Advertisement

ಚಿನ್ನ ಖರೀದಿಗೆ ಹೋಗಿದ್ದವನಿಂದ ಕೋಟಿ ಕೋಟಿ ಹಣ ಪಡೆದು ವಂಚನೆ – ಖತರ್ನಾಕ್‌ ಲೇಡಿ ಮಾಡಿದ್ದೇನು?

[ad_1]

HSR Layout Crime

ಬೆಂಗಳೂರು: ಚಿನ್ನ ಖರೀದಿಗೆ ಹೋಗಿದ್ದವರಿಂದ ಕೋಟಿ ಕೋಟಿ ಹಣ ಪಡೆದು ಚಿನ್ನವನ್ನೂ ಕೊಡದೇ, ಹಣವೂ ಹಿಂತಿರುಗಿಸದೇ ಎಂಪಿ ಚಿನ್ನದ ಮಳಿಗೆಯ ಮಾಲೀಕ ಇಂದರ್ ಚಂದ್ ಮಹಿಳೆಯ ಜೊತೆ ಸೇರಿ ಹಣ ಲಪಟಾಯಿಸಿರೋ ಘಟನೆ ಹೆಚ್‌ಎಸ್‌ಆರ್‌ ಲೇಔಟ್‌ನಲ್ಲಿ ನಡೆದಿದೆ.

ಸರ್ಜಾಪುರ ಮೂಲದ ಪುನೀತ್ ಎಂಬಾತ ಚಿನ್ನ ಖರೀದಿ ಮಾಡುವ ಪ್ಲಾನ್ ನಲ್ಲಿದ್ದರು. ಪುನೀತ್ ಸಂಬಂದಿ ಸವಿತಾ ರೆಡ್ಡಿ ಹೆಚ್‌ಎಸ್‌ಆರ್‌ ಲೇಔಟ್ ನಲ್ಲಿರುವ ಎಂಪಿ ಚಿನ್ನದ ಮಳಿಗೆಯಲ್ಲಿ ಚಿನ್ನ ಕಡಿಮೆ ಬೆಲೆ ಹಾಗೂ ವೆಸ್ಟೆಜ್ ಚಾರ್ಜ್ ತುಂಬಾನೇ ಕಡಿಮೆ ಇರುತ್ತೆ ಎಂದು ನಂಬಿಸಿದ್ದಾಳೆ. ಇದನ್ನೂ ಓದಿ: ಪಾರಿವಾಳದ ವಿಚಾರಕ್ಕೆ ಗಲಾಟೆ – ಚಾಕು ಇರಿದು ಯುವಕನ ಹತ್ಯೆ

HSR Layout Crime 3

ಸಂಬಂದಿ ಸವಿತಾ ರೆಡ್ಡಿಯ ಮಾತು ಕೇಳಿ ಪುನೀತ್ ಎರಡು ಕೋಟಿ ನಗದು ಹಣದೊಂದಿಗೆ ಎಂಪಿ ಚಿನ್ನದ ಮಳಿಗೆಗೆ ಹೋಗಿದ್ದಾರೆ. 90 ಲಕ್ಷ ರೂ.ನ ಎರಡು ಕಾಟನ್ ಬಾಕ್ಸ್ ಹಾಗೂ 20 ಲಕ್ಷ ರೂಪಾಯಿತ ಒಂದು ಬಾಗ್ ಇಸ್ಕೊಂಡು ಅರ್ಧ ಗಂಟೆ ಹೊರಗಡೆ ಇರಿ ನಿಮ್ಮ ದುಡ್ಡು ಸರಿ ಇದೆ ಎಂದು ನಂಬಿಸಿ ಒಳಗಡೆ ಹೋದವರೇ ಮರಳಿ ಬರಲಿಲ್ಲ. ಇದನ್ನೂ ಓದಿ: ಪ್ರೇಮಾ ನಂಬರ್‌ ಬ್ಲಾಕ್, ಮಾಜಿ ಲವರ್ ಸಂಪರ್ಕದಲ್ಲಿದ್ದ ಕಿರಣ್‌ – ಬ್ಯಾಡರಹಳ್ಳಿ ಕೇಸ್‌ಗೆ ಹೊಸ ಟ್ವಿಸ್ಟ್

ಸಿಬ್ಬಂದಿ ಕೇಳಿದರೆ ಮಾಲೀಕರ ಜೊತೆ ಮಾತನಾಡಿ, ಅಂತ ಪುನೀತ್‌ ಕುಟುಂಬಸ್ಥರನ್ನ ದಬಾಯಿಸಿ ಕಳಿಸಿದ್ದಾರೆ. ಮಾಲೀಕನಿಗೆ ಫೋನ್‌ ಮಾಡಿದ್ದರೆ, ಮಹಿಳೆ ಸವಿತಾ ರೆಡ್ಡಿಗೆ ಮಾತನಾಡಿದ್ದೀನಿ ಅಲ್ಲೇ ಮಾತನಾಡಿಕೊಳ್ಳಿ ಎಂದು ಉಡಾಫೆ ಉತ್ತರ ಕೊಟ್ಟು ಕೈ ತೊಳೆದುಕೊಂಡಿದ್ದಾನೆ. 2 ಕೋಟಿ ಹಾರ್ಡ್ ಕ್ಯಾಶ್ ಕೊಟ್ಟು ಕಂಗಾಲಾಗಿದ್ದ ಪುನೀತ್ ಹೆಚ್‌ಎಸ್‌ಆರ್ ಲೇಔಟ್ ಪೊಲೀಸರಿಗೆ ದಾಖಲೆ ಸಮೇತವಾಗಿ ದೂರು ನೀಡಿದ್ದಾರೆ. ‌

HSR Layout Crime 2

ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಂಚಕರ ವಿರುದ್ಧ ಇದುವರೆಗೂ ಕಾನೂನು ಕ್ರಮ ಕೈಗೊಂಡಿಲ್ಲ. ಪೊಲೀಸರು ಕೂಡ ಅವರ ಜೊತೆಯಲ್ಲಿ ಶಾಮೀಲ್ ಆಗಿದ್ದಾರೆಂದು ಹಣ ಕಳೆದುಕೊಂಡ ಪುನೀತ್ ಆರೋಪಿಸಿದ್ದಾರೆ. ಪುನೀತ್ ಎಲ್ಲವು ಹಾರ್ಡ್ ಕ್ಯಾಶ್ ಕೊಟ್ಟಿರುವುದರಿಂದ ಆರೋಪಿಗಳು ಕಾನೂನು ಕುಣಿಕೆಯಿಂದ ತಪ್ಪಿಸಿಕೊಳ್ಳಲು ಸುಲಭವಾಗಿದೆ. ಇದನ್ನೂ ಓದಿ: ಇಂದಿಗೆ ಕಾಫಿಫೋಸಾ ಅವಧಿ ಅಂತ್ಯ – ಜೈಲಿನಿಂದ ರನ್ಯಾರಾವ್‌ ಬಿಡುಗಡೆ

[ad_2]

Source link publictv.in

Leave a Reply

Your email address will not be published. Required fields are marked *