Advertisement

ಜಾತ್ರೆಯಲ್ಲಿ ರಥದ ಚಕ್ರಕ್ಕೆ ಸಿಲುಕಿ ವ್ಯಕ್ತಿಯ ಎರಡೂ ಕಾಲು ಕಟ್ – ಇಬ್ಬರ ಸ್ಥಿತಿ ಗಂಭೀರ

[ad_1]

Basava Kalyana jatre

ಬೀದರ್: ಜಾತ್ರೆಯಲ್ಲಿ ರಥದ ಚಕ್ರಕ್ಕೆ ಸಿಲುಕಿ ವ್ಯಕ್ತಿಯೋರ್ವನ ಎರಡೂ ಕಾಲು ಕಟ್ ಆಗಿದ್ದು, ಇಬ್ಬರ ಕಾಲಿಗೆ ಗಂಭೀರವಾಗಿ ಗಾಯವಾಗಿರುವ ಘಟನೆ ಬೀದರ್ (Bidar) ಜಿಲ್ಲೆಯ ಬಸವಕಲ್ಯಾಣ (Basava Kalyana) ನಗರದ ಥೇರು ಮೈದಾನದಲ್ಲಿ ನಡೆದಿದೆ.

ಶ್ರೀ ಬಸವೇಶ್ವರ ಜಾತ್ರಾ ರಥದಡಿ ಸಿಲುಕಿ ಧನರಾಜ್ ಎಂಬುವವರ ಎರಡೂ ಕಾಲು ಕತ್ತರಿಸಿದೆ. ಇಬ್ಬರು ವ್ಯಕ್ತಿಗಳ ಕಾಲಿಗೆ ಗಂಭೀರವಾಗಿ ಗಾಯವಾಗಿದೆ. ಭೀಮಾಶಂಕರ ಎಂಬಾತನಿಗೆ ಸಣ್ಣಪುಟ್ಟ ಗಾಯವಾಗಿದೆ. ಇದನ್ನೂ ಓದಿ: ಖಾಸಗಿ ಫೋಟೋ, ವಿಡಿಯೋ ಇಟ್ಕೊಂಡು 1.5 ಕೋಟಿ ರೂ.ಗೆ ಬೇಡಿಕೆ – ಲೇಡಿ ಇನ್ಫ್ಲುಯೆನ್ಸರ್‌ ವಿರುದ್ಧ FIR

ಬಸವಕಲ್ಯಾಣದಲ್ಲಿ ಶ್ರೀ ಬಸವೇಶ್ವರ ಜಾತ್ರಾ ರಥೋತ್ಸವ ನಡೆಯುತ್ತಿತ್ತು. ಲಕ್ಷಾಂತರ ಭಕ್ತ ಸಮೂಹ ಥೇರು ನೋಡಲು ಆಗಮಿಸಿತ್ತು. ಈ ವೇಳೆ ರಥ ನಿಯಂತ್ರಣ ಕಳೆದುಕೊಂಡಿದ್ದು, ಕೆಲವರ ಕಾಲಿನ ಮೇಲೆ ಹರಿದು ಹೋಗಿದೆ.

ಉತ್ಸಾಹದಿಂದ ರಥವನ್ನು ಎಳೆಯಲು ಬಸವಭಕ್ತರು ಮುಂದಾಗಿದ್ದು, ಈ ವೇಳೆ ಏಕಾಏಕಿ ನುಕಾಟ ತಳ್ಳಾಟ ಆಗಿದ್ದರಿಂದ ಘಟನೆ ಸಂಭವಿಸಿದೆ. ಸದ್ಯ ಗಾಯಾಳುಗಳನ್ನು ಬಸವಕಲ್ಯಾಣ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಓರ್ವ ಗಾಯಾಳುವನ್ನು ಕಲಬುರಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.ಇದನ್ನೂ ಓದಿ: TamilNadu Elections 2026 | ಮತದಾನ ಜೋರು – ಹಕ್ಕು ಚಲಾಯಿಸಿದ ತಲೈವಾ, ದಳಪತಿ, ತ್ರಿಶಾ, ಕಮಲ್ ಹಾಸನ್


[ad_2]

Source link publictv.in

Leave a Reply

Your email address will not be published. Required fields are marked *