Advertisement

ಗೆದ್ದ ಬಳಿಕ `ಪ್ರೀತಿʼಯ ಪಂಚ್‌ – ಪ್ರಿಯಾಂಶ್‌ ಆರ್ಯ ಶಾಕ್!

[ad_1]

IPL 2026 Preity Zinta Punches Priyansh Arya After Punjab Kings Historic Win

ನವದೆಹಲಿ: ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಐತಿಹಾಸಿಕ ಗೆಲುವು ದಾಖಲಿಸಿದ ಬಳಿಕ ಯುವ ಆಟಗಾರ ಪ್ರಿಯಾಂಶ್ ಆರ್ಯ ಅವರಿಗೆ ಪಂಜಾಬ್ ಕಿಂಗ್ಸ್(Punjab Kings) ತಂಡದ ತಂಡದ ಮಾಲಕಿ ನಟಿ ಪ್ರೀತಿ ಜಿಂಟಾ(Preity Zinta) ಅವರು ತಮಾಷೆಯಾಗಿ ಪಂಚ್ (Punch) ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

264 ರನ್‌ಗಳ ಟಾರ್ಗೆಟ್‌ ಚೇಸ್‌ ಮಾಡಿದ ಬಳಿಕ ಮೈದಾನಕ್ಕೆ ಬಂದ ಪ್ರೀತಿ ಜಿಂಟಾ, ಹರ್ಷದ ಸಂಭ್ರಮದಲ್ಲಿ ಪ್ರಿಯಾಂಶ್ ಆರ್ಯ(Priyansh Arya) ಅವರ ಹೊಟ್ಟೆಗೆ ತಮಾಷೆಯಾಗಿ ಗುದ್ದಿದರು. ಇದಕ್ಕೆ ಪ್ರಿಯಾಂಶ್‌ ಮೇಡಂ ನನಗೆ ನೋವಾಯ್ತು ಎಂದು ನಗುತ್ತಾ ಪ್ರತಿಕ್ರಿಯಿಸಿದ್ದಾರೆ.

ಈ ವೇಳೆ ಕಾಮೆಂಟರಿ ಮಾಡುತ್ತಿದ್ದ ಭಾರತದ ಮಾಜಿ ಆಟಗಾರ ರವಿಶಾಸ್ತ್ರಿ ಅವರು, “ಓಹ್, ಅದು ಉತ್ತಮವಾದ ಪಂಚ್ ಆಗಿತ್ತು” ಎಂದು ಹಾಸ್ಯಮಯವಾಗಿ ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: IPLನಲ್ಲಿ ಇತಿಹಾಸ ಬರೆದ ಕನ್ನಡಿಗ ಕೆ.ಎಲ್.ರಾಹುಲ್‌; 150 ರನ್‌ ಗಳಿಸಿದ ಮೊದಲ ಭಾರತೀಯ – ಅಭಿಷೇಕ್‌ ದಾಖಲೆ ಉಡೀಸ್‌

ಶನಿವಾರ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟ್‌ ಬೀಸಿದ ಡೆಲ್ಲಿ 2 ವಿಕೆಟ್‌ ನಷ್ಟಕ್ಕೆ 264 ರನ್‌ ಹೊಡೆಯಿತು. ಕನ್ನಡಿಗ ಕೆಎಲ್‌ ರಾಹುಲ್‌ ಆರಂಭಿಕ ಆಟಗಾರನಾಗಿ ಕಣಕ್ಕೆ ಇಳಿದು ಔಟಾಗದೇ 152 ರನ್‌(67 ಎಸೆತ, 16 ಬೌಂಡರಿ, 9 ಸಿಕ್ಸ್‌) ಹೊಡೆದಿದ್ದರು.

ಕಠಿಣ ಸವಾಲನ್ನು ಬೆನ್ನಟ್ಟಿದ ಪಂಜಾಬ್‌ ಇನ್ನೂ 7 ಎಸೆತ ಬಾಕಿ ಇರುವಂತೆಯೇ 4 ವಿಕೆಟ್‌ ನಷ್ಟಕ್ಕೆ 265 ರನ್‌ ಹೊಡೆದು ಗೆಲುವು ಸಾಧಿಸಿತು.

ಪ್ರಿಯಾಂಶ್‌ ಅರ್ಯ 43 ರನ್‌(17 ಎಸೆತ, 2 ಬೌಂಡರಿ, 5 ಸಿಕ್ಸ್‌) ಪ್ರಭುಸಿಮ್ರಾನ್‌ ಸಿಂಗ್‌ 76 ರನ್‌(9 ಬೌಂಡರಿ, 5 ಸಿಕ್ಸ್)‌, ಶ್ರೇಯಸ್‌ ಅಯ್ಯರ್‌ ಔಟಾಗದೇ 71 ರನ್‌(36 ಎಸೆತ, 3 ಬೌಂಡರಿ, 7 ಸಿಕ್ಸ್‌), ನೆಹಲ್‌ ವಧೇರಾ 25 ರನ್‌(15 ಎಸೆತ, 3 ಬೌಂಡರಿ, 1 ಸಿಕ್ಸ್‌), ಶಶಾಂಕ್‌ ಸಿಂಗ್‌ 19 ರನ್‌(10 ಎಸೆತ, 2 ಬೌಂಡರಿ, 1 ಸಿಕ್ಸ್)‌ ಹೊಡೆದರು.

7 ಪಂದ್ಯವಾಡಿ 13 ಅಂಕ ಪಡೆದಿರುವ ಪಂಜಾಬ್‌ ಮೊದಲ ಸ್ಥಾನದಲ್ಲಿದ್ದರೆ 7 ಪಂದ್ಯವಾಡಿ 6 ಅಂಕ ಪಡೆದಿರುವ ಡೆಲ್ಲಿ ಕ್ಯಾಪಿಟಲ್ಸ್‌ 6ನೇ ಸ್ಥಾನದಲ್ಲಿದೆ. 7 ಪಂದ್ಯವಾಡಿ 10 ಅಂಕ ಪಡೆದಿರುವ ಆರ್‌ಸಿಬಿ 2ನೇ ಸ್ಥಾನದಲ್ಲಿದೆ.



[ad_2]

Source link publictv.in

Leave a Reply

Your email address will not be published. Required fields are marked *