Advertisement

ಖಾಸಗಿ ಫೋಟೋ, ವಿಡಿಯೋ ಇಟ್ಟುಕೊಂಡು ಸೋಷಿಯಲ್ ಮೀಡಿಯಾ ಸ್ಟಾರ್ ಒಬ್ಬಳಿಂದ ಉದ್ಯಮಿಗೆ ಬ್ಲ್ಯಾಕ್ ಮೇಲ್!!

[ad_1]

Bengaluru : ಸೋಷಿಯಲ್ ಮೀಡಿಯಾ ಸ್ಟಾರ್ ಒಬ್ಬಳು ಉದ್ಯಮಿಯ ಖಾಸಗಿ ಫೋಟೋ, ವಿಡಿಯೋಗಳನ್ನು ಇಟ್ಟುಕೊಂಡು ಬ್ಲಾಕ್ ಮೇಲ್ ಮಾಡಿ ಲಕ್ಷ ಲಕ್ಷ ಹಣ ಪೀಕಿ, ಈಗ ಒಂದು ಕೋಟಿ ರೂಪಾಯಿಗೆ ಬೇಡಿಕೆ ಇಟ್ಟಿರುವ ಘಟನೆ ಬೆಗಳೂರಿನಲ್ಲಿ ಬೆಳಕಿಗೆ ಬಂದಿದೆ.

ಉದ್ಯಮಿ ಕಾರ್ತಿಕ್ ಎಂಬುವವರು ಸಾಧನಾ ಎಂಬ ಸ್ಪೋಷಿಯಲ್ ಮೀಡಿಯಾ ಸ್ಟಾರ್ ವಿರುದ್ಧ ಈ ದೂರು ದಾಖಲಿಸಿದ್ದಾರೆ. ಕಾರ್ತಿಕ್, ಹೆಚ್ ಕೆ ಪರ್ಮನೆಂಟ್ ಮೇಕಪ್ ಕ್ಲಿನಿಕ್ ಮಾಲೀಕರಾಗಿದ್ದಾರೆ. ಮೇಕಪ್ ಕ್ಲಿನಿಕ್ ಗೆ ಬಂದಿದ್ದ ಸಾಧನಾ ಮಾಲೀಕ ಕಾರ್ತಿಕ್ ಪರಿಚಯವಾಗಿದ್ದು, ಇಬ್ಬರ ನಡುವೆ ಸ್ನೇಹ ಬೆಳೆದಿದೆ. ಆಗಾಗ ಇಬ್ಬರೂ ಓಡಾಟವನ್ನೂ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ತೆಗೆದ ಫೋಟೋ, ವಿಡಿಯೋಗಳನ್ನು ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡಿ ಹಣ ಕ್ಕೆ ಬೇಡಿಕೆ ಇಟ್ಟಿರುವ್ದಲ್ಲದೇ ಕಾರ್ತಿಕ್ ಅವರ ಪತ್ನಿಗೂ ಖಾಸಗಿ ಫೋಟೋ, ವಿಡಿಯೋಗಳನ್ನು ಕಳುಹಿಸಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಫೋಟೊ, ವಿಡಿಯೋಗಳನ್ನು ತೋರಿಸಿ ಬೆದರಿಕೆ ಹಾಕಿ ಕಾರ್ತಿಕ್ ನಿಂದ 70 ಸಾವಿರ ರೂ. ಗೋಲ್ಡ್ ರಿಂಗ್, 70 ಸಾವಿರ ರೂ.ಗೋಲ್ಡ್ ಚೈನ್ ಹಾಗೂ 10 ಲಕ್ಷ ರೂಪಾಯಿ ಹಣ ಪಡೆದಿದ್ದಳಂತೆ. ಅಲ್ಲದೇ 1.5 ಲಕ್ಷ ಮೌಲ್ಯದ ಐಫೋನ್ ಪಡೆದುಕೊಂಡಿದ್ದಾಳೆ. ಇಷ್ಟಕ್ಕೆ ಸುಮ್ಮನಾಗದ ಸಾಧನಾ ಒಂದು ಕೋಟಿ ರೂ ಹಣಕ್ಕೆ ಬೇದಿಕೆ ಇಟ್ಟಿದ್ದು, ಹಣ ಕೊಡದಿದ್ದರೆ ಪತ್ನಿಗೆ ಫೋಟೋ, ವಿಡಿಯೋ ಕಳುಹಿಸಿವುದಾಗಿ ಹೇಳಿ ಫೋಟೋ, ವಿಡಿಯೋಗಳನ್ನು ಕಳುಹಿಸಿ ಬೆದರಿಕೆ ಹಾಕಿದ್ದಾಳೆ ಎನ್ನಲಾಗಿದೆ.

ಇದರಿಂದ ರೋಸಿ ಹೋದ ಕಾರ್ತಿಕ್, ಜಯನಗರ ಠಾಣೆಯಲ್ಲಿ ಶಾದನಾ ವಿರುದ್ಧ ದೂರು ದಾಖಲಿಸಿದ್ದಾರೆ. ಸಾಧನಾ ಕಳುಹಿಸುತ್ತಿರುವ ಮೆಸೇಜ್, ಫೋಟೋ, ವಿಡಿಯೋಗಳ ಸಮೇತ ದೂರು ನೀಡಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

banner



[ad_2]

Source link

Leave a Reply

Your email address will not be published. Required fields are marked *