[ad_1]

– ಜ್ಯೂಸ್‌ನಲ್ಲಿ ಮತ್ತು ಬರುವ ಔಷಧಿ ಬೆರಸಿಕೊಟ್ಟು ರೇಪ್ ಆರೋಪ
– ಅಮೆರಿಕ ರಾಯಭಾರ ಕಚೇರಿ ಸೂಚನೆ ಮೇರೆಗೆ FIR
ಮಡಿಕೇರಿ: ಕೊಡಗು ಜಿಲ್ಲೆಯ ಕೇರಳ ಗಡಿಭಾಗ ಕುಟ್ಟ ವ್ಯಾಪ್ತಿಯಲ್ಲಿ ಅಮೆರಿಕ ಮೂಲದ ಮಹಿಳೆ (American Woman) ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಇಬ್ಬರನ್ನ ಪೊಲೀಸರು (Kodagu Police) ಬಂಧಿಸಿದ್ದಾರೆ.
ವಾಷಿಂಗ್ಟನ್ ಮೂಲದ ಮಹಿಳೆ ಮೇಲೆ ಜಾರ್ಖಂಡ್ ಮೂಲದ ವ್ಯಕ್ತಿ ಅತ್ಯಾಚಾರ ಎಸಗಿದ್ದು, ಘಟನೆಗೆ ಸಂಬಂಧಿಸಿದಂತೆ ಆರೋಪಿ ವೃಜೇಶ್ ಕುಮಾರ್, ಹೋಂಸ್ಟೇ (Home Stay) ಮಾಲೀಕ ವಿಶಾಲ್ ಇಬ್ಬರನ್ನ ಬಂಧಿಸಿ ಜೈಲಿಗಟ್ಟಿದ್ದಾರೆ. ಇದನ್ನೂ ಓದಿ: ಮೊದಲು ಪ್ರೀತಿಸಿ ಮದ್ವೆ – ಈಗ ತಂಗಿ ತಂಗಿ ಅಂತ ಕರೆಯುತ್ತಿದ್ದ ಗಂಡನ ಸ್ನೇಹಿತನ ಜೊತೆ 2ನೇ ಮದುವೆ
ಏನಿದು ಪ್ರಕರಣ?
ಪ್ರವಾಸಕ್ಕೆ ಬಂದಿದ್ದ ವಿದೇಶಿ ಮಹಿಳೆ ಕುಟ್ಟ ಗ್ರಾಮದ ದೇವಿ ವಿಲ್ಲಾ ಹೋಂ ಸ್ಟೇನಲ್ಲಿ ತಂಗಿದ್ದರು. ಈ ವೇಳೆ ಅಲ್ಲಿದ್ದ ಜಾರ್ಖಂಡ್ ಮೂಲದ ವ್ಯಕ್ತಿ ವೃಜೇಶ್ ಕುಮಾರ್ ಸಿಹಿ ಪಾನಕಕ್ಕೆ ಮತ್ತು ಬರುವ ಔಷಧಿ ಬೆರಸಿ ಮಹಿಳೆಗೆ ನೀಡಿದ್ದಾನೆ. ಆಕೆ ಪ್ರಜ್ಞೆ ತಪ್ಪಿದ ಬಳಿಕ ಅತ್ಯಾಚಾರ ಎಗಿದ್ದಾನೆ ಎಂದು ಸಂತ್ರಸ್ತೆ ನೀಡಿದ ದೂರಿನಲ್ಲಿ ಉಲ್ಲೇಖವಾಗಿದೆ.

ಪ್ರಕರಣ ಮುಚ್ಚಿಹಾಕಲು ಯತ್ನ
ಇನ್ನೂ ವಿಷಯ ತಿಳಿದ ಹೋಮ್‌ಸ್ಟೇ ಮಾಲೀಕ ವಿಶಾಲ್ ಪ್ರಕರಣವನ್ನೇ ಮುಚ್ಚಿಹಾಕಲು ಯತ್ನಿಸಿರೋದು ದೂರಿನಿಂದ ಗೊತ್ತಾಗಿದೆ. ಮೂರು ದಿನಗಳ ಕಾಲ ಸಂತ್ರಸ್ತೆ ಯಾರನ್ನೂ ಸಂಪರ್ಕ ಮಾಡದಂತೆ ತಡೆದಿದ್ದಾನೆ. ಹೋಂ ಸ್ಟೇ ವೈಫೈ ಕೂಡ ಕಟ್ ಮಾಡಿದ್ದಾನೆ. 3 ದಿನದ ಬಳಿಕ ಸಂತ್ರಸ್ತೆ ಮೈಸೂರಿಗೆ ಹೋಗುವುದಾಗಿ ಹೇಳಿ ಹೊರಟಿದ್ದಾರೆ. ನಂತರ ಮೈಸೂರಿಗೆ ಬಂದ ವಿದೇಶಿ ಮಹಿಳೆ ಅಮೆರಿಕದ ರಾಯಭಾರ ಕಚೇರಿಯನ್ನ (American Embassy) ಸಂಪರ್ಕಿಸಿ, ಮಾಹಿತಿ ನೀಡಿದ್ದಾರೆ. ಬಳಿಕ ಇ-ಮೇಲ್ ಮೂಲಕ ಮೈಸೂರಿನ ಅಧಿಕಾರಿಗಳನ್ನ ಸಂಪರ್ಕಿಸಿದ ಅಮೆರಿಕ ರಾಯಭಾರ ಕಚೇರಿ ಅಧಿಕಾರಿಗಳು ಪ್ರಕರಣ ದಾಖಲಿಸುವಂತೆ ಸೂಚಿಸಿದ್ದಾರೆ. ಅಧಿಕಾರಿಗಳ ಸೂಚನೆ ಮೇರೆಗೆ ಮೈಸೂರಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಡಗಿಗೆ ವಿದೇಶಾಂಗ ಸಚಿವಾಲಯದ ಅಧಿಕಾರಿಗಳ ಭೇಟಿ
ಘಟನೆ ಬೆಳಕಿಗೆ ಬಂದ ನಂತರ ಡೆಲ್ಲಿ ಹಾಗೂ ಚೆನ್ನೈ ಕಚೇರಿಗಳ ವಿದೇಶಾಂಗ ಸಚಿವಾಲಯದ ಅಧಿಕಾರಿಗಳು ಮಂಗಳವಾರ ಕೊಡಗಿಗೆ ಭೇಟಿ ನೀಡಿದ್ದಾರೆ. ಆದ್ರೆ ಅಧಿಕಾರಿಗಳಿಗೆ ಸ್ಪಷ್ಟ ಮಾಹಿತಿ ನೀಡಲು ಕೊಡಗು ಎಸ್ಪಿ ಹಿಂದೇಟು ಹಾಕಿದ್ದಾರೆ. ಇದನ್ನೂ ಓದಿ: ಪ್ರೇಮಾ ನಂಬರ್ ಬ್ಲಾಕ್, ಮಾಜಿ ಲವರ್ ಸಂಪರ್ಕದಲ್ಲಿದ್ದ ಕಿರಣ್ – ಬ್ಯಾಡರಹಳ್ಳಿ ಕೇಸ್‌ಗೆ ಹೊಸ ಟ್ವಿಸ್ಟ್
ಸದ್ಯ ಪ್ರಕರಣ ಸಂಬಂಧ ಅತ್ಯಾಚಾರ ಆರೋಪಿ ಹಾಗೂ ಹೋಂ ಸ್ಟೇ ಮಾಲಿಕ ಇಬ್ಬರನ್ನೂ ಬಂಧಿಸಿದ್ದಾರೆ. ಕೋರ್ಟ್ ಮೇ 3ರ ವರೆಗೆ ನ್ಯಾಯಾಂಗ ಬಂಧನದಲ್ಲಿಡಲು ಆದೇಶ ನೀಡಿದೆ. ಘಟನೆ ಸಂಬಂಧ ತನಿಖೆ ನಡೆಯುತ್ತಿದೆ, ಈಗಲೇ ಹೆಚ್ಚಿನ ವಿವರ ನೀಡಲು ಸಾಧ್ಯವಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ. ಇದನ್ನೂ ಓದಿ: ಕಸ ಹಾಕಿ ಬರೋದಾಗಿ ಹೇಳಿ ಲವ್ವರ್ ಜೊತೆ ಎಸ್ಕೇಪ್ – ಊಟಕ್ಕೆ ನಿದ್ದೆ ಮಾತ್ರೆ ಹಾಕಿ ಪರಾರಿ: ಪತಿ ಆರೋಪ
[ad_2]
Source link publictv.in

















Leave a Reply