Advertisement

ತಮಿಳುನಾಡು ಇತಿಹಾಸದಲ್ಲೇ ದಾಖಲೆ ಬರೆದ ಮತದಾರ – 89.69% ರಷ್ಟು ಮತದಾನ

[ad_1]

TAMILUNADU ELECTION

ಚೆನ್ನೈ: ತಮಿಳುನಾಡಿನಲ್ಲಿ (Tamil Nadu) ಮೊದಲ ಹಂತದ ಚುನಾವಣೆಯಲ್ಲಿ (Election) 84.69% ರಷ್ಟು ಮತದಾನವಾಗಿದೆ. ಈ ಮೂಲಕ ಸ್ವಾತಂತ್ರ್ಯದ ನಂತರ ಪ್ರಜಾಪ್ರಭುತ್ವದ ವಿಕಾಸದ ದಾಖಲೆಗೆ ತಮಿಳುನಾಡು ಮತದಾರರು ಹೊಸ ಭಾಷ್ಯ ಬರೆದಿದ್ದಾರೆ.

TAMILUNADU ELECTION 1

ಕಳೆದ 60 ವರ್ಷಗಳಿಂದ ರಾಷ್ಟ್ರೀಯ ಪಕ್ಷಗಳನ್ನ ಹೊಸಕಿ ಹಾಕಿ ಪ್ರಾದೇಶಿಕ ಪಕ್ಷಗಳದ್ದೇ ರಾಜ್ಯಭಾರ ನಡೆಯುತ್ತಿತ್ತು. ದ್ರಾವಿಡ ಯುಗಕ್ಕೆ ಮುನ್ನಡಿ ಬರೆದಿದ್ದ 1967ರ ಚುನಾವಣೆಯಲ್ಲೇ ಶೇಕಡಾವರು ಮತದಾನ 75% ದಾಟಿರಲಿಲ್ಲ. ಆದರೆ 2011ರಲ್ಲಿ 78.29% ದಾಖಲೆಯ ಮತದಾನವಾಗಿತ್ತಾದ್ರೂ 80%ರಷ್ಟು ತಲುಪಲು ಸಾಧ್ಯವಾಗಿರಲೇ ಇಲ್ಲ. ಆದ್ರೀಗ 2026 ಚುನಾವಣೆಯಲ್ಲಿ 89.69% ರಷ್ಟು ಮತದಾನವಾಗಿದ್ದು, ಎಲ್ಲಾ ದಾಖಲೆಗಳನ್ನ ಪುಡಿಗಟ್ಟಿದೆ. ಪುರುಷರು 83.57%, ಮಹಿಳೆಯರು 85.76% ಹಾಗೂ ತೃತೀಯ ಲಿಂಗಿಗಳು 60.49% ಮತದಾನ ಮಾಡಿದ್ದಾರೆ. ಇದನ್ನೂ ಓದಿ: ಬಂಗಾಳದಲ್ಲಿ ದಾಖಲೆ – ಅತಿ ಹೆಚ್ಚು ಮತದಾರರು ಡಿಲೀಟ್ ಆದ ಕ್ಷೇತ್ರದಲ್ಲಿ ಹೆಚ್ಚು ವೋಟಿಂಗ್‌!

WhatsApp Image 2026 04 23 at 9.03.40 PM

ಮಹಿಳಾ ಮತದಾರರ ಹೆಚ್ಚಳ, ಎಸ್‍ಐಆರ್ ಪರಿಣಾಮ, ನಟ ವಿಜಯ್ ಹೊಸ ಪಕ್ಷದ ಉದಯ ಮತದಾನದ ಹೆಚ್ಚಳಕ್ಕೆ ಕಾರಣ ಆಗಿರಬಹುದು ಎನ್ನಲಾಗಿದೆ. ಸಹಜವಾಗಿಯೇ ಇದು ಯಾವ ಪಕ್ಷಕ್ಕೆ ಲಾಭ? ಯಾರಿಗೆ ಹೊಡೆತ ಎಂಬುದನ್ನ ತಕ್ಷಣಕ್ಕೆ ಊಹಿಸಲು ಆಗದು. ಇದನ್ನೂ ಓದಿ: West Bengal Election | ಮತದಾನ ಆರಂಭವಾಗುವ ಮೊದಲೇ ಮತಗಟ್ಟೆಗೆ ಆಗಮಿಸಿದ ಆನೆ!

WhatsApp Image 2026 04 23 at 9.03.41 PM

ಎಸ್‍ಐಆರ್ ಬಳಿಕ ತಮಿಳುನಾಡಿನಲ್ಲಿ ಆಗಿದ್ದೇನು?
ಎಸ್‍ಐಆರ್‌ಗೂ ಮೊದಲು 6.41 ಕೋಟಿ ಮತದಾರರಿದ್ದರು. ಎಸ್‍ಐಆರ್ ಬಳಿಕ 5.73 ಕೋಟಿ ಮತದಾರ ಸಂಖ್ಯೆ ಇಳಿಕೆಯಾಗಿದೆ. ಒಟ್ಟು 58 ಲಕ್ಷ ಮತದಾರರನ್ನು ಡಿಲೀಟ್ (ಒಟ್ಟು 13% ಡಿಲೀಟ್) ಮಾಡಲಾಗಿದೆ. ಪುರುಷರಿಗಿಂತ ಮಹಿಳಾ ಮತದಾರರು 10 ಲಕ್ಷ ಹೆಚ್ಚಾಗಿದ್ದಾರೆ. 2021ರ ಚುನಾವಣೆಯಲ್ಲಿ 6ಲಕ್ಷ ಮಹಿಳೆಯರು ಹೆಚ್ಚಾಗಿದ್ದಾರೆ ಎಂದು ವರದಿಯಾಗಿದೆ.

WhatsApp Image 2026 04 23 at 9.03.40 PM 1

ದಾಖಲೆ ಮತದಾನಕ್ಕೆ ಕಾರಣ ಏನಿರಬಹುದು?
ಎಸ್‍ಐಆರ್‌ನಿಂದ ಮತದಾನ 5% ರಷ್ಟು ಹೆಚ್ಚಾಗಿರಬಹುದು. ಮಹಿಳಾ ಮತದಾರರು ಹೆಚ್ಚಾಗಿ ಮತದಾನ ಮಾಡಿರುವುದು ಕಾರಣವಾಗಿದೆ. ಹೊಸ ಪಕ್ಷ ಟಿವಿಕೆ ಉದಯದಿಂದ ಮತದಾನ ಹೆಚ್ಚಳವಾಗಿರಬಹದು. ಯುವ ಮತ್ತು ಹೊಸ ಮತದಾರರು ಮತಗಟ್ಟೆಯತ್ತ ಬಂದಿರಬಹುದು. ಆಡಳಿತ ಪಕ್ಷ ವಿರೋಧಿ ಅಲೆಯೂ ಕಾರಣ ಆಗಿರಬಹುದು.

[ad_2]

Source link publictv.in

Leave a Reply

Your email address will not be published. Required fields are marked *