Advertisement

ಭಾರತವನ್ನು ನರಕ ಎಂದ ಡೊನಾಲ್ಡ್ ಟ್ರಂಪ್

[ad_1]

ಅಮೆರಿಕದಲ್ಲಿ ಜನ್ಮಸಿದ್ಧ ಪೌರತ್ವ ಹಕ್ಕಿನ ಕುರಿತಂತೆ ನಿರೂಪಕ ಮೈಕೆಲ್ ಸ್ಯಾವೇಜ್ ಅವರು ಭಾರತ, ಚೀನಾ ಮತ್ತು ಇತರ ಕೆಲವು ದೇಶಗಳನ್ನು ‘ನರಕಕೂಪ’ ಎಂದು ಕರೆದು ಪೋಸ್ಟ್ ಹಂಚಿಕೊಂಡಿದ್ದರು. ಈ ಪೋಸ್ಟ್‌ ಅನ್ನು ಟ್ರಂಪ್‌ ಮರು ಹಂಚಿಕೊಂಡಿದ್ದರು. ಇದರ ಬೆನ್ನಲ್ಲೇ ಭಾರತದಲ್ಲಿ ಟ್ರಂಪ್ ವಿರುದ್ಧ ಬಾರಿ ಆಕ್ರೋಶ ವ್ಯಕ್ತವಾಗಿತ್ತು. ಅನೇಕ ರಾಜಕೀಯ ನಾಯಕರು ಟ್ರಂಪ್ ವಿರುದ್ಧ ಹರಿಹಾಯ್ದಿದ್ದರು.

ಇದೀಗ ಭಾರತವನ್ನು ನರಕ ಎಂದು ಕರೆದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಕರ್ನಾಟಕದ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಟ್ರಂಪ್ ಅವರಿಗೆ ಮಧ್ಯದ ಬೆರಳನ್ನು ಪ್ರದರ್ಶಿಸಿದ್ದಾರೆ.

ಸಂಡೂರಿನಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು ನೀವು ನಮ್ಮ ಪ್ರಧಾನಿಗೆ ಅವಮಾನಿಸಿದ್ದೀರಿ ಭಾರತವನ್ನು ನರಕ ಎಂದು ಕರೆದಿದ್ದೀರಿ ಮಿಸ್ಟರ್ ಟ್ರಂಪ್ ನೀವೊಬ್ಬ ಮ್ಯಾಡ್ ಮಾಕ್ಸ್. ಅಮೆರಿಕ ಅಧ್ಯಕ್ಷ ಆದ ಕಾರಣ ನೀವು ಬಾಯಿಗೆ ಬಂದಂತೆ ಮಾತನಾಡುವ ಹಾಗಿಲ್ಲ. ನನ್ನ ದೇಶದ ಬಗ್ಗೆ ನೀವು ಆಡಿದ ಮಾತುಗಳನ್ನು ನಾನು ಖಂಡಿಸುತ್ತೇನೆ. ಹೀಗಾಗಿ ನಾನು ನಿಮಗೆ ಮಧ್ಯದ ಬೆರಳನ್ನು ತೋರಿಸಲು ಬಯಸುತ್ತೇನೆ ಎಂದು ಮಾಧ್ಯಮಗಳ ಮುಂದೆಯೇ ಬೆರಳನ್ನು ಎತ್ತಿ ತೋರಿಸಿದ್ದಾರೆ. 



[ad_2]

Source link

Leave a Reply

Your email address will not be published. Required fields are marked *