Advertisement

ಟ್ರಂಪ್, ಸರ್ಕಾರದ ಮುಖ್ಯ ಅಧಿಕಾರಿಗಳೇ ಹಂತಕನ ಟಾರ್ಗೆಟ್ – ತನಿಖೆಯಲ್ಲಿ ಸ್ಫೋಟಕ ಮಾಹಿತಿ ಬಯಲು‌

[ad_1]

Shots Heard During Press Dinner At White House Donald Tump Evacuated Correspondents Dinner

– ದಾಳಿ ಹಿಂದಿದ್ಯಾ ಇರಾನ್ ನಂಟು?
– ಎಫ್‌ಬಿಐ ನಿರ್ದೇಶಕ ಸ್ಥಾನದಿಂದ ಕಾಶ್ ಪಟೇಲ್ ಔಟ್?

ವಾಷಿಂಗ್ಟನ್: ಅಮೆರಿಕದ (America) ಶ್ವೇತಭವನದ (White House) ವರದಿಗಾರರ ಭೋಜನ ಕೂಟದಲ್ಲಿ ನಡೆದ ಗುಂಡಿನ ದಾಳಿಗೆ ಸಂಬಂಧಿಸಿದಂತೆ ಈಗ ಪ್ರಮುಖ ಮಾಹಿತಿ ಬಹಿರಂಗವಾಗಿದೆ. ತನಿಖಾ ಸಂಸ್ಥೆಗಳ ಪ್ರಕಾರ, ದಾಳಿಕೋರನ ಗುರಿ ಕೇವಲ ನಾಗರಿಕರಲ್ಲ, ಬದಲಾಗಿ ಉನ್ನತ ಸರ್ಕಾರಿ ಅಧಿಕಾರಿಗಳು, ಅಧ್ಯಕ್ಷರು ಕೂಡ ಆಗಿರಬಹುದು ಎಂದು ಹೇಳಿವೆ. ಈ ನಡುವೆ ಬಂಧಿತ ಆರೋಪಿ ಕೋಲ್ ಥಾಮಸ್ ಅಲೆನ್ ತನಿಖೆಗೆ ಸಹಕರಿಸುತ್ತಿಲ್ಲ ಎಂದು ತಿಳಿದು ಬಂದಿದ್ದು, ಈತ ದೊಡ್ಡ ಸಂಚನ್ನ ಮುಚ್ಚಿಡ್ತಿರಬಹುದಾ ಎನ್ನುವ ಅನುಮಾನ ಹುಟ್ಟಿಸಿದೆ.

ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ (Donald Trump) ಮೇಲೆ ಮತ್ತೆ ಗುಂಡಿನ ದಾಳಿಯ ಯತ್ನವಾಗಿತ್ತು. ವಾಷಿಂಗ್ಟನ್‌ನಲ್ಲಿ ಆಯೋಜಿಸಿದ್ದ ಶ್ವೇತಭವನದ ವರದಿಗಾರರ ಭೋಜನಕೂಟದಲ್ಲಿ ಈ ಗುಂಡಿನ ದಾಳಿ ನಡೆದಿತ್ತು. ಇನ್ನೇನು ಡಿನ್ನರ್ ಪಾರ್ಟಿ ಶುರುವಾಯಿತು ಎನ್ನುವ ಸಂದರ್ಭದಲ್ಲಿಯೇ ಟ್ರಂಪ್‌ ಮೇಲೆ ಗುಂಡಿನ ದಾಳಿಗೆ ಪ್ರಯತ್ನಿಸಲಾಗಿತ್ತು. ಹೀಗೆ, ಗುಂಡಿನ ದಾಳಿಗೆ ಯತ್ನಿಸಿದ್ದ ಆರೋಪಿ ಕೋಲ್ ಥಾಮಸ್ ಅಲೆನ್ ಬಂಧಿಸಲಾಗಿದ್ದು, ಆತನ ತನಿಖೆ ನಡೆಯುತ್ತಿದೆ. ತನಿಖೆಯಲ್ಲಿ ಒಂದೊಂದೆ ಸತ್ಯ ಬಯಲಾಗುತ್ತಿದೆ. ಇದನ್ನೂ ಓದಿ: ಅಧ್ಯಕ್ಷ ಹುದ್ದೆ ಇಷ್ಟು ಅಪಾಯಕಾರಿ ಎಂದು ತಿಳಿದಿರಲಿಲ್ಲ: ಗುಂಡಿನ ದಾಳಿಯ ನಂತರ ಟ್ರಂಪ್ ವ್ಯಂಗ್ಯ

ಪ್ರಾಥಮಿಕ ತನಿಖೆಯಲ್ಲಿ ಆರೋಪಿ ಕೋಲ್ ಥಾಮಸ್ ಅಲೆನ್ ಟ್ರಂಪ್ ಮತ್ತು ಅವರ ಆಡಳಿತ ಪ್ರಮುಖ ಅಧಿಕಾರಿಗಳನ್ನು ಗುರಿಯಾಗಿಸಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಅಮೆರಿಕದ ಆಕ್ಟಿಂಗ್ ಅಟಾರ್ನಿ ಜನರಲ್ ಟಾಡ್ ಬ್ಲಾಂಚ್ ಹೇಳಿಕೆ ನೀಡಿದ್ದು, ಈ ದಾಳಿಯ ಟಾರ್ಗೆಟ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಸೇರಿರಬಹುದು ಎಂದಿದ್ದಾರೆ. ದಾಳಿಕೋರನು ಕ್ಯಾಲಿಫೋರ್ನಿಯಾದಿಂದ ಚಿಕಾಗೋಗೆ ರೈಲಿನಲ್ಲಿ ಪ್ರಯಾಣಿಸಿ, ನಂತರ ವಾಷಿಂಗ್ಟನ್ ಡಿಸಿಗೆ ಬಂದು ಕಾರ್ಯಕ್ರಮ ನಡೆಯುತ್ತಿದ್ದ ಹೋಟೆಲ್‌ನಲ್ಲೇ ರೂಂ ಕಾಯ್ದಿರಿಸಿದ್ದನು ಎಂದು ಟಾಡ್ ಬ್ಲಾಂಚ್ ಹೇಳಿದ್ದಾರೆ.‌

White House Correspondents Dinner

31 ವರ್ಷದ ಶಂಕಿತ ಕೋಲ್ ಥಾಮಸ್ ಅಲೆನ್ ಬಂಧನದಲ್ಲಿದ್ದು, ಹಲವಾರು ಗಂಭೀರ ಆರೋಪಗಳನ್ನು ಎದುರಿಸುತ್ತಿದ್ದಾನೆ. ಅವನು ತನಿಖೆಗೆ ಸಹಕರಿಸುತ್ತಿಲ್ಲ. ಅವನ ನಿಜವಾದ ಉದ್ದೇಶ ಏನು? ಈ ಕೃತ್ಯದ ಹಿಂದೆ ಒಬ್ಬಂಟಿಯಾಗಿದ್ದಾನೋ ಅಥವಾ ನೆಟ್‌ವರ್ಕ್‌ನ ಭಾಗವಾಗಿದ್ದಾನೋ ಎಂಬುದನ್ನು ಬಾಯಿಬಿಡುತ್ತಿಲ್ಲ. ಈ ಮಾಹಿತಿ ಕಲೆಹಾಕಲು ನಿರ್ಧರಿಸಿರುವ ತನಿಖಾ ಏಜೆನ್ಸಿಗಳು ಅವನ ಮೊಬೈಲ್ ಫೋನ್, ಲ್ಯಾಪ್‌ಟಾಪ್ ಮತ್ತು ಮನೆಯಲ್ಲಿನ ಫೈಲ್‌ಗಳನ್ನು ಪರಿಶೀಲಿಸುತ್ತಿವೆ.

ಅಷ್ಟೇ ಅಲ್ಲ, ಈ ದಾಳಿಯ ಹಿಂದೆ ಇರಾನ್ ಲಿಂಕ್ ಇರುವ ಆಯಾಮದಲ್ಲೂ ತನಿಖೆ ನಡೆಯುತ್ತಿದೆ. ಆಕ್ಟಿಂಗ್ ಅಟಾರ್ನಿ ಜನರಲ್ ಟಾಡ್ ಬ್ಲಾಂಚ್ ಹೇಳುವಂತೆ ಇರಾನ್ ಸಂಪರ್ಕ ಇರುವ ಬಗ್ಗೆ ಇನ್ನೂ ಯಾವುದೇ ಕಾಂಕ್ರಿಟ್ ಪುರಾವೆಗಳು ಕಂಡುಬಂದಿಲ್ಲ. ಅದಾಗ್ಯೂ ಆತನ ಹಿನ್ನೆಲೆ ಮತ್ತು ಫ್ರಾಕ್ಸಿ ವಾರ್‌ನ ಭಾಗವಾಗಿರಬಹುದೇ ಎಂದು ಪತ್ತೆ ಹಚ್ಚಲಾಗುತ್ತಿದೆ. ಇದನ್ನೂ ಓದಿ: Explained| ಏನಿದು ವೈಟ್ ಹೌಸ್ ಕರೆಸ್ಪಾಂಡೆಂಟ್ಸ್ ಡಿನ್ನರ್? ಅಧ್ಯಕ್ಷರು ಯಾಕೆ ಬರುತ್ತಾರೆ? ಹಿಲ್ಟನ್ ಹೋಟೆಲ್‌ನಲ್ಲೇ ಆಯೋಜನೆ ಯಾಕೆ?

ಈ ಕಾರ್ಯಕ್ರಮ ಆರಂಭಕ್ಕೂ ಮುನ್ನ ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕ್ಯಾರೋಲಿನ್ ಲೀವಿಟ್ ನೀಡಿದ ಹೇಳಿಕೆ ಸಂಚಲನ ಮೂಡಿಸಿದ್ದು, ಎಲ್ಲಡೆ ವೈರಲ್ ಆಗುತ್ತಿದೆ. ಖಾಸಗಿ ಮಾಧ್ಯಮಕ್ಕೆ ಮಾತನಾಡಿದ್ದ ಲೀವಿಟ್, ಇಂದು ರಾತ್ರಿಯ ಈ ಭಾಷಣವು ಡೊನಾಲ್ಡ್ ಟ್ರಂಪ್ ಅವರ ಕ್ಲಾಸಿಕ್ ಭಾಷಣವಾಗಿರುತ್ತದೆ. ಇದು ತಮಾಷೆಯಾಗಿರುತ್ತದೆ, ಮನರಂಜನೆಯಾಗಿರುತ್ತದೆ. ಇಂದು ರಾತ್ರಿ ಕೋಣೆಯಲ್ಲಿ ಕೆಲವು ಗುಂಡು ಹಾರಿಸಲಾಗುತ್ತದೆ. ಆದ್ದರಿಂದ ಎಲ್ಲರೂ ಆಲಿಸಬೇಕು. ಇದು ನಿಜವಾಗಿಯೂ ಅದ್ಭುತವಾಗಿರುತ್ತದೆ ಎಂದು ಹೇಳಿದ್ದರು. ಈ ಗುಂಡಿನ ಹಾರಿಸುವ ಪದ ಬಳಕೆಗೆ ಹಲವರು ಅನುಮಾನ ವ್ಯಕ್ತಪಡಿಸಿದ್ದಾರೆ.

ಈ ಘಟನೆ ಬೆನ್ನಲ್ಲೇ ಎಫ್‌ಬಿಐ ನಿರ್ದೇಶಕ ಸ್ಥಾನದಿಂದ ಭಾರತೀಯ ಮೂಲದ ಕಾಶ್ ಪಟೇಲ್ ಅವರನ್ನು ವಜಾಗೊಳಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಕಾಶ್ ಪಟೇಲ್ ಅವರ ಅತಿಯಾದ ಮದ್ಯಪಾನದ ಅಭ್ಯಾಸ ಸೇರಿದಂತೆ ಅವರ ವಿರುದ್ಧ ಮಾನಹಾನಿಕಾರಕ ವರದಿಗಳು ಮತ್ತು ಆರೋಪಗಳ ನಂತರ ಡೊನಾಲ್ಡ್ ಟ್ರಂಪ್ ಅವರನ್ನು ವಜಾಗೊಳಿಸುವುದನ್ನು ಬೆಂಬಲಿಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಸದ್ಯ ಟ್ರಂಪ್ ಮತ್ತು ಅವರ ಟೀಂ ಮೇಲಿನ ದಾಳಿಗೆ ಸಂಬಂಧಿಸಿದಂತೆ ತನಿಖೆ ಮುಂದುವರಿದಿದ್ದು, ಇನ್ನಷ್ಟು ಆತಂಕಕಾರಿ ಮಾಹಿತಿ ಹೊರಬರುವ ಸಾಧ್ಯತೆಗಳಿವೆ.

[ad_2]

Source link publictv.in

Leave a Reply

Your email address will not be published. Required fields are marked *