Advertisement

ನದಿಯಲ್ಲಿ ಮುಳುಗಿ ತಾಯಿ ಮಗ ಸಾವು ಪ್ರಕರಣ – ಒಂದೂವರೆ ಕಿಮೀ ದೂರದಲ್ಲಿ ಬಾಲಕನ ಶವ ಪತ್ತೆ

[ad_1]

ಚಿಕ್ಕೋಡಿ: ಸಂಕೇಶ್ವರದಲ್ಲಿ ಕಳೆದ ನಾಲ್ಕು ದಿನಗಳ ಹಿಂದೆ ತಾಯಿ, ಮಗ ಹಿರಣ್ಯಕೇಶಿ ನದಿಗೆ ಬಿದ್ದು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಕನ ಶವ ನಾಲ್ಕು ದಿನಗಳ ಬಳಿಕ ಸುಮಾರು 1.5 ಕಿಲೋಮೀಟರ್ ದೂರದಲ್ಲಿ ಪತ್ತೆಯಾಗಿದೆ.

ಕಳೆದ ನಾಲ್ಕು ದಿನಗಳ ಹಿಂದೆ ಸಂಕೇಶ್ವರದ ಹನುಮಾನ ನಗರದ ತಾಯಿ ಲಕ್ಷ್ಮೀ ಸುಧಾಕರ ಕುಟೋಳಿ (27) ಹಾಗೂ ಮಗ ಸುಪ್ರೀತ ಸುಧಾಕರ ಕುಟೋಳಿ (9) ಸಂಕೇಶ್ವರದ ಶಂಕರಲಿಂಗ ಮಠದ ಹಿಂದಿನ ಹಿರಣ್ಯಕೇಶಿ (Hiranyakeshi River) ನದಿಯ ನೀರಿಗೆ ಬಿದ್ದಿದ್ದರು. ತಾಯಿಯ ಶವವನ್ನು ಅದೇ ದಿನಾ ರಾತ್ರಿ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ನದಿಯಿಂದ ಹೊರತೆಗೆದಿದ್ದರು. ಇದನ್ನೂ ಓದಿ: ವರದಕ್ಷಿಣೆ ಕಿರುಕುಳ – ಗೃಹಿಣಿ ಆತ್ಮಹತ್ಯೆ, ಪತಿ ಅರೆಸ್ಟ್

ಮಗನ ಶವಕ್ಕಾಗಿ ಕಳೆದ ನಾಲ್ಕು ದಿನಗಳಿಂದ ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ, ಎಸ್‌ಡಿಆರ್‌ಎಫ್ ತಂಡ ಶೋಧ ಕಾರ್ಯ ನಡೆಸುತ್ತಿತ್ತು. ಬಾಲಕನ ಶವವು ನದಿಯಲ್ಲಿ ಬಿದ್ದ ಸ್ಥಳದಿಂದ ಸುಮಾರು 1.5 ಕಿಲೋ ಮೀಟರ್ ವರೆಗೆ ಮುಂದೆ ತೇಲಿ ಹೋಗಿದ್ದು, ಇಂದು ಪತ್ತೆಯಾಗಿದೆ. ಇದನ್ನೂ ಓದಿ: ನೈಟಿ ಹಾಕಿದ್ದಕ್ಕೆ ಹೆಂಡತಿಗೆ ಬೆಂಕಿ ಹಚ್ಚಿದ ಭೂಪ

[ad_2]

Source link publictv.in

Leave a Reply

Your email address will not be published. Required fields are marked *