Advertisement

ಮಡುರೊ ಬಂಧನಕ್ಕೆ ಮನ್ನ ಪಾಲಿಮಾರ್ಕೆಟ್‌ನಲ್ಲಿ ಬೆಟ್ಟಿಂಗ್‌ – ಕೋಟಿ ಕೋಟಿ ದೋಚಿದ್ದ ಅಮೆರಿಕದ ಸೈನಿಕ ಅರೆಸ್ಟ್‌

[ad_1]

ವಾಷಿಂಗ್ಟನ್‌: ಕಂಪನಿಗಳ ಅಧಿಕಾರಿಗಳು ಇನ್ಸೈಡರ್ ಟ್ರೇಡಿಂಗ್ (Insider Trading) ಮಾಡಿ ಸಿಕ್ಕಿ ಬಿದ್ದ ಸುದ್ದಿಯನ್ನು ನೀವು ಓದಿರಬಹುದು. ಆದರೆ ಈಗ ಸೈನಿಕ ʼಮಿಲಿಟರಿ ಇನ್ಸೈಡರ್ ಟ್ರೇಡಿಂಗ್ʼ ಮಾಡಿ ಬಂಧನಕ್ಕೊಳಗಾಗಿದ್ದಾನೆ.

ಹೌದು. ವೆನೆಜುವೆಲಾದ ಮಾಜಿ ಅಧ್ಯಕ್ಷ ನಿಕೋಲಸ್ ಮಡುರೊ (Nicolas Maduro) ಅವರ ಬಂಧನ ಮತ್ತು ಅದಕ್ಕೆ ಸಂಬಂಧಿಸಿದ ಬೆಟ್ಟಿಂಗ್ ಹಗರಣದಲ್ಲಿ ಅಮೆರಿಕದ ಸೈನಿಕನನ್ನು(US Soldier) ಬಂಧನ ಮಾಡಲಾಗಿದೆ.

ಅಮೆರಿಕದ ವಿಶೇಷ ಪಡೆಗಳ (Special Forces) ಮಾಸ್ಟರ್ ಸರ್ಜೆಂಟ್ ಗ್ಯಾನನ್ ಕೆನ್ ವ್ಯಾನ್ ಡೈಕ್‌ನನ್ನು (Gannon Ken Van Dyke) ಏಪ್ರಿಲ್‌ 23 ರಂದು ಬಂಧಿಸಲಾಗಿದೆ.

ಮಡುರೊ ಅವರನ್ನು ಸೆರೆಹಿಡಿಯಲು ನಡೆದ ‘ಆಪರೇಷನ್ ಅಬ್ಸಲ್ಯೂಟ್ ರಿಸಾಲ್ವ್’ (Operation Absolute Resolve) ಎಂಬ ರಹಸ್ಯ ಮಿಲಿಟರಿ ಕಾರ್ಯಾಚರಣೆಯ ಯೋಜನೆಯಲ್ಲಿ ವ್ಯಾನ್ ಡೈಕ್ ಭಾಗಿಯಾಗಿದ್ದ.

ಈ ಕಾರ್ಯಾಚರಣೆಯ ರಹಸ್ಯ ಮಾಹಿತಿಯನ್ನು ಬಳಸಿಕೊಂಡು ವ್ಯಾನ್ ಡೈಕ್ ಪಾಲಿಮಾರ್ಕೆಟ್ (Polymarket) ವೇದಿಕೆಯಲ್ಲಿ ಸುಮಾರು 27 ಲಕ್ಷ ರೂ. (33,000 ಡಾಲರ್‌) ಬಾಜಿ ಕಟ್ಟಿದ್ದ. ಜನವರಿ 3 ರಂದು ಮಡುರೊ ಬಂಧನವಾದ ನಂತರ ಈತ ಸುಮಾರು 3.4 ಕೋಟಿ ರೂ.ಗೂ ಅಧಿಕ (4.09 ಲಕ್ಷ ಡಾಲರ್‌) ಲಾಭ ಗಳಿಸಿದ್ದ.

nicolas maduro 1

ರಹಸ್ಯ ಮಾಹಿತಿಯನ್ನು ವೈಯಕ್ತಿಕ ಲಾಭಕ್ಕಾಗಿ ಬಳಸಿಕೊಂಡಿದ್ದಕ್ಕಾಗಿ (Insider Trading) ಅಮೆರಿಕದ ನ್ಯಾಯ ಇಲಾಖೆಯು ಈತನ ಮೇಲೆ ವಂಚನೆ ಮತ್ತು ಕಳ್ಳತನದ ಆರೋಪಗಳನ್ನು ಈಗ ಹೊರಿಸಿದೆ.

ಸಾಮಾನ್ಯವಾಗಿ ಶೇರು ಮಾರುಕಟ್ಟೆಯಲ್ಲಿ ಕಂಪನಿಯ ರಹಸ್ಯ ಮಾಹಿತಿ ತಿಳಿದವರು ಲಾಭ ಮಾಡಿಕೊಳ್ಳುವುದನ್ನು ಇನ್ಸೈಡರ್ ಟ್ರೇಡಿಂಗ್ ಎಂದು ಕರೆಯಲಾಗುತ್ತದೆ. ಆದರೆ ಇಲ್ಲಿ ನಡೆದದ್ದು ಮಿಲಿಟರಿ ಇನ್ಸೈಡರ್ ಟ್ರೇಡಿಂಗ್.

ಗ್ಯಾನನ್ ಕೆನ್ ವ್ಯಾನ್ ಡೈಕ್‌ಗೆ ಈ ರಹಸ್ಯ ಕಾರ್ಯಾಚರಣೆಯ ನಿಖರವಾದ ದಿನಾಂಕ ಮತ್ತು ಸಮಯ ಮೊದಲೇ ತಿಳಿದಿತ್ತು. ಖಚಿತ ಮಾಹಿತಿ ಸಿಕ್ಕಿದ್ದರಿಂದ ‘ಪಾಲಿಮಾರ್ಕೆಟ್’ನಲ್ಲಿ ಮಡುರೊ 2026ರ ಜನವರಿ ಒಳಗಡೆ ಬಂಧನವಾಗಲಿದ್ದಾರೆ ಎಂದು ದೊಡ್ಡ ಮೊತ್ತದ ಬೆಟ್ಟಿಂಗ್ ಮಾಡಿದ್ದ. ಯಾರಿಗೂ ಸಂಶಯ ಬಾರದಂತೆ ಕ್ರಿಪ್ಟೋ ಕರೆನ್ಸಿ ಬಳಸಿ ಬಾಜಿಯನ್ನು ಕಟ್ಟಲಾಗಿತ್ತು.

ತನಿಖೆ ಶುರುವಾದದ್ದು ಹೇಗೆ?
ಪಾಲಿಮಾರ್ಕೆಟ್ ಎನ್ನುವುದು ಒಂದು ಪಾರದರ್ಶಕ ‘ಬ್ಲಾಕ್‌ಚೈನ್’ ಆಧಾರಿತ ವೇದಿಕೆ. ಮಡುರೊ ಬಂಧನವಾಗುತ್ತಿದ್ದಂತೆ ಕೆಲವು ಅನಾಮಧೇಯ ಖಾತೆಗಳಿಗೆ ಕೋಟ್ಯಂತರ ರೂಪಾಯಿ ಲಾಭ ಬಂದಿರುವುದು ಬೆಳಕಿಗೆ ಬಂದಿದೆ. ಅಷ್ಟೇ ಅಲ್ಲದೇ ಮಡುರೋ ಬಂಧನಾಗುತ್ತದೆ ನಿಖರವಾಗಿ ಬೆಟ್ಟಿಂಗ್‌ ಕಟ್ಟಿದವರು ಯಾರು ಎನ್ನುವ ಪ್ರಶ್ನೆಯೂ ಎದ್ದಿತ್ತು. ಈ ಬೆಟ್‌ ಮೇಲೆ ಭಾರೀ ಅನುಮಾನ ವ್ಯಕ್ತವಾದ ಕಾರಣ ಸೈಬರ್ ತನಿಖಾಧಿಕಾರಿಗಳು ಮತ್ತು ಎಫ್‌ಬಿಐ (FBI)ಆ ಖಾತೆಗಳ ಹಣದ ಮೂಲವನ್ನು ಹುಡುಕುತ್ತಾ ಹೋದಾಗ ಅದು ಅಮೆರಿಕದ ಮಿಲಿಟರಿ ಅಧಿಕಾರಿಗೆ ಸೇರಿದ ವಿಚಾರ ಬೆಳಕಿಗೆ ಬಂದಿದೆ.

nicolas maduro 2

ಏನಿದು ಪಾಲಿಮಾರ್ಕೆಟ್‌?
ಭವಿಷ್ಯದಲ್ಲಿ ನಡೆಯಲಿರುವ ಘಟನೆಗಳ ಮೇಲೆ ಹಣವನ್ನು ಬಾಜಿ ಕಟ್ಟುವ (Betting) ಒಂದು ಆನ್‌ಲೈನ್ ವೇದಿಕೆ ಇದಾಗಿದೆ. ಇದನ್ನು ‘ಪ್ರೆಡಿಕ್ಷನ್ ಮಾರ್ಕೆಟ್’ (Prediction Market) ಎಂದು ಕರೆಯುತ್ತಾರೆ.

ಇಲ್ಲಿ ಯಾವುದಾದರೂ ಒಂದು ಘಟನೆ ನಡೆಯುತ್ತದೆಯೇ ಅಥವಾ ಇಲ್ಲವೇ ಎಂಬುದಕ್ಕೆ ಪ್ರಶ್ನೆಗಳಿರುತ್ತವೆ. ಉದಾಹರಣೆಗೆ “ಮಡುರೊ ಜನವರಿ ಒಳಗೆ ಬಂಧನವಾಗುತ್ತಾರೆಯೇ?” ಎಂಬ ಪ್ರಶ್ನೆಯನ್ನು ಕೇಳಲಾಗುತ್ತದೆ ಇದಕ್ಕೆ ಜನರು ‘ಹೌದು’ ಅಥವಾ ‘ಇಲ್ಲ’ ಎಂಬ ಆಯ್ಕೆಗಳ ಮೇಲೆ ಷೇರುಗಳನ್ನು ಖರೀದಿಸುತ್ತಾರೆ. ನಿಮ್ಮ ಊಹೆ ನಿಜವಾದರೆ ನಿಮಗೆ ಹಣ ಸಿಗುತ್ತದೆ.

ಇದು ಬ್ಲಾಕ್‌ಚೈನ್ (Blockchain) ತಂತ್ರಜ್ಞಾನದ ಮೇಲೆ ಕಾರ್ಯನಿರ್ವಹಿಸುತ್ತದೆ. ಇಲ್ಲಿ ವ್ಯವಹಾರ ನಡೆಸಲು ಮುಖ್ಯವಾಗಿ USDC (ಒಂದು ರೀತಿಯ ಸ್ಥಿರ ಕ್ರಿಪ್ಟೋಕರೆನ್ಸಿ) ಬಳಸಲಾಗುತ್ತದೆ. ಇದರಿಂದಾಗಿ ವ್ಯವಹಾರಗಳು ವೇಗವಾಗಿ ಮತ್ತು ಪಾರದರ್ಶಕವಾಗಿರುತ್ತವೆ. ಇದನ್ನೂ ಓದಿ: ಟ್ರಂಪ್‌ ಕದನ ವಿರಾಮ ಘೋಷಣೆಯ 10 ನಿಮಿಷಕ್ಕೂ ಮೊದಲು 14 ಸಾವಿರ ಕೋಟಿ ರೂ. ಬೆಟ್‌ – ಇನ್‌ಸೈಡರ್‌ ಟ್ರೇಡಿಂಗ್‌ ಮಾಡಿದ್ಯಾರು?

ಭಾರತ ಸರ್ಕಾರವು 2025ರಲ್ಲಿ ಜಾರಿಗೆ ತಂದ ‘ಆನ್‌ಲೈನ್ ಗೇಮಿಂಗ್ ಪ್ರಚಾರ ಮತ್ತು ನಿಯಂತ್ರಣ ಕಾಯ್ದೆ’ (PROGA 2025) ಅಡಿಯಲ್ಲಿ ಪಾಲಿಮಾರ್ಕೆಟ್ ಅಂತಹ ವೇದಿಕೆಗಳನ್ನು ನಿಷೇಧಿಸಲಾಗಿದೆ. ಈ ಕಾಯ್ದೆಯು ಹಣದ ಬಾಜಿ ಕಟ್ಟುವ ಎಲ್ಲಾ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳನ್ನು ‘ಅನಧಿಕೃತ ಜೂಜು’ ಎಂದು ಪರಿಗಣಿಸಲಾಗುತ್ತದೆ.

[ad_2]

Source link publictv.in

Leave a Reply

Your email address will not be published. Required fields are marked *