Advertisement

ಹಾರ್ಮುಜ್‌ಗೆ ದಿಗ್ಬಂಧನ ವಿಧಿಸಿರೋ ಅಮೆರಿಕ ಸೇನೆಗೆ ದೊಡ್ಡ ಹೊಡೆತ – ನೌಕಾಪಡೆ ಕಾರ್ಯದರ್ಶಿ ರಾಜೀನಾಮೆ

[ad_1]

John Phelan

ಟೆಹ್ರಾನ್/ವಾಷಿಂಗ್ಟನ್:‌ ಇರಾನ್‌ನೊಂದಿಗೆ 2ನೇ ಸುತ್ತಿನ ಮಾತುಕತೆ ಕುರಿತು ಶುಕ್ರವಾರದ ವೇಳೆಗೆ ಒಳ್ಳೆಯ ಸುದ್ದಿ ಬರಬಹುದು. 36 ರಿಂದ 72 ಗಂಟೆಗಳೊಳಗೆ ಶಾಂತಿ ಮಾತುಕತೆ ಪುನರಾರಂಭಗೊಳ್ಳಬಹುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಈ ಮಧ್ಯೆಯೇ ಅಮೆರಿಕ ಸೇನೆಗೆ ದೊಡ್ಡ ಹೊಡೆತ ಬಿದ್ದಿದೆ.

ಅಮೆರಿಕದ ನೌಕಾಪಡೆಯ ಕಾರ್ಯದರ್ಶಿ ಜಾನ್‌ ಫೆಲನ್‌ (US Secretary of Navy John Phelan) ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಹಠಾತ್‌ ರಾಜೀನಾಮೆಗೆ ಯಾವುದೇ ಕಾರಣ ತಿಳಿಸಿಲ್ಲ. ಫೆಲನ್‌ ಅವರಿಂದ ತೆರವಾದ ಸ್ಥಾನಕ್ಕೆ ಅಧೀನ ಕಾರ್ಯದರ್ಶಿ ಹಂಗ್ ಕಾವೊ ನೌಕಾಪಡೆಯ ಹಂಗಾಮಿ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.

mojtaba khamenei and trump

ನೌಕಾಪಡೆಯ ಕಾರ್ಯದರ್ಶಿ ಜಾನ್‌ ಸಿ. ಫೆಲನ್‌ ಯುಎಸ್‌ ಆಡಳಿತವನ್ನು ತೊರೆಯುತ್ತಿದ್ದಾರೆ. ಇದು ತಕ್ಷಣದಿಂದಲೇ ಜಾರಿಗೆ ಬರಲಿದೆ ಎಂದು ಪೆಂಟಗನ್‌ (Pentagon) ವಕ್ತಾರ ಸೀನ್ ಪಾರ್ನೆಲ್ ಎಕ್ಸ್ ಪೋಸ್ಟ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಯುನೈಟೆಡ್ ಸ್ಟೇಟ್ಸ್ ನೌಕಾಪಡೆಗೆ ಫೆಲನ್‌ ಅವರು ಸಲ್ಲಿಸಿದ ಸೇವೆಗಾಗಿ ನಾವು ಕೃತಜ್ಞರಾಗಿರುತ್ತೇವೆ. ಭವಿಷ್ಯದಲ್ಲಿ ಅವರ ಪ್ರಯತ್ನಗಳು ಸುಃಖಕರವಾಗಿರಲಿ ಎಂದು ಹಾರೈಸಿದ್ದಾರೆ.

2 Iranian Gunboats Fire On Tanker In Hormuz Crew Safe UK Body

ಟ್ರಂಪ್‌ – ಮಿಲಿಟರಿ ನಾಯಕರ ನಡುವೆ ಭಿನ್ನ?
ಡೊನಾಲ್ಡ್‌ ಟ್ರಂಪ್‌ ಅವರು 2ನೇ ಅವಧಿಗೆ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ, ಯುಎಸ್ ನೌಕಾಪಡೆ ಮತ್ತು ಕರಾವಳಿ ಮುಖ್ಯಸ್ಥರು, ರಾಷ್ಟ್ರೀಯ ಭದ್ರತಾ ಸಂಸ್ಥೆ (ಎನ್‌ಎಸ್‌ಎ) ಮುಖ್ಯಸ್ಥರು ಮತ್ತು ವಾಯುಪಡೆಯ ಉಪ ಮುಖ್ಯಸ್ಥರು ಸೇರಿದಂತೆ ಅನೇಕ ಉನ್ನತ ಅಧಿಕಾರಿಗಳನ್ನ ವಜಾಗೊಳಿಸಿದೆ. ಇದರಿಂದ ಮಿಲಿಟರಿ ನಾಯಕರು ಹಾಗೂ ಟ್ರಂಪ್‌ ನಡುವೆ ಭಿನ್ನಾಭಿಪ್ರಾಯ ಮೂಡಿದೆ ಎಂದು ಹೇಳಲಾಗುತ್ತಿದೆ. ಈ ಬೆಳವಣಿಗೆ ಮಧ್ಯೆಯೇ ಫೆಲನ್ ತಮ್ಮ ಹುದ್ದೆಗೆ ಗುಡ್‌ ಬೈ ಹೇಳಿದ್ದಾರೆ.

ಒಂದು ಕಡೆ ಯುಎಸ್ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್, ಟ್ರಂಪ್‌ ಅವರ ಆಡಳಿತವನ್ನು ಸಮರ್ಥಿಸಿಕೊಂಡ್ರೆ, ಡೆಮೊಕ್ರಾಟಿಕ್‌ ನಾಯಕರು ಮಿಲಿಟರಿಯನ್ನು ಟ್ರಂಪ್‌ ರಾಜಕೀಯಗೊಳಿಸುತ್ತಿದ್ದಾರೆ ಎಂದು ತೆಗಳಿದ್ದಾರೆ.

[ad_2]

Source link publictv.in

Leave a Reply

Your email address will not be published. Required fields are marked *