Advertisement

ಕುಂಭಮೇಳದ ವೈರಲ್ ಹುಡುಗಿ ಮೊನಾಲಿಸಾ ಈಗ ಗರ್ಭಿಣಿ

[ad_1]

Monalisa

ಹಾಕುಂಭಮೇಳದ ಹುಡುಗಿ ಮೊನಾಲಿಸಾ ಭೋಸ್ಲೆ (Monalisa Bhosle) ಗರ್ಭಿಣಿಯಾಗಿದ್ದು, ಪತಿ ಫರ್ಮಾನ್ ಖಾನ್ (Farman Khan) ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಇತ್ತೀಚಿಗಷ್ಟೇ ಮದುವೆಯಾಗಿದ್ದ ಕುಂಭಮೇಳದ ವೈರಲ್ ಹುಡುಗಿ ಮೊನಾಲಿಸಾ ಭೋಂಸ್ಲೆ ಇದೀಗ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಕುಂಭಮೇಳದ ಮೊನಾಲಿಸಾ ಮದುವೆಗೆ ಟ್ವಿಸ್ಟ್‌ – ಪತಿ ಫರ್ಮಾನ್ ಖಾನ್ ವಿರುದ್ಧ ಪೋಕ್ಸೋ ಕೇಸ್

ಮೊನಾಲಿಸಾ ಬೋಂಸ್ಲೆ 2026ರ ಮಾರ್ಚ್ 11ರಂದು ಕೇರಳದ ಪೂವಾರ್‌ನ ಅರುಮಾನೂರ್ ನೈನಾರ್ ದೇಗುಲದಲ್ಲಿ ಪ್ರಿಯಕರ ಫರ್ಮಾನ್ ಖಾನ್ ಜೊತೆ ಮದುವೆಯಾಗಿದ್ದರು. ಅದಾದ ಬಳಿಕ ಲವ್ ಜಿಹಾದ್, ಅವರ ವಯಸ್ಸು ಸೇರಿದಂತೆ ಹಲವು ಪ್ರಶ್ನೆಗಳು ಮುನ್ನೆಲೆಗೆ ಬಂದಿದ್ದವು. ಇದನ್ನೇ ಆಧಾರವಾಗಿಟ್ಟುಕೊಂಡು ರಾಷ್ಟ್ರೀಯ ಪರಿಶಿಷ್ಟ ಪಂಗಡಗಳ ಆಯೋಗ ಕೇರಳ ಮತ್ತು ಮಧ್ಯಪ್ರದೇಶದಲ್ಲಿ ವಿಸ್ತಾರವಾದ ತನಿಖೆ ಆರಂಭಿಸಿತ್ತು. ಬಳಿಕ ಮಧ್ಯಪ್ರದೇಶದ ಖಾರ್ಗೋನ್ ಜಿಲ್ಲೆಯ ಮಹೇಶ್ವರ ಪೊಲೀಸ್ ಠಾಣೆಯಲ್ಲಿ ಪತಿ ಫರ್ಮಾನ್ ಖಾನ್ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದೆ.

ಪೋಕ್ಸೋ ಪ್ರಕರಣ ಸಂಬಂಧ ಸದ್ಯ ತನಿಖೆ ನಡೆಯುತ್ತಿದ್ದು, ಹೇಳಿಕೆ ದಾಖಲಿಸಲು ಪೊಲೀಸರ ಮುಂದೆ ಮೊನಾಲಿಸಾ ಹಾಜರಾಗುವ ನಿರೀಕ್ಷೆಯಿದೆ. ಆದರೆ ಗರ್ಭಿಣಿಯಾಗಿರುವ ಕಾರಣ ಪ್ರಯಾಣಿಸಲು ಅಥವಾ ವಿಚಾರಣೆಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ ಎಂದು ಫರ್ಮಾನ್ ಖಾನ್ ಅಧಿಕಾರಿಗಳಿಗೆ ತಿಳಿಸಿದ್ದಾರೆ.

ಸದ್ಯ ಪೊಲೀಸರು ಈ ಸಂಬಂಧ ವೈದ್ಯಕೀಯ ದೃಢೀಕರಣ ಪಡೆಯುವ ಸಾಧ್ಯತೆಯಿದೆ. ಕೇರಳ ಹೈಕೋರ್ಟ್ ದಂಪತಿಗೆ ಮಧ್ಯಂತರ ತಡೆ ನೀಡಿದ್ದು, ಮೇ.20ರವರೆಗೆ ಫರ್ಮಾನ್ ಖಾನ್ ಬಂಧನಕ್ಕೆ ತಡೆ ನೀಡಿದೆ.ಇದನ್ನೂ ಓದಿ:ಪ್ರಿಯಕರ ಫರ್ಮಾನ್‌ ಖಾನ್‌ ಜೊತೆ ಕುಂಭಮೇಳದ ವೈರಲ್‌ ತಾರೆ ಮೊನಾಲಿಸಾ ಮದುವೆ

[ad_2]

Source link publictv.in

Leave a Reply

Your email address will not be published. Required fields are marked *