್ನು ಕೊಂದು, ಅಲ್ಲಿದ್ದ ಮಕ್ಕಳನ್ನು ರಕ್ಷಿಸಿದೆ. ದುರಾದೃಷ್ಟ ಎಂದರೆ ಹಾವಿನ ಜೊತೆಗಿನ ಹೋರಾಟದಲ್ಲಿ ಕಾಳಿ ನಾಯಿಯು ಸಾವಿಗೀಡಾಗಿದೆ. ಇದನ್ನೂ ಓದಿ: ಫಾರಿನ್ ಸ್ಟೈಲಲ್ಲಿ ಪ್ರಪೋಸ್‌ ಮಾಡ್ತೀನಿ ಅಂತ ಸೀಮೆ ಎಣ್ಣೆ ಸುರಿದು ಪ್ರಿಯಕರನಿಗೆ ಬೆಂಕಿ ಹಚ್ಚಿ ಕೊಂದ ಪ್ರೇಯಸಿ..!

ಮಕ್ಕಳ ರಕ್ಷಣೆಗೆ ತನ್ನ ಪ್ರಾಣವನ್ನೇ ಮುಡುಪಾಗಿಟ್ಟ ನಾಯಿಯ ಸಾವಿಗೆ ಊರಿನ ಜನ ಕಣ್ಣೀರಿಟ್ಟಿದ್ದಾರೆ. ಊರಿನ ಜನರು ಕಾಳಿಯ ಸ್ವರೂಪವೆಂದು ನಾಯಿಯ ದೇಹವನ್ನು ಬಿಳಿ ಬಟ್ಟೆ ಮತ್ತು ಹೂವುಗಳಿಂದ ಅಲಂಕರಿಸಿ, ಮೆರವಣಿಗೆ ಮಾಡಿ, ನಂತರ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ.

[ad_2]

Source link publictv.in

Leave a Reply

Your email address will not be published. Required fields are marked *