Advertisement

Voting : ಮತ ಚಲಾಯಿಸುವುದರಿಂದ ಹೆಚ್ಚುತ್ತೆ ಮನುಷ್ಯನ ಆಯಸ್ಸು

[ad_1]

Voting : ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬ ನಾಗರಿಕನು ಮತ ಚಲಾವಣೆ ಮಾಡುವುದು ಆತನ ಹಕ್ಕು. ಒಂದು ಮತ ಇಡೀ ದೇಶದ ಭವಿಷ್ಯವನ್ನೇ ನಿರ್ಧಾರ ಮಾಡಲು ಸಹಕಾರಿಯಾಗುತ್ತದೆ. ಆದರೆ ಇಷ್ಟು ಮಾತ್ರವಲ್ಲ ನಾವು ಚಲಾಯಿಸುವ ಮತ ನಮ್ಮ ಆಯಸ್ಸನ್ನು ಕೂಡ ಹೆಚ್ಚಿಸುತ್ತದೆಯಂತೆ!! ಸಂಶೋಧನೆ ಒಂದು ಈ ರೀತಿಯ ಅಚ್ಚರಿಯ ಸತ್ಯವನ್ನು ಬಯಲು ಮಾಡಿದೆ.

ಹೌದು, ಮತ ಚಲಾವಣೆ ಮಾಡುವುದು ಮನುಷ್ಯನ ದೀರ್ಘಾಯುಷ್ಯಕ್ಕೆ ಕಾರಣವಾಗಬಹುದು ಎಂಬ ಅಚ್ಚರಿಯ ವಿಷಯ ಹೊಸ ಅಧ್ಯಯನವೊಂದರಿಂದ ತಿಳಿದುಬಂದಿದೆ. ವಿಜ್ಞಾನಿಗಳು ರಾಜಕೀಯ ಭಾಗವಹಿಸುವಿಕೆ ಮತ್ತು ದೈಹಿಕ ಆರೋಗ್ಯದ ನಡುವೆ ನಿಕಟ ಸಂಬಂಧವಿದೆ ಎಂಬುದನ್ನು ಕಂಡುಕೊಂಡಿದ್ದಾರೆ.

ಸಂಶೋಧಕರು ಹತ್ತಾರು ವರ್ಷಗಳ ಕಾಲ ಲಕ್ಷಾಂತರ ಜನರ ಜೀವನಶೈಲಿ ಮತ್ತು ಅವರ ನಾಗರಿಕ ಜವಾಬ್ದಾರಿಗಳ ಬಗ್ಗೆ ಅಧ್ಯಯನ ನಡೆಸಿ  ಚುನಾವಣೆಯಲ್ಲಿ ಸಕ್ರಿಯವಾಗಿ ಮತ ಚಲಾಯಿಸುವ ಅಭ್ಯಾಸ ಹೊಂದಿರುವವರಲ್ಲಿ ಅಕಾಲಿಕ ಮರಣದ ಅಪಾಯ ಕಡಿಮೆ ಇರುತ್ತದೆ ಎಂಬುದನ್ನು ಪತ್ತೆಮಾಡಿದ್ದಾರೆ. 

ಒಂಟಿತನ ಮತ್ತು ಸಮಾಜದಿಂದ ದೂರವಿರುವುದು ಹೃದಯ ಸಂಬಂಧಿ ಕಾಯಿಲೆಗಳಿಗೆ ಪ್ರಮುಖ ಕಾರಣ. ಆದರೆ ಮತದಾನ ಮಾಡುವುದು ವ್ಯಕ್ತಿಯನ್ನು ಸಮಾಜದೊಂದಿಗೆ ಬೆಸೆಯುತ್ತದೆ. ಈ ಸಾಮಾಜಿಕ ಬಾಂಧವ್ಯವು ಮಾನಸಿಕ ಒತ್ತಡವನ್ನು ಕಡಿಮೆ ಮಾಡಿ, ಸಂತೋಷದ ಹಾರ್ಮೋನ್‌ಗಳನ್ನು ಉತ್ಪತ್ತಿ ಮಾಡುತ್ತದೆ. ಇದು  ನಾವು ದೇಶದ ಅಥವಾ ವ್ಯವಸ್ಥೆಯ ಬದಲಾವಣೆಯಲ್ಲಿ ಭಾಗಿಯಾಗುತ್ತಿದ್ದೇವೆ ಎಂಬ ‘ನಿಯಂತ್ರಣದ ಭಾವನೆ’ (Sense of Control) ಮನುಷ್ಯನ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ, ಇದು ಪರೋಕ್ಷವಾಗಿ ದೈಹಿಕ ಆರೋಗ್ಯದ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ. ಸೋ ಹೀಗಾಗಿ ಮನುಷ್ಯನ ಆಯಸ್ಸು ಹೆಚ್ಚಾಗುತ್ತದೆ ಎಂದು ಅಧ್ಯಯನ ತಿಳಿಸಿದೆ.

banner



[ad_2]

Source link

Leave a Reply

Your email address will not be published. Required fields are marked *