[ad_1]
ವಾಷಿಂಗ್ಟನ್: ಹಾರ್ಮುಜ್ ಜಲಸಂಧಿಯಲ್ಲಿ (Strait of Hormuz) ಸಮದ್ರ ಬಾಂಬ್(Sea Mines) ಹಾಕುವ ಯಾವುದೇ ಇರಾನಿನ ದೋಣಿಗಳನ್ನು (Iran Boat) ಕಂಡ ತಕ್ಷಣ ಗುಂಡು ಹಾರಿಸಿ ಕೊಲ್ಲಿ (Shoot and Kill) ಎಂದು ಅಮೆರಿಕದ ನೌಕಾಪಡೆಗೆ ಡೊನಾಲ್ಡ್ ಟ್ರಂಪ್ ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ.
ಇರಾನ್ ಮತ್ತು ಅಮೆರಿಕ ನಡುವೆ ಉದ್ವಿಗ್ನತೆ ಹೆಚ್ಚಾಗಿರುವ ಸಂದರ್ಭದಲ್ಲಿ,ಅಂತರಾಷ್ಟ್ರೀಯ ತೈಲ ಸಾಗಣೆಯ ಪ್ರಮುಖ ಮಾರ್ಗವಾದ ಹಾರ್ಮುಜ್ ಜಲಸಂಧಿಯಲ್ಲಿ ಇರಾನ್ ಮೈನ್‌ಗಳನ್ನು ಅಳವಡಿಸುತ್ತಿದೆ ಎನ್ನುವುದು ಅಮೆರಿಕದ ಆರೋಪ. ಈ ಚಟುವಟಿಕೆಯನ್ನು ತಡೆಗಟ್ಟಲು ಟ್ರಂಪ್ ಅವರು, ಯಾವುದೇ ಸಣ್ಣ ದೋಣಿಗಳಿರಲಿ ಅವುಗಳು ಬಾಂಬ್ ಇರಿಸುತ್ತಿರುವುದು ಕಂಡುಬಂದರೆ ಯಾವುದೇ ಮುಲಾಜಿಲ್ಲದೆ ಹೊಡೆದು ಹಾಕಿ ಎಂದು ಸೂಚಿಸಿದ್ದಾರೆ. ಇದನ್ನೂ ಓದಿ: ಹಡಗು ಸಂಚರಿಸದಂತೆ ಸಮುದ್ರದಲ್ಲಿ ಸ್ಫೋಟಕ| ಇರಾನ್ ತಂತ್ರಕ್ಕೆ ಟ್ರಂಪ್ ಕೆಂಡಾಮಂಡಲ – ಏನಿದು ನೇವಲ್ ಮೈನ್ಸ್?
ಜಲಸಂಧಿಯನ್ನು ಸುರಕ್ಷಿತಗೊಳಿಸಲು ಈಗಾಗಲೇ ಅಮೆರಿಕದ ಮೈನ್ ಸ್ವೀಪರ್ (Mine-sweeping) ಹಡಗುಗಳು ಕಾರ್ಯಾಚರಣೆ ನಡೆಸುತ್ತಿವೆ. ಟ್ರಂಪ್ ಅವರು ಈ ಕಾರ್ಯಾಚರಣೆಯ ವೇಗವನ್ನು ಮೂರು ಪಟ್ಟು ಹೆಚ್ಚಿಸಲು ಆದೇಶಿಸಿದ್ದಾರೆ. ವರದಿಗಳ ಪ್ರಕಾರ, ಈ ಜಲಸಂಧಿಯನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಲು ಸುಮಾರು ಆರು ತಿಂಗಳು ಬೇಕಾಗಬಹುದು ಎಂದು ಅಂದಾಜಿಸಲಾಗಿದೆ.
ಟ್ರಂಪ್ ಅವರ ಈ ಎಚ್ಚರಿಕೆಯ ಬೆನ್ನಲ್ಲೇ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯಾಗಿದ್ದು, ಒಂದು ಬ್ಯಾರೆಲ್ ದರ 100 ಡಾಲರ್‌ಗಿಂತಲೂ ಅಧಿಕವಾಗಿದೆ. ಇದನ್ನೂ ಓದಿ: ಭಾರತ, ಚೀನಾ ನರಕದ ಕೂಪಗಳು| ಲ್ಯಾಪ್‌ಟಾಪ್ ಹೊಂದಿರುವ ದರೋಡೆಕೋರರು: ಟ್ರಂಪ್ ಕೆಂಡಾಮಂಡಲ
ಇರಾನ್ ಅಮೆರಿಕ ವಿಧಿಸಿರುವ ನೌಕಾ ದಿಗ್ಬಂಧನವನ್ನು ನೌಕಾ ದರೋಡೆ ಎಂದು ಕರೆದಿದೆ. ಅಮೆರಿಕ ತನ್ನ ದಿಗ್ಬಂಧನವನ್ನು ಹಿಂತೆಗೆದುಕೊಳ್ಳುವವರೆಗೆ ಜಲಸಂಧಿಯನ್ನು ತೆರೆಯುವುದಿಲ್ಲ ಎಂದು ತಿರುಗೇಟು ನೀಡಿದೆ.
[ad_2]
Source link publictv.in

















Leave a Reply