Advertisement

ಜಡೇಜಾ ಜಾದೂ – ತವರಲ್ಲೇ ಜೈಂಟ್ಸ್‌ ಕೆಡವಿ ಆರ್‌ಸಿಬಿ ಹಿಂದಿಕ್ಕಿದ ರಾಯಲ್ಸ್‌

[ad_1]

ಲಕ್ನೋ: ಬೌಲಿಂಗ್‌, ಅತ್ಯುತ್ತಮ ಫೀಲ್ಡಿಂಗ್‌ ನೆರವಿನಿಂದ ಲಕ್ನೋ ಸೂಪರ್‌ ಜೈಂಟ್ಸ್‌(Lucknow Super Giants) ವಿರುದ್ಧ ರಾಜಸ್ಥಾನ ರಾಯಲ್ಸ್‌(Rajasthan Royals) 40 ರನ್‌ಗಳ ಜಯ ಸಾಧಿಸಿ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಜಿಗಿದಿದೆ.

ಟಾಸ್‌ ಸೋತು ಮೊದಲು ಬ್ಯಾಟ್‌ ಬೀಸಿದ ರಾಜಸ್ಥಾನ 6 ವಿಕೆಟ್‌ ನಷ್ಟನಕ್ಕೆ 159 ರನ್‌ ಹೊಡೆಯಿತು. ಸುಲಭದ ಸವಾಲನ್ನು ಬೆನ್ನಟ್ಟಿದ ಲಕ್ನೋ 17.6 ಓವರ್‌ಗಳಲ್ಲಿ 119 ರನ್‌ಗಳಿಗೆ ಎಲ್ಲಾ ವಿಕೆಟ್‌ ಕಳೆದುಕೊಂಡು ಸೋಲನ್ನು ಒಪ್ಪಿಕೊಂಡಿತು.

7 ಪಂದ್ಯ, 10 ಅಂಕ, 0.790 ನೆಟ್‌ ರನ್‌ ರೇಟ್‌ನೊಂದಿಗೆ ರಾಜಸ್ಥಾನ ಎರಡನೇ ಸ್ಥಾನಕ್ಕೆ ಜಿಗಿದರೆ 6 ಪಂದ್ಯ, 8 ಅಂಕ 1.171 ನೆಟ್‌ ರನ್‌ ರೇಟ್‌ ಹೊಂದಿರುವ ಬೆಂಗಳೂರು ಮೂರನೇ ಸ್ಥಾನಕ್ಕೆ ಜಾರಿದೆ.

ಲಕ್ನೋ 11 ರನ್‌ಗಳಿಸುವಷ್ಟರಲ್ಲೇ ಪ್ರಮುಖ 3 ವಿಕೆಟ್‌ ಕಳೆದುಕೊಂಡಿತು. ಆಯುಷ್‌ ಬದೋನಿ, ರಿಷಭ್‌ ಪಂತ್‌, ಮಾರ್ಕ್ರಮ್‌ ಸೊನ್ನೆಗೆ ಔಟಾದರು. ವಿಕೆಟ್‌ ಕಳೆದುಕೊಂಡಿದ್ದರೂ ಮಿಷೆಲ್‌ ಮಾರ್ಷ್‌ 55 ರನ್‌(41 ಎಸೆತ, 6 ಬೌಂಡರಿ, 2 ಸಿಕ್ಸ್‌) ನಿಕೂಲಸ್‌ ಪೂರನ್‌ 22 ರನ್‌(25 ಎಸೆತ, 3 ಬೌಂಡರಿ) ಹಿಮ್ಮತ್‌ ಸಿಂಗ್‌ 15 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರು.

ಜೋಫ್ರಾ ಆರ್ಚರ್‌ 3 ವಿಕೆಟ್‌, ನಂದ್ರೆ ಬರ್ಗರ್‌, ಬ್ರಿಜೇಶ್‌ ಶರ್ಮಾ ತಲಾ 2 ವಿಕೆಟ್‌ ಪಡೆದರೆ ರವೀಂದ್ರ ಜಡೇಜಾ ಮತ್ತು ರವಿ ಬಿಷ್ಣೋಯಿ ತಲಾ ಒಂದೊಂದು ವಿಕೆಟ್‌ ಪಡೆದರು. ಲಕ್ನೋದ 8 ಮಂದಿ ಆಟಗಾರರ ರನ್‌ 2 ಅಂಕಿಯನ್ನು ದಾಟಿರಲಿಲ್ಲ.

ರಾಜಸ್ಥಾನ ರಾಯಲ್ಸ್‌ಗೆ ಆರಂಭದಲ್ಲೇ ಲಕ್ನೋ ಬೌಲರ್‌ಗಳು ಶಾಕ್‌ ನೀಡಿದ್ದರು. ತಂಡದ ಮೊತ್ತ 32 ಆಗಿದ್ದಾಗ 22 ರನ್‌ ಗಳಿಸಿದ್ದ ಯಶಸ್ವಿ ಜೈಸ್ವಾಲ್‌ ಔಟಾದರು. ಜೈಸ್ವಾಲ್‌ ಔಟಾದ ಬೆನ್ನಲ್ಲೇ ಮೊದಲ ಎಸೆತದಲ್ಲಿ ಧ್ರುವ್‌ ಜರೇಲ್‌ ಔಟಾದರೆ ನಂತರ ವೈಭವ್‌ ಸೂರ್ಯವಂಶಿ ಕ್ಯಾಚ್‌ ನೀಡಿ ಹೊರನಡೆದರು.

ನಾಯಕ ರಿಯಾನ್‌ ಪರಾಗ್‌ 20 ರನ್‌, ಹೆಟ್ಟೇಯರ್‌ 22 ರನ್‌, ಫೆರೇರಾ 20 ರನ್‌ ಹೊಡೆದು ವಿಕೆಟ್‌ ಒಪ್ಪಿಸಿದರು, ಕೊನೆಯಲ್ಲಿ ಮುರಿಯದ 7ನೇ ವಿಕೆಟಿಗೆ ಆಲ್‌ರೌಂಡರ್‌ ರವೀಂದ್ರ ಜಡೇಜಾ ಮತ್ತು ಶುಭಂ ದುಬೆ 25 ಎಸೆತಗಳಲ್ಲಿ 49 ರನ್‌ ಜೊತೆಯಾಟವಾಡಿದರು.

ಅದರಲ್ಲೂ ಮಯಾಂಕ್‌ ಯಾದವ್‌ ಎಸೆದ ಇನ್ನಿಂಗ್ಸ್‌ನ 20ನೇ ಓವರ್‌ನಲ್ಲಿ 2 ಬೌಂಡರಿ, 1 ಸಿಕ್ಸ್‌ ಸೇರಿದಂತೆ 20 ರನ್‌ ಜಡೇಜಾ(Ravindra Jadeja) ಚಚ್ಚಿದ್ದರಿಂದ ರಾಜಸ್ಥಾನದ ಮೊತ್ತ 150 ರನ್‌ಗಳ ಗಡಿ ದಾಟಿತು. ಜಡೇಜಾ ಔಟಾಗದೇ 43 ರನ್‌(29 ಎಸೆತ, 2 ಬೌಂಡರಿ, 1 ಸಿಕ್ಸ್‌), ಶುಭಂ ದುಬೆ ಔಟಾಗದೇ 19 ರನ್‌(11 ಎಸೆತ, 3 ಬೌಂಡರಿ) ಹೊಡೆದರು.



[ad_2]

Source link publictv.in

Leave a Reply

Your email address will not be published. Required fields are marked *