Advertisement

Monalisa: ಮದುವೆಯಾದ ಒಂದು ತಿಂಗಳಿಗೆ ಗರ್ಭಿಣಿಯಾದ ಮೊನಾಲಿಸ

[ad_1]

Monalisa: ಮಹಾಕುಂಭಮೇಳದಲ್ಲಿ ರುದ್ರಾಕ್ಷಿ ಮಾರುತ್ತಿದ್ದ ಯುವತಿ ಮೊನಾಲಿಸಾ ಬೋಂಸ್ಲೆ ರಾತ್ರೋರಾತ್ರಿ ಫೇಮಸ್ ಆಗಿದ್ದು ಗೊತ್ತೇಯಿದೆ. ತನ್ನ ಸುಂದರ ಕಣ್ಣುಗಳಿಂದಲೇ ಮೋಡಿ ಮಾಡಿ, ಫೇಮಸ್ ಚೆಲುವೆ ಇದೀಗ ದಿಢೀರನೆ 6 ತಿಂಗಳಿನಿಂದ ಪ್ರೀತಿಸುತ್ತಿದ್ದ ಮುಸ್ಲಿಂ ಯುವಕ ಫರ್ಮಾನ್ ಎಂಬುವವನ ಜೊತೆ ಪೋಷಕರ ವಿರೋಧದ ನಡುವೆ ಕೇರಳದಲ್ಲಿ ಮೊನಾಲಿಸಾ ಮದುವೆ ನಡೆದಿತ್ತು. ಈ ಘಟನೆ ಹಲವಾರು ತಿರುವುಗಳನ್ನು ಪಡೆದುಕೊಂಡಿತ್ತು. ಆದರೆ ಇದೀಗ ಅಚ್ಚರಿ ಎಂಬಂತೆ ಮದುವೆಯಾದ ಒಂದು ತಿಂಗಳಿಗೆ ಮೊನಾಲಿಸಾ ಗರ್ಭಿಣಿಯಾಗಿದ್ದಾಳಂತೆ. ಈ ಬಗ್ಗೆ ಸ್ವತಹ ಆಕೆಯ ಗಂಡ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.

ಹೌದು, ಮೊನಾಲಿಸಾ ಭೊಸ್ಲೆ ಮದುವೆ ವಿವಾದ ದಿನಕ್ಕೊಂದು ತಿರುವು ಪಡೆಯುತ್ತಿದೆ. ಆಕೆ ಇನ್ನು ಅಪ್ರಾಪ್ತೆ ಎಂದು ಕುಟುಂಬ ಸದಸ್ಯರು ಹೇಳುತ್ತಿದ್ದಾರೆ. ಈ ಸಂಬಂಧ ದೂರು ದಾಖಲಾಗಿ ವಿಚಾರಣೆ ನಡೆಯುತ್ತಿದೆ. ಇದೆಲ್ಲದರ ನಡುವೆ ಮೊನಾಲಿಸಾ ಈಗ ಗರ್ಭಿಣಿ ಎಂದು ಖುದ್ದು ಪತಿ ಫರ್ಮಾನ್ ಖಾನ್ ಪೊಲೀಸರಿಗೆ ತಿಳಿಸಿರುವುದಾಗಿ ವರದಿಯಾಗಿದೆ.

ಇನ್ನೂ ಮೋನಾಲಿಸಾ ಮತ್ತು ಫರ್ಮನ್ ಖಾನ್ ಕಳೆದ ಮಾರ್ಚ್ ತಿಂಗಳಿನಲ್ಲಿ ಕೇರಳದ ದೇವಸ್ಥಾನವೊಂದರಲ್ಲಿ ವಿವಾಹವಾಗಿದ್ದರು. ಸ್ಥಳೀಯ ನಾಯಕರು ಮತ್ತು ಪೊಲೀಸರ ಸಮ್ಮುಖದಲ್ಲೇ ಈ ವಿವಾಹ ನಡೆದಿತ್ತು. ಆದರೆ, ಈ ಮದುವೆ ಮೊದಲಿನಿಂದಲೂ ಹಲವು ವಿವಾದಗಳಿಗೆ ಕಾರಣವಾಗಿದೆ. ಮೋನಾಲಿಸಾ ಅವರ ಕುಟುಂಬದವರು ಆಕೆ ಇನ್ನೂ ಅಪ್ರಾಪ್ತ ವಯಸ್ಕಳು (Minor) ಎಂದು ಆರೋಪಿಸಿದ್ದರು. ಈ ಕುರಿತು ರಾಷ್ಟ್ರೀಯ ಪರಿಶಿಷ್ಟ ಪಂಗಡಗಳ ಆಯೋಗ (NCST) ನಡೆಸಿದ ತನಿಖೆಯಲ್ಲಿ, ಮದುವೆಯ ಸಮಯದಲ್ಲಿ ಆಕೆಗೆ ಸುಮಾರು 16 ವರ್ಷ ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಫರ್ಮನ್ ಖಾನ್ ವಿರುದ್ಧ ಪೋಕ್ಸೋ (POCSO) ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಯಲ್ಲಿ ಮೊನಾಲಿಸಾ ಹೇಳಿಕೆಯನ್ನು ದಾಖಲಿಸಬೇಕಿದೆ. ಸದ್ಯ ಆಕೆ ಹೇಳಿಕೆ ದಾಖಲಿಸಲು ಮಧ್ಯಪ್ರದೇಶಕ್ಕೆ ಹೋಗಬೇಕಿದೆ. ಕೇರಳದಲ್ಲಿರುವ ಮೊನಾಲಿಸಾ ಗರ್ಭಿಣಿ ಆಗಿರುವುದರಿಂದ ದೂರ ಪ್ರಯಾಣ ಮಾಡಬಾರದು. ಹಾಗಾಗಿ ಆಕೆ ನೇರವಾಗಿ ವಿಚಾರಣೆಗೆ ಹಾಜರಾಗಿ ಹೇಳಿಕೆ ನೀಡಲು ಕಷ್ಟವಾಗುತ್ತದೆ ಎಂದು ಪತಿ ಫರ್ಮಾನ್ ಪೊಲೀಸರಿಗೆ ತಿಳಿಸಿದ್ದಾರೆ ಎನ್ನಲಾಗ್ತಿದೆ.

banner

ಮೊನಲಿಸಾ ಗರ್ಭಿಣಿ ಆಗಿರುವ ಕಾರಣ ಪ್ರಯಾಣ ಸಾಧ್ಯವಿಲ್ಲ ಎಂದು ಫರ್ಮಾನ್ ಹೇಳಿದ್ದಾರೆ. ಫರ್ಮಾನ್ ಖಾನ್ ನೀಡಿರುವ ‘ಗರ್ಭಿಣಿ’ ಎಂಬ ಮಾಹಿತಿಯನ್ನು ಪೊಲೀಸರು ಈಗ ವೈದ್ಯಕೀಯ ವರದಿಗಳ ಮೂಲಕ ಪರಿಶೀಲಿಸುತ್ತಿದ್ದಾರೆ. ವರದಿ ಬಂದ ನಂತರವಷ್ಟೇ ಮುಂದಿನ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಮೂಲಗಳು ತಿಳಿಸಿವೆ.



[ad_2]

Source link

Leave a Reply

Your email address will not be published. Required fields are marked *