Advertisement

IPL: ಸೂಪರ್‌ ಓವರ್‌ನಲ್ಲಿ ಮಿಂಚಿದ ನರೈನ್‌, ರಿಂಕು – ಲಕ್ನೋ ವಿರುದ್ಧ ಕೋಲ್ಕತ್ತಾಗೆ ‘ಸೂಪರ್’ ಜಯ

[ad_1]

ಲಕ್ನೋ: ರೋಚಕತೆಯಿಂದ ಕೂಡಿದ್ದ ಪಂದ್ಯದಲ್ಲಿ ಲಕ್ನೋ ಸೂಪರ್‌ ಜೈಂಟ್ಸ್‌ ವಿರುದ್ಧ ಕೋಲ್ಕತ್ತಾ ನೈಟ್‌ ರೈಡರ್ಸ್‌ ‘ಸೂಪರ್‌’ ಜಯ ಸಾಧಿಸಿದೆ. ಆ ಮೂಲಕ ಈ ಬಾರಿಯ ಐಪಿಎಲ್‌ ಪ್ಲೇ ಆಫ್‌ ರೇಸ್‌ನಲ್ಲಿ ಉಳಿದಿದೆ.

ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಕೆಕೆಆರ್‌ 7 ವಿಕೆಟ್‌ ನಷ್ಟಕ್ಕೆ 155 ರನ್‌ ಗಳಿಸಿತು. ಗುರಿ ಬೆನ್ನತ್ತಿದ ಎಲ್‌ಎಸ್‌ಜಿ 8 ವಿಕೆಟ್‌ ಕಳೆದುಕೊಂಡು 155 ರನ್‌ ಗಳಿಸಿ ಪಂದ್ಯ ಡ್ರಾ ಮಾಡಿಕೊಂಡಿತು. ಕೊನೆ ಓವರ್‌ನಲ್ಲಿ ಗೆಲುವಿಗೆ 17 ರನ್‌ ಬೇಕಿತ್ತು. ಮೊದಲ ಎಸೆತ ಎದುರಿಸಿದ ಶಮಿ ಬಾಲ್‌ ಟಚ್‌ ಮಾಡಲು ಸಾಧ್ಯವಾಗದಿದ್ದರೂ ಸಿಂಗಲ್‌ ಓಡಿದರು. ಈ ವೇಳೆ ಬೌಲರ್‌ ಕಾರ್ತಿಕ್‌ ತ್ಯಾಗಿ ಎರಡು ನೋ ಬಾಲ್‌ ಎಸೆದು ಕೋಲ್ಕತ್ತಾವನ್ನು ಇಕ್ಕಟ್ಟಿಗೆ ಸಿಲುಕಿಸಿದರು. ಕೊನೆಗೆ 3 ಬಾಲ್‌ಗೆ 8 ರನ್‌ ಬೇಕಿತ್ತು. ಈ ನಡುವೆ ಹಿಮ್ಮತ್‌ ಸಿಂಗ್‌ ಕೂಡ ಔಟಾಗಿ ಆಘಾತ ನೀಡಿದರು. ಲಾಸ್ಟ್‌ ಬಾಲ್‌ಗೆ 7 ರನ್‌ ಬೇಕಿತ್ತು. ಕೊನೆ ಬಾಲನ್ನು ಎದುರಿಸಿದ ಶಮಿ ಸಿಕ್ಸರ್‌ ಸಿಡಿಸಿ ಪಂದ್ಯ ಡ್ರಾ ಮಾಡಿಕೊಂಡರು.

ರೋಚಕತೆಯಿಂದ ಕೂಡಿದ್ದ ಪಂದ್ಯ ಸೂಪರ್‌ ಓವರ್‌ಗೆ ಹೋಯಿತು. ಸೂಪರ್‌ ಓವರ್‌ನಲ್ಲಿ ನಿಕೊಲಸ್‌ ಪೂರನ್‌ ಮೊದಲ ಬಾಲ್‌ಗೆ ಕ್ಲೀನ್‌ ಬೌಲ್ಡ್‌ ಆದರು. ನಂತರ ಬಂದ ರಿಷಬ್‌ ಪಂತ್‌ ಸಿಂಗಲ್‌ ತೆಗೆದುಕೊಂಡರು. ಐಡೆನ್ ಮಾರ್ಕ್ರಾಮ್ ದೊಡ್ಡ ಹೊಡೆತಕ್ಕೆ ಮುಂದಾಗಿ ಕ್ಯಾಚ್‌ ನೀಡಿ ನಿರ್ಗಮಿಸಿದರು. ಸುನಿಲ್‌ ನರೈನ್‌ ಸೂಪರ್‌ ಓವರ್‌ನಲ್ಲೇ 2 ವಿಕೆಟ್‌ ಕಬಳಿಸಿ ಮಿಂಚಿದರು. ಲಕ್ನೋ ಕೇವಲ 1 ರನ್‌ ಅಷ್ಟೇ ಗಳಿಸಿತು. 2 ರನ್‌ ಟಾರ್ಗೆಟ್‌ ಪಡೆದು ಕಣಕ್ಕಿಳಿದ ಕೋಲ್ಕತ್ತಾ ಮೊದಲ ಬಾಲ್‌ನಲ್ಲೇ ರಿಂಕು ಸಿಂಗ್‌ ಫೋರ್‌ನಿಂದ ಗೆದ್ದು ಬೀಗಿತು.

ಗೆಲುವು ಅನಿವಾರ್ಯವಾಗಿದ್ದ ಪಂದ್ಯವನ್ನು ಲಕ್ನೋ ಕೈಚೆಲ್ಲಿದೆ. ಕೋಲ್ಕತ್ತಾ ನೀಡಿದ್ದ 155 ರನ್‌ಗಳ ಟಾರ್ಗೆಟ್‌ ಪೂರೈಸಲು ಕೂಡ ವಿಫಲವಾಗಿದೆ. ಐಡೆನ್ ಮಾರ್ಕ್ರಾಮ್ 31, ನಾಯಕ ರಿಷಬ್‌ ಪಂತ್‌ 42, ಆಯುಷ್‌ ಬದೋನಿ 24, ಹಿಮ್ಮತ್‌ ಸಿಂಗ್‌ 19 ಬಿಟ್ಟರೆ ಉಳಿದ ಆಟಗಾರರು ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದರು. ಇದು ತಂಡದ ಸೋಲಿಗೆ ಕಾರಣವಾಯಿತು.

ಮೊದಲು ಬ್ಯಾಟಿಂಗ್‌ ಮಾಡಿದ ಕೆಕೆಆರ್‌ ಆರಂಭ ಚೆನ್ನಾಗಿರಲಿಲ್ಲ. ಸೂಪರ್‌ ಓವರ್‌ ವೇಳೆಗೆ 31 ರನ್‌ ಗಳಿಸುವಷ್ಟರಲ್ಲೇ 4 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಟಿಮ್‌ ಶೆಫರ್ಡ್‌ ಶೂನ್ಯ ಸುತ್ತಿದರೆ, ಕ್ಯಾಪ್ಟನ್‌ ಅಜಿಂಕ್ಯ ರಹಾನೆ 10 ರನ್‌ ಗಳಿಸಿ ಔಟಾದರು. ಅಂಗ್‌ಕ್ರಿಷ್‌ ರಘುವಂಶಿ 9, ರೋಮನ್‌ ಪೋವೆಲ್‌ ಕೇವಲ 1 ರನ್‌ ಗಳಿಸಿ ಔಟಾದರು.

ಸಂಕಷ್ಟದ ಪರಿಸ್ಥಿತಿಯಲ್ಲಿ ಕ್ಯಾಮರೂನ್‌ ಗ್ರೀನ್‌ ಮತ್ತು ರಿಂಗ್‌ ಸಿಂಗ್‌ ಉತ್ತಮ ಜೊತೆಯಾಟ ನೀಡಿದರು. 5ನೇ ವಿಕೆಟ್‌ಗೆ ಜೋಡಿ 42 ರನ್‌ ಗಳಿಸಿತು. ಗ್ರೀನ್‌ 34 ರನ್‌ ಗಳಿಸಿದರು. ರಿಂಕು ಸಿಂಗ್‌ 51 ಬಾಲ್‌ಗೆ 83 ರನ್‌ ಗಳಿಸಿ ತಂಡದ ಮೊತ್ತ 150 ರನ್‌ ಗಡಿ ದಾಟಲು ನೆರವಾದರು. ಈ ನಡುವೆ ಕೊನೆ ಓವರ್‌ನಲ್ಲಿ ರಿಂಕು ನಾಲ್ಕು ಸಿಕ್ಸರ್‌ ಸಿಡಿಸಿ ಗಮನ ಸೆಳೆದರು.

[ad_2]

Source link publictv.in

Leave a Reply

Your email address will not be published. Required fields are marked *