Advertisement

CET Exam| ಜನಿವಾರ ಕತ್ತರಿಸಿ ಕಸದ ಬುಟ್ಟಿಗೆ ಎಸೆದ ಸಿಬ್ಬಂದಿ

[ad_1]

CET Exam Staff who cut Janavara and threw it dustbin Chikkaballapura

ಚಿಕ್ಕಬಳ್ಳಾಪುರ: ಸಿಇಟಿ ಪರೀಕ್ಷಾ (CET) ಕೇಂದ್ರದ ಪ್ರವೇಶದ ವೇಳೆ ವಿದ್ಯಾರ್ಥಿಯ ಜನಿವಾರ(Janivara) ಕತ್ತರಿಸಿ ಕಸದ ಬುಟ್ಟಿಗೆ ಎಸೆದಿರುವ ಘಟನೆ ಉನ್ನತ ಶಿಕ್ಷಣ ಸಚಿವ ಸುಧಾಕರ್‌ ಅವರ ತವರು ಜಿಲ್ಲೆ ಚಿಕ್ಕಬಳ್ಳಾಪುರದಲ್ಲಿ (Chikkaballapura) ಬೆಳಕಿಗೆ ಬಂದಿದೆ.

ಚಿಕ್ಕಬಳ್ಳಾಪುರ ತಾಲೂಕು ನಂದಿ ಕ್ರಾಸ್‌ ಬಳಿ ಸಮೀಪ ಇರುವ ನಾಗಾರ್ಜುನ ಕಾಲೇಜಿನಲ್ಲಿ ಘಟನೆ ನಡೆದಿದ್ದು, ಈ ಸಂಬಂಧ ವಿದ್ಯಾರ್ಥಿ, ಆತನ ತಾಯಿ ಸೇರಿದಂತೆ ಬ್ರಾಹ್ಮಣ ಸಮುದಾಯದಿಂದ ಘಟನೆ ಖಂಡಿಸಿ ಪೊಲೀಸ್‌ ವರಿಷ್ಠಾಧಿಕಾರಿ ಮತ್ತು ಜಿಲ್ಲಾಧಿಕಾರಿಗೆ ದೂರು ನೀಡಲು ಮುಂದಾಗಿದ್ದಾರೆ.

ಚಿಂತಾಮಣಿ ನಗರದ ವಿದ್ಯಾರ್ಥಿ ಸುಪ್ರೀತ್‌ ಏಪ್ರಿಲ್‌ 23 ರಂದು ಪರೀಕ್ಷೆ ಬರೆಯಲು ಬಂದಾಗ ಜನಿವಾರ ಕತ್ತರಿಸಲಾಗಿದೆ. ತಂದೆ ಇಲ್ಲದ ಸುಪ್ರೀತ್‌ಗೆ ತಾಯಿ ವಾಣಿ ಕಳೆದ 1 ವಾರದ ಹಿಂದೆಯಷ್ಟೇ ಸಂಬಂಧಿಕರ ಸಮ್ಮುಖದಲ್ಲಿ ಉಪನಯನ ಕಾಯಕ್ರಮ ಮಾಡಿಸಿ ಜನಿವಾರ ಹಾಕಿಸಿದ್ದರು. ಇದನ್ನೂ ಓದಿ: ಸಿಇಟಿ ಪರೀಕ್ಷೆ ವೇಳೆ ಜನಿವಾರ ತೆಗೆಸಿದ ಕೇಸ್ – ಮಡಿವಾಳ ಪೊಲೀಸರಿಂದ ಮೂವರ ಬಂಧನ

 

ಜನಿವಾರ ಕತ್ತರಿಸಿದರಿಂದ ವಿಚಲಿತನಾಗಿರುವ ಪುತ್ರ ವಿಚಲಿತನಾಗಿ ಆತಂಕ ಸರಿಯಾಗಿ ಪರೀಕ್ಷೆ ಬರೆದಿಲ್ಲ. ಹೀಗಾಗಿ ಉನ್ನತ ಶಿಕ್ಷಣ ಸಚಿವರು ಮಗನಿಗೆ ಮರು ಪರೀಕ್ಷೆಯಾದರೂ ಮಾಡಲಿ ಇಲ್ಲವೇ ಗ್ರೇಸ್‌ ಅಂಕ ನೀಡಿ ಸಹಾಯ ಮಾಡಬೇಕು ಎಂದು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಸಿಇಟಿ ಪರೀಕ್ಷೆಯಲ್ಲಿ ಜನಿವಾರ ತೆಗೆಸುವ ಘಟನೆ ಕೊನೆಯಾಗಲಿ, ಇದು ಕಾಂಗ್ರೆಸ್‌ನ ಕುಮ್ಮಕ್ಕಿನಿಂದ ನಡೆದ ಘಟನೆ: ಆರ್‌.ಅಶೋಕ್‌

ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಅಥವಾ ಸರ್ಕಾರವು ಪರೀಕ್ಷೆಯ ಸಮಯದಲ್ಲಿ ವಿದ್ಯಾರ್ಥಿಗಳು ಜನಿವಾರವನ್ನು ತೆಗೆಯಬೇಕು ಎಂಬ ಯಾವುದೇ ಅಧಿಕೃತ ಮಾರ್ಗಸೂಚಿಯನ್ನು ಹೊರಡಿಸಿಲ್ಲ. ಇದು ವೈಯಕ್ತಿಕ ಧಾರ್ಮಿಕ ನಂಬಿಕೆಯ ಭಾಗವಾಗಿದ್ದು, ಕಾನೂನು ನಿರ್ವಹಿಸುವಾಗ ಅಧಿಕಾರಿಗಳು ವಿವೇಚನೆಯಿಂದ ವರ್ತಿಸಬೇಕು ಎಂದು ಸೂಚಿಸಲಾಗಿದೆ.

[ad_2]

Source link publictv.in

Leave a Reply

Your email address will not be published. Required fields are marked *