Advertisement

ಪ್ರೀ ಫೈರ್ ಗೇಮ್‌ ಆಡಲು ಮೊಬೈಲ್‌ ಕೊಡದಿದ್ದಕ್ಕೆ ನೇಣಿಗೆ ಶರಣಾದ ಬಾಲಕ

[ad_1]

ಹುಬ್ಬಳ್ಳಿ: ವಿಡಿಯೋ ಗೇಮ್ (Video Game) ಆಡಲು ಮೊಬೈಲ್ (Mobile Phone) ಕೊಡದೇ ಇದ್ದಿದ್ದಕ್ಕೆ ಬಾಲಕ ನೇಣು ಬೀಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಹುಬ್ಬಳ್ಳಿಯಲ್ಲಿ (Hubballi) ನಡೆದಿದೆ.

ಉದಯನಗರ ನಿವಾಸಿ ಸಮರ್ಥ (14) ಆತ್ಮಹತ್ಯೆ ಮಾಡಿಕೊಂಡ ಬಾಲಕ ಎಂದು ತಿಳಿದುಬಂದಿದೆ. ಮೃತ ಸಮರ್ಥ ಮೊಬೈಲ್‌ನಲ್ಲಿ ಪ್ರೀ ಫೈರ್ ಗೇಮ್‌ಗೆ ಅಡಿಕ್ಟ್ ಆಗಿದ್ದ. ಯಾವಾಗಲೂ ಇದೆ ಗೇಮ್‌ ಆಡುತ್ತ ಸಮಯ ಕಳೆಯುತ್ತಿದ್ದ. ಇದೇ ಕಾರಣಕ್ಕೆ ಆತನ ತಾಯಿ ಮೊಬೈಲ್ ಕಸಿದುಕೊಂಡು ಗೇಮ್ ಆಡದಂತೆ ಬುದ್ಧಿವಾದ ಹೇಳಿದ್ದರು. ಇದನ್ನೂ ಓದಿ: ಷೇರು ಮಾರುಕಟ್ಟೆಯಲ್ಲಿ ಲಕ್ಷ ಲಕ್ಷ ಲಾಸ್‌ – ನೇಣಿಗೆ ಶರಣಾದ ಯುವಕ

ತಾಯಿ ಮಾತಿನಿಂದ ಮನನೊಂದಿದ್ದ ಬಾಲಕ ಮನೆಯ ಕೋಣೆಗೆ ಹೋಗಿ, ಸೀರೆಯಿಂದ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಬಗ್ಗೆ ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಫ್ಲೈಟ್‌ನಲ್ಲಿ ಬಂದು BSNL ಸಮವಸ್ತ್ರ ಧರಿಸಿ ತಾಮ್ರದ ತಂತಿ ಕದಿಯುತ್ತಿದ್ದ ಹೈಟೆಕ್ ಖದೀಮರು ಅರೆಸ್ಟ್‌

[ad_2]

Source link publictv.in

Leave a Reply

Your email address will not be published. Required fields are marked *