[ad_1]
3
Kolara: ಇಂದು ರಾಜ್ಯದಲ್ಲಿ 2025 -26 ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷಾ ಪಲಿತಾಂಶ ಪ್ರಕಟಗೊಂಡಿದೆ. ಅನೇಕ ವಿದ್ಯಾರ್ಥಿಗಳು ನಿರೀಕ್ಷೆ ಮಾಡಿದ್ದಕ್ಕಿಂತ ಹೆಚ್ಚಿನ ಅಂಕವನ್ನು ಪಡೆದು ಸಂಭ್ರಮಿಸಿದರೆ ಇನ್ನು ಕೆಲವರು ಪಾಸ್ ಆಗಿದ್ದೇವೆ ಎಂದು ಖುಷಿಪಟ್ಟಿದ್ದಾರೆ. ಈ ಸಂಭ್ರಮ ವಿದ್ಯಾರ್ಥಿ ಒಬ್ಬನನ್ನು ದುರಂತ ಅಂತ್ಯಮಾಡಿದೆ.


ಹೌದು, ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಪಾಸ್ ಆದೆ ಎಂದು ವಿದ್ಯಾರ್ಥಿ ಒಬ್ಬ ಸಂಭ್ರಮಿಸಲು ಬಾವಿಗೆ ಈಜಲು ಹೋಗಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಅಮಾನುಷ ಘಟನೆ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಸೋಣ್ಣವಾಡಿ ಗ್ರಾಮದಲ್ಲಿ ಸಂಭವಿಸಿದೆ.
ಸೊಣ್ಣವಾಡಿ ಗ್ರಾಮದ 15 ವರ್ಷದ ಕಿರಣ್ ಮೃತ ದುರ್ದೇವಿ ಎನ್ನಲಾಗಿದೆ. ಎಸ್ ಎಸ್ ಎಲ್ ಸಿ ರಿಸಲ್ಟ್ ಬಂದ ಹಿನ್ನೆಲೆಯಲ್ಲಿ ಕಿರಣ್ ತನ್ನ ಸ್ನೇಹಿತರೊಂದಿಗೆ ಬಾವಿಯಲ್ಲಿ ಈಜಲು ತೆರಳಿದ್ದಾನೆ. ಆಳದ ಬಾವಿಯಲ್ಲಿ ಕಿರಣ್ ಮುಳುಗಿ ಸಾವನಪ್ಪಿದ್ದಾನೆ. ಕಿರಣ್ಗಾಗಿ ಸದ್ಯ ಅಗ್ನಿಶಾಮಕ ಸಿಬ್ಬಂದಿ ಶವಕ್ಕಾಗಿ ಉದ್ಘಾಟ ನಡೆಸುತ್ತಿದ್ದಾರೆ. ಕುಟುಂಬಸ್ಥರ ಅಕ್ರಂದನ ಇದೀಗ ಮುಗಿಲು ಮುಟ್ಟಿದೆ.
[ad_2]
Source link

















Leave a Reply