Advertisement

Bengaluru : ಹೊಸ ಮತ್ತು ಹಳೆಯ ಬಾಯ್ ಪ್ರೆಂಡ್ಸ್ ನಡುವೆ ತಗಲಾಕಂಡ ಹುಡುಗಿ

[ad_1]

Bengaluru : ಹುಡುಗ- ಹುಡುಗಿಯರು ಪ್ರೀತಿ ಪ್ರೇಮದಲ್ಲಿ ಬೀಳುವುದು ಸಹಜ. ಆದ್ರೆ ಇಂದಿನ ಕಾಲದಲ್ಲಿ ಹೆಚ್ಚಿನವರು ಒಬ್ಬೊಬ್ಬರು ಇಬ್ಬರು ಮೂವರನ್ನು ಮೆಂಟೇನ್ ಮಾಡುತ್ತಾರೆ ಎಂಬುದು ಕೂಡ ಅಷ್ಟೇ ಸಹಜವಾದ ವಿಚಾರ. ಅಂತೆಯೇ ಇದೀಗ ಇಲ್ಲೊಬ್ಬಳು ಹುಡುಗಿ ತನ್ನ ಹೊಸ ಹುಡುಗ ಮತ್ತು ಹಳೆಯ ಹುಡುಗನ ನಡುವೆ ತಗಲಾಕ್ಕೊಂಡು ಪರಿತಪಿಸಿ ಹೇಗೋ ಬಚಾವ್ ಆಗಿರುವ ಘಟನೆ ಬೆಂಗಳೂರಲ್ಲಿ ನಡೆದಿದೆ.

ಬೆಂಗಳೂರಿನ ಹೆಚ್‌ಎಸ್‌ಆರ್ ಲೇಔಟ್ ಪ್ರದೇಶದಲ್ಲಿ ಯುವತಿ ತನ್ನ ಹಳೆಯ ಗೆಳೆಯನೊಂದಿಗೆ ರಸ್ತೆ ಬದಿಯಲ್ಲಿ ಮಾತನಾಡುತ್ತಿದ್ದಳು. ಇದೇ ವೇಳೆ ಕಾಕತಾಳಿಯವೆಂಬಂತೆ ಆಕೆಯ ಹೊಸ ಗೆಳೆಯ ಸ್ಥಳಕ್ಕೆ ಎಂಟ್ರಿ ಕೊಟ್ಟಿದ್ದಾನೆ. ತನ್ನ ಹುಡುಗಿ ಬೇರೆ ಯಾರೋ ಹುಡುಗನ ಜೊತೆ ಮಾತನಾಡುತ್ತಿರುವುದನ್ನು ಕಂಡು ಕೆರಳಿದ ಆತ, ತಕ್ಷಣವೇ ಅವಾಜ್ ಹಾಕಲು ಶುರು ಮಾಡಿದ್ದಾನೆ

ಆಗ ಹಳೆಯ ಗೆಳೆಯ ಯುವತಿಯೊಂದಿಗೆ ಮಾತನಾಡಲು ಮುಂದಾಗುತ್ತಿದ್ದಂತೆ, ಹೊಸ ಗೆಳೆಯ ಅಡ್ಡಿಪಡಿಸಿ, “ನಿಲ್ಲು, ಮಾತಾಡ್ಬೇಕು” ಎಂದು ಹೇಳಿ ಯುವತಿಯ ಕೈ ಹಿಡಿದು ಎಳೆದಿದ್ದಾನೆ. ಅಲ್ಲದೆ, ಯುವತಿಗೆ ದಾರಿ ಬಿಡದೆ ನಡುರಸ್ತೆಯಲ್ಲೇ ಅಡ್ಡಹಾಕಿ ತಡೆಯಲು ಯತ್ನಿಸಿದ್ದಾನೆ. ಇದರಿಂದ ಕೆಲಕಾಲ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.

 ಯುವತಿ ಮತ್ತು ಯುವಕರ ನಡುವೆ ಮಾತಿನ ಚಕಾಮುಕಿ ಜೋರಾಗಿ ನಡೆದಿದ್ದು ಸ್ಥಳೀಯರೆಲ್ಲರೂ ನಿಂತು ನೋಡಿದ್ದಾರೆ. ಇದರ ವಿಡಿಯೋ ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಮತ್ತೆ ಆ ಬೆಳಗ್ಗೆ ಹುಡುಗಿಯ ಸ್ನೇಹಿತರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ನಿಭಾಯಿಸಿ ಆಕೆಯನ್ನು ಅಲ್ಲಿಂದ ಕರೆದುಕೊಂಡು ಹೋಗಿದ್ದಾರೆ. 

banner



[ad_2]

Source link

Leave a Reply

Your email address will not be published. Required fields are marked *