Advertisement

BJP ಸೇರಿದ ಎಫೆಕ್ಟ್ – ಬರೀ 24 ಗಂಟೆಯಲ್ಲಿ 10 ಲಕ್ಷ ಫಾಲೋವರ್ಸ್‌ ಕಳೆದುಕೊಂಡ ರಾಘವ್‌ ಛಡ್ಡಾ!!B

[ad_1]

ಆಮ್ ಆದ್ಮಿ ಪಕ್ಷದ ಭವಿಷ್ಯದ ನಾಯಕ ಎಂದೇ ಗುರುತಿಸಿಕೊಂಡಿದ್ದ ಸಂಸದ ರಾಘವ್ ಛಡ್ಡಾ ಅವರು ಆರು ಜನ ಸಂಸದರೊಂದಿಗೆ ಪಕ್ಷವನ್ನು ತೊರೆದು ಬಿಜೆಪಿಯನ್ನು ಸೇರ್ಪಡೆಗೊಂಡಿದ್ದಾರೆ. ಇದರ ಬೆನ್ನಲ್ಲೇ ಅವರ ಅಭಿಮಾನಿಗಳು ಅವರಿಗೆ ದೊಡ್ಡ ಮಟ್ಟದ ಶಾಕ್ ನೀಡಿದ್ದು ಬಿಜೆಪಿ ಸೇರ್ಪಡೆಯ ಎಫೆಕ್ಟ್ ಅನ್ನು ಗೊತ್ತು ಮಾಡಿದ್ದಾರೆ.

ಬಿಜೆಪಿಗೆ ಸೇರಿದ ನಂತರ ರಾಘವ್ ಛಡ್ಡಾ ಅವರ ಫಾಲೋವರ್ಸ್ ಸಂಖ್ಯೆ ಭಾರೀ ಇಳಿಕೆಯಾಗಿದೆ. ಸುಮಾರು 10,00000 (10 ಲಕ್ಷ ಜನ ) ಜನರು ಅವರನ್ನು ಅನ್​ಫಾಲೋ ಮಾಡಿದ್ದಾರೆ. ಪಕ್ಷಾಂತರ ಮಾಡಿದ ಕೇವಲ 24 ಗಂಟೆಗಳ ಅಂತರದಲ್ಲಿಯೇ ಈ ಮಹತ್ವದ ಬದಲಾವಣೆಯೊಂದು ನಡೆದಿದೆ.

ಶುಕ್ರವಾರದವರೆಗೆ 14.6 ಮಿಲಿಯನ್ ಫಾಲೋವರ್‌ಗಳನ್ನು ಹೊಂದಿದ್ದ ಛಡ್ಡಾ ಅವರ ಖಾತೆಯಲ್ಲಿ, ಶನಿವಾರ ಮಧ್ಯಾಹ್ನದ ವೇಳೆಗೆ ಆ ಸಂಖ್ಯೆ 13.5 ಮಿಲಿಯನ್‌ಗೆ ಇಳಿಕೆಯಾಗಿದೆ. ಅನ್‌ಫಾಲೋ ರಾಘವ್ ಛಡ್ಡಾ ಹ್ಯಾಶ್‌ಟ್ಯಾಗ್

ಈಗ ಸಾಮಾಜಿಕ ಜಾಲತಾಣಗಳಲ್ಲಿ ‘ಅನ್‌ಫಾಲೋ ರಾಘವ್ ಛಡ್ಡಾ’ ಎಂಬ ಹ್ಯಾಶ್‌ಟ್ಯಾಗ್ ಅಭಿಯಾನ ಜೋರಾಗಿದೆ. ಇಂಟರ್ನೆಟ್ ಒಬ್ಬ ವ್ಯಕ್ತಿಯನ್ನು ರಾತ್ರೋರಾತ್ರಿ ಹೀರೋ ಮಾಡಬಲ್ಲದು, ಅದೇ ರೀತಿ ಶೂನ್ಯಕ್ಕೂ ತರಬಲ್ಲದು ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

banner



[ad_2]

Source link

Leave a Reply

Your email address will not be published. Required fields are marked *