Advertisement

ದೈವಕ್ಕೆ ಅಪಮಾನ – ಒಂದು ತಿಂಗಳೊಳಗೆ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ರಣವೀರ್ ಭೇಟಿಗೆ ಹೈಕೋರ್ಟ್ ಸೂಚನೆ

[ad_1]

Ranaveer Singh: ಬಾಲಿವುಡ್ ನಟ ರಣವೀರ್ ಸಿಂಗ್ ಅವರು ಕಾಂತಾರ ದೈವವನ್ನು ಅಣಕಿಸಿದ ವಿಚಾರವಾಗಿ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ಆ ಬಳಿಕ ಕೇಸ್ ರದ್ದು ಕೋರಿ ರಣವೀರ್ ಸಿಂಗ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ಕೋರ್ಟ್ ಒಂದು ತಿಂಗಳೊಳಗೆ ಮೈಸೂರಿನ ಚಾಮುಂಡಿ ಬೆಟ್ಟ ದೇವಸ್ಥಾನಕ್ಕೆ (Chamundi Hill temple) ಭೇಟಿ ನೀಡಲು ನಿರ್ದೇಶಿಸಲಾಗಿದೆ

ತಮ್ಮ ವಿರುದ್ಧದ ಎಫ್‌ಐಆರ್ ರದ್ದುಗೊಳಿಸುವಂತೆ (HC to dispose Ranveer Singh) ಕೋರಿ ನಟ ರಣವೀರ್ ಸಿಂಗ್ (Ranveer Singh) ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸುವುದಾಗಿ ಸೂಚಿಸಿದ್ದು, ಒಂದು ತಿಂಗಳೊಳಗೆ ಮೈಸೂರಿನ ಚಾಮುಂಡಿ ಬೆಟ್ಟ ದೇವಸ್ಥಾನಕ್ಕೆ (Chamundi Hill temple) ಭೇಟಿ ನೀಡಲು ನಿರ್ದೇಶಿಸಲಾಗಿದೆ. ರಣವೀರ್ ಸಿಂಗ್ ಕೂಡ ಇನ್ನು ಯಾವ ಧರ್ಮದ ಬಗ್ಗೆಯೂ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಧಕ್ಕೆ ತರುವುದಿಲ್ಲ. ಈ ಘಟನೆ ಉದ್ದೇಶಪೂರ್ವಕವಾಗಿ ಆಗಿರೋದಲ್ಲ ಎಂದು ಸಮಜಾಯಿಷಿ ನೀಡಿದ್ದಾರೆ.

ರಣವೀರ್‌ ಸಿಂಗ್‌ ಪ್ರತಿನಿಧಿಸಿದ್ದ ಹಿರಿಯ ವಕೀಲ ಸಜನ್‌ ಪೂವಯ್ಯ, ರಣವೀರ್‌ ಬೇಷರತ್‌ ಕ್ಷಮೆಯಾಚಿಸಿರುವ ಅಫಿಡವಿಟ್‌ ಹಾಕಿದ್ದೇವೆ. ದೇವಸ್ಥಾನಕ್ಕೆ ರಣವೀರ್‌ ಸಿಂಗ್‌ ಭೇಟಿ ನೀಡುತ್ತಾರೆ. ದಿನಾಂಕ ಹಾಕಿಲ್ಲ. ಪೀಠವೇ ನಿರ್ದಿಷ್ಟ ದಿನ ನಿಗದಿ ಮಾಡಬಹುದು. ಅಂದು ರಣವೀರ್‌ ದೇವಾಲಯಕ್ಕೆ ಹೋಗಲಿದ್ದಾರೆ ಎಂದರು. 

ಇದೇ ವಿಚಾರಕ್ಕೆ ಸುದೀರ್ಘವಾದ ವಿಚಾರಣೆ ನಡೆಸಿದ ನ್ಯಾಯಾಲಯ ಬೇಷರತ್ ಕ್ಷಮೆ ಸ್ವೀಕಾರ ಮಾಡಿ ಅರ್ಜಿ ಇತ್ಯರ್ಥಪಡಿಸಿದೆ. ಈ ಮೂಲಕ ಮುಜುಗರಕ್ಕೆ ಸಿಲುಕಿದ್ದ ರಣವೀರ್‌ಗೆ ರಿಲೀಫ್ ಸಿಕ್ಕಿದೆ.

banner



[ad_2]

Source link

Leave a Reply

Your email address will not be published. Required fields are marked *