Advertisement

ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ನೆಟ್‌ವರ್ಕ್ ಸಮಸ್ಯೆ – ಆನ್‌ಲೈನ್ ಪೇಮೆಂಟ್, ಬುಕ್ಕಿಂಗ್‌ಗೆ ಭಾರೀ ಪ್ರಾಬ್ಲಂ

[ad_1]

ಬೆಂಗಳೂರು: ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ (Metro Station) ನೆಟ್‌ವರ್ಕ್ (Network) ಸಿಗದೇ ಮೆಟ್ರೋ ಪ್ರಯಾಣಿಕರು ಹೈರಾಣಾಗಿದ್ದಾರೆ. ಮೆಟ್ರೋ ಸ್ಟೇಷನ್ ಹೊರಗಡೆಯೇ ಆನ್‌ಲೈನ್ ವಹಿವಾಟು ಮುಗಿಸಿಕೊಳ್ಳಲು ಬಿಎಂಆರ್‌ಸಿಎಲ್ (BMRCL) ನೋಟಿಸ್ ಅಳವಡಿಕೆ ಮಾಡಿದೆ. ಆನ್‌ಲೈನ್ ಪೇಮೆಂಟ್, ಬುಕ್ಕಿಂಗ್, ಕಾರ್ಡ್ ಲೋಡಿಂಗ್‌ಗೆ ಭಾರೀ ಸಮಸ್ಯೆಯಾಗಿದೆ.

ಬೆಂಗಳೂರಿನಲ್ಲಿ ಲಕ್ಷಾಂತರ ಮಂದಿ ನಮ್ಮ ಮೆಟ್ರೋದಲ್ಲಿ ಪ್ರಯಾಣ ಮಾಡುತ್ತಾರೆ. ಮೆಟ್ರೋ ನಿಲ್ದಾಣ, ಮೆಟ್ರೋ ಒಳಗಡೆ ಪ್ರಯಾಣಿಕರು ಸಿಸ್ಟಂ ವರ್ಕ್, ಮೊಬೈಲ್ ಬಳಕೆ ಮಾಡುತ್ತಾರೆ. ಅಂತಹ ಪ್ರಯಾಣಿಕರಿಗೆ ಬಿಎಂಆರ್‌ಸಿಎಲ್ ಶಾಕ್ ನೀಡಿದೆ. ಇದನ್ನೂ ಓದಿ: ಇರಾನ್-ಅಮೆರಿಕ ಕದನ ವಿರಾಮ ಆಟ; ಮಧ್ಯಸ್ಥಗಾರ ಪಾಕ್‌ಗೆ ಲಾಭವಿದ್ಯಾ?- ಭಾರತ ಇದನ್ನ ಹೇಗೆ ನೋಡ್ತಿದೆ?

ಹೌದು, ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ನೆಟ್‌ವರ್ಕ್ ಸಮಸ್ಯೆ ತಲೆದೋರಿದೆ. ಆರ್.ವಿ ಮೆಟ್ರೋ ಸ್ಟೇಷನ್, ಜಯನಗರ ಸೇರಿದಂತೆ ಹಲವು ಮೆಟ್ರೋ ನಿಲ್ದಾಣಗಳಲ್ಲಿ ನೆಟ್‌ವರ್ಕ್ ಸಮಸ್ಯೆ ಆಗಿದೆ. ಮೆಟ್ರೋ ಸ್ಟೇಷನ್ ಒಳಗಡೆ ನೆಟ್‌ವರ್ಕ್ ಇಲ್ಲ. ಮೆಟ್ರೋ ಸ್ಟೇಷನ್ ಹೊರಗಡೆ ಆನ್‌ಲೈನ್ ವಹಿವಾಟು ಮುಗಿಸಿಕೊಳ್ಳುವಂತೆ ಆರ್‌ವಿ ರಸ್ತೆ ಮೆಟ್ರೋ ನಿಲ್ದಾಣದ ಮುಂಭಾಗ ಬಿಎಂಆರ್‌ಸಿಎಲ್ ಭಿತ್ತಿ ಪತ್ರ ಮತ್ತು ತಿಳುವಳಿಕೆ ಪತ್ರವನ್ನ ಅಂಟಿಸಿದೆ. ಇದನ್ನೂ ಓದಿ: IPL: ಸೂಪರ್‌ ಓವರ್‌ನಲ್ಲಿ ಮಿಂಚಿದ ನರೈನ್‌, ರಿಂಕು – ಲಕ್ನೋ ವಿರುದ್ಧ ಕೋಲ್ಕತ್ತಾಗೆ ‘ಸೂಪರ್’ ಜಯ

ಮೆಟ್ರೋ ನಿಲ್ದಾಣಗಳಲ್ಲಿ ನೆಟ್‌ವರ್ಕ್ ಸಮಸ್ಯೆಯಿಂದ ಮೆಟ್ರೋ ಪ್ರಯಾಣಿಕರು ಪರದಾಡುವಂತಾಗಿದೆ. ಓಲಾ, ಊಬರ್, ಆನ್‌ಲೈನ್ ಬುಕ್ಕಿಂಗ್ ಮತ್ತು ಕಾರ್ಡ್ ಲೋಡಿಂಗ್‌ಗು ಸಮಸ್ಯೆ ಆಗುತ್ತಿದೆ. ನೆಟ್‌ವರ್ಕ್ಗಾಗಿ ಮೆಟ್ರೋ ಸ್ಟೇಷನ್ ಹೊರಗಡೆ ಬಂದು ಪ್ರಯಾಣಿಕರು ಪರದಾಡುತ್ತಿದ್ದಾರೆ. ಮೆಟ್ರೋ ನಿಲ್ದಾಣಗಳಲ್ಲಿ ನೆಟ್‌ವರ್ಕ್ ಸಮಸ್ಯೆ ಬಗ್ಗೆ ನಮ್ಮ ಮೆಟ್ರೋ ಪ್ರಯಾಣಿಕರು ಅಸಮಾಧಾನ ಹೊರಹಾಕುತ್ತಿದ್ದಾರೆ. ಇದನ್ನೂ ಓದಿ: ಟ್ರಂಪ್, ಸರ್ಕಾರದ ಮುಖ್ಯ ಅಧಿಕಾರಿಗಳೇ ಹಂತಕನ ಟಾರ್ಗೆಟ್ – ತನಿಖೆಯಲ್ಲಿ ಸ್ಫೋಟಕ ಮಾಹಿತಿ ಬಯಲು‌

[ad_2]

Source link publictv.in

Leave a Reply

Your email address will not be published. Required fields are marked *