Advertisement

ಹರಿಹರ ಪಂಚಮಸಾಲಿ ಪೀಠದಲ್ಲಿ ಭಾರೀ ಹೈಡ್ರಾಮಾ – ಸ್ವಾಮೀಜಿ ಬೆಂಬಲಿಗರಿಂದ ಟ್ರಸ್ಟಿ ಬೆಂಬಲಿಗರ ಮೇಲೆ ಹಲ್ಲೆ

[ad_1]

Panchamasali Peetha 1

* 2008 ರಿಂದ 2026ರವರೆಗಿನ ಲೆಕ್ಕ ನೀಡಿದ ಬಿ.ಸಿ ಉಮಾಪತಿ

ದಾವಣಗೆರೆ: ಹರಿಹರ ಪಂಚಮಸಾಲಿ ಪೀಠದ (Panchamasali Peetha) ಆವರಣದಲ್ಲಿ ಭಾರೀ ಹೈಡ್ರಾಮಾ ನಡೆದಿದೆ. ಪೀಠದ ಟ್ರಸ್ಟ್‌ನ ಪ್ರಧಾನ ಧರ್ಮಧರ್ಶಿ ಬಿ.ಸಿ ಉಮಾಪತಿ ಲೆಕ್ಕ ಮಂಡನೆ ಸಂದರ್ಭದಲ್ಲಿ ಭಾರೀ ಗಲಾಟೆಯಾಗಿದೆ.

ಸ್ವಾಮೀಜಿ (Vachananda Swamiji) ಬೆಂಬಲಿಗರಿಗೆ ಟ್ರಸ್ಟಿನ ಬೆಂಬಲಿಗರು ನಿಂದಿಸಿದ್ದಾರೆ. ಈ ವೇಳೆ ಸ್ವಾಮೀಜಿ ಬೆಂಬಲಿಗರು ಟ್ರಸ್ಟ್‌ ಬೆಂಬಲಿಗರ ಮೇಲೆ ಹಲ್ಲೆ ನಡೆಸಿದ್ದಾರೆ. ಲೆಕ್ಕ ಕೇಳೋರು ಇಷ್ಟು ದಿನ ಎಲ್ಲಿ ಹೋಗಿದ್ರಿ ಎಂದು ಟ್ರಸ್ಟ್ ಬೆಂಬಲಿಗರು ನಿಂದಿಸಿದ್ದಾರೆ. ಇದರಿಂದ ಆಕ್ರೋಶಗೊಂಡ ಸ್ವಾಮೀಜಿ ಬೆಂಬಲಿಗರು ವಿಜಯನಗರ ಜಿಲ್ಲೆಯ ಸಂಘಟನಾ ಕಾರ್ಯದರ್ಶಿ ಶಿವನಗೌಡ ಮೇಲೆ ಹಲ್ಲೆ ನಡೆಸಿದ್ದಾರೆ. ಈ ವೇಳೆ ಪೊಲೀಸರು ಮಧ್ಯೆ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಇದನ್ನೂ ಓದಿ: ಪ್ರಾಮಾಣಿಕರಾಗಿದ್ದರೆ ಧರ್ಮಸ್ಥಳಕ್ಕೆ ಬಂದು ಆಣೆ ಮಾಡಿ – ಪಂಚಮಸಾಲಿ ಪೀಠದ ಟ್ರಸ್ಟಿಗಳಿಗೆ ಹೆಚ್.ಎಸ್ ಶಿವಶಂಕರ್ ಸವಾಲು

vachananda swamiji

ಗಲಾಟೆ, ಧಿಕ್ಕಾರ ಘೋಷಣೆ ಮಧ್ಯೆ ಪ್ರಧಾನ ಧರ್ಮದರ್ಶಿ ಉಮಾಪತಿ ಲೆಕ್ಕ ಕೊಟ್ಟಿದ್ದಾರೆ. 2008 ರಿಂದ 2026ರವರೆಗಿನ ಲೆಕ್ಕಾಚಾರವನ್ನು ತೆರೆದಿಟ್ಟಿದ್ದಾರೆ. ಪೀಠದ ಟ್ರಸ್ಟ್‌ ಪ್ರಾರಂಭವಾದಾಗಿನಿಂದ ಇಲ್ಲಿಯವರೆಗೂ ಭಕ್ತರು ನೀಡಿದ ಕಾಣಿಕೆ, ಸರ್ಕಾರದ ಅನುದಾನದ ಬಗ್ಗೆ ಮಾಹಿತಿ ನೀಡಿದರು. ಕಳೆದ 2008 ರಿಂದ 2026ರವರೆಗೆ 27 ಕೋಟಿ 61 ಲಕ್ಷ 51 ಸಾವಿರದ 518 ರೂ. ಜಮಾ ಆಗಿದೆ. ಸರ್ಕಾರದ ಅನುದಾನ ಸೇರಿ 27 ಕೋಟಿ 61 ಲಕ್ಷ ರೂ. ಅನುದಾನ ಜಮಾ ಆಗಿದೆ ಎಂದು ಮಾಹಿತಿ ನೀಡಿದರು.

ಇದಿಷ್ಟೇ ಅಲ್ಲದೇ ಮಠ ಬೆಳೆದು ಬಂದ ಹಾದಿಯ ಬಗ್ಗೆ ಬಿ.ಸಿ ಉಮಾಪತಿ ವಿವರಿಸಿದರು. ಮಾಜಿ ಸಚಿವ ದಿವಂಗತ ಶಿವಪ್ಪನವರು ತೆಗೆದುಕೊಳ್ಳಬೇಕು ಎಂದುಕೊಂಡಿದ್ದ ಜಮೀನನ್ನು ಹಣ ಕೊಟ್ಟು ಮಠಕ್ಕೆ ತೆಗೆದುಕೊಳ್ಳಲಾಗಿದೆ. ಆದರೆ ಶಿವಪ್ಪನವರೇ ದಾನ ಕೊಟ್ಟಿದ್ದೇವೆ ಎಂದು ಹೇಳಿಕೊಂಡು ಹೋಗುತ್ತಿದ್ದಾರೆ. ದಾನ ನೀಡಿಲ್ಲ ಅವರು ತೆಗೆದುಕೊಳ್ಳಬೇಕಿದ್ದ ಜಮೀನನ್ನು ನಾವು ಹಣ ಕೊಟ್ಟು ತೆಗೆದುಕೊಂಡಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: `ಮಸಾಜ್ ಪ್ರಿಯ’ ವಚನಾನಂದ ಶ್ರೀಗಳಿಗೆ ಹೆಚ್ಚಿದ ಸಂಕಷ್ಟ – ಮಕ್ಕಳ ಕಲ್ಯಾಣ ಸಮಿತಿಗೆ ಹಾಸ್ಟೆಲ್ ವಿದ್ಯಾರ್ಥಿಗಳಿಂದ್ಲೇ ದೂರು

Panchamasali Peetha

ಈ ಲೆಕ್ಕ ಕೊಡಿ ಅಭಿಯಾನ ಸ್ವಾಮೀಜಿಗಳ ತಪ್ಪನ್ನು ಮರೆಮಾಚಿಸುವ ಅಭಿಯಾನವಾಗಿದೆ. ಇಷ್ಟು ವರ್ಷಗಳ ಕಾಲ ಲೆಕ್ಕ ಕೇಳೋಕೆ ಏನ್ ಆಗಿತ್ತು? ಪ್ರತಿ ವರ್ಷ ಕೂಡ ಲೆಕ್ಕವನ್ನು ಕೊಡುವ ಕೆಲಸ ಮಾಡುತ್ತೇವೆ ಎಂದು ಇದೇ ವೇಳೆ ಅವರು ತೀವ್ರವಾಗಿ ಪ್ರತಿಕ್ರಿಯಿಸಿದರು.

ಇನ್ನೊಂದೆಡೆ ಲೆಕ್ಕಪತ್ರ ಮಂಡನೆ ಮಾಡುವುದಕ್ಕೆ ವಚನಾನಂದ ಸ್ವಾಮೀಜಿ ಬೆಂಬಲಿಗರ ವಿರೋಧ ವ್ಯಕ್ತಪಡಿಸಿದರು. ತರಾತುರಿಯಲ್ಲಿ ಲೆಕ್ಕ ಪತ್ರ ಮಂಡನೆ ಮಾಡೋದು ಸಮಂಜಸವಲ್ಲ. ಮೂರು ತಿಂಗಳ ಕಾಲಾವಕಾಶ ಪಡೆದು ವಿಸ್ತಾರವಾದ ಲೆಕ್ಕಪತ್ರ ವರದಿ ಮಂಡನೆ ಮಾಡಬೇಕು. ಮೊದಲು ಪೀಠಕ್ಕೆ ಕಾಣಿಕೆ ನೀಡಿದ ಭಕ್ತರ ಪಟ್ಟಿ ಬಿಡುಗಡೆ ಮಾಡಬೇಕು. ನಂತರ ಸರ್ಕಾರದಿಂದ ಬಂದ ಅನುದಾನದ ಪಿನ್ ಟೂ ಪಿನ್ ಲೆಕ್ಕಪತ್ರ ನೀಡಬೇಕು ಎಂದು ಆಗ್ರಹಿಸಿದರು.

ಲೆಕ್ಕ ಕೊಡುವ ಮೊದಲು ಮಠದಲ್ಲಿ ಗಲಾಟೆ ನಡೆಯಿತು. ವಚನಾನಂದ ಶ್ರೀಗಳಿದ್ದ ಮಠಕ್ಕೆ ಟ್ರಸ್ಟಿಗಳು ಎಂಟ್ರಿ ಕೊಡುತ್ತಿದ್ದಂತೆ ಭಾರೀ ಹೈಡ್ರಾಮಾ ನಡೆಯಿತು. ವಚನಾನಂದ ಸ್ವಾಮಿ ಹಾಗೂ ಬಿ.ಸಿ ಉಮಾಪತಿ ಮುಖಾಮುಖಿ ಆದರು. ಟ್ರಸ್ಟಿಗಳನ್ನು ಕಂಡ ಸ್ವಾಮೀಜಿ ಬೆಂಬಲಿಗರು ಕಳ್ಳ ಕಳ್ಳ ಎಂದು ಕೂಗಿದರು. ಮಠದ ಒಳಗೆ ಮಹಂತ ಸ್ವಾಮಿ ಪುತ್ಥಳಿಗೆ ಕೈ ಮುಗಿದ ಬಿಸಿ ಉಮಾಪತಿ ಹಾಗೂ ತಂಡ ಮುಂದೆ ಸಾಗಿತು. ಈ ವೇಳೆ ಮಹಂತ ಸ್ವಾಮಿ ಪುತ್ಥಳಿ ಬಳಿ ವಚನಾನಂದ ಶ್ರೀಗಳು ಇದ್ದರು. ಈ ವೇಳೆ ಗೊಂದಲದ ವಾತಾವರಣ ಸೃಷ್ಟಿಯಾಗಿದ್ದು, ಸ್ವಾಮಿಜಿ ಪರವಾಗಿ ಭಕ್ತರು ಘೋಷಣೆ ಕೂಗಲು ಶುರು ಮಾಡಿದರು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಟ್ರಸ್ಟಿಗಳನ್ನು ಹೊರಗೆ ಕರೆದೊಯ್ದರು. ಇದನ್ನೂ ಓದಿ: ಮಠ ಬಿಡಲ್ಲ ಅಂತ ವಚನಾನಂದ ಶ್ರೀ ಪಟ್ಟು – ಬಿಡದಿದ್ರೆ ಎಳೆದು ಹೊರಗೆ ಹಾಕ್ತೀವಿ ಎಂದ ಟ್ರಸ್ಟಿಗಳು

ಈ ಲೆಕ್ಕ ಕೊಡಿ ಕಾರ್ಯಕ್ರಮಕ್ಕೆ ತಮಗೆ ಆಹ್ವಾನವೇ ಬಂದಿಲ್ಲ ಎಂದು ವಚನಾನಂದ ಸ್ವಾಮೀಜಿ ಹೇಳಿದರು. ʻಪಬ್ಲಿಕ್ ಟಿವಿʼಗೆ ಪ್ರತಿಕ್ರಿಯೆ ನೀಡಿದ ಅವರು, ಆ ಕಾರ್ಯಕ್ರಮಕ್ಕೆ ಭಕ್ತರು ಹೋಗುತ್ತಾರೆ ಅವರೇ ಲೆಕ್ಕ ಕೇಳುತ್ತಾರೆ. ಅವರು ಕೂಡ ನನ್ನ ಭಕ್ತರು ಇವರು ಕೂಡ ನನ್ನ ಭಕ್ತರೇ. ಭಕ್ತರಾದವರು ಗುರುವಿನ ಪಾದದ ಕೆಳಗೆ ಇರಬೇಕು, ಅದನ್ನು ಬಿಟ್ಟು ತಲೆಯ ಮೇಲೆ ಕೂರಬಾರದು. ಹಸುವಿನ ಹಾಲು ಬೇಕು ಎಂದರೆ ಹಸುವಿನ ಮೇಲೆ ಕೂರೋದಲ್ಲ. ಹಸುವಿನ ಕಾಲ ಬಳಿ ಕೂತು ಕೆಚ್ಚಲಿನಿಂದ ಹಾಲು ಕರೆಯಬೇಕು ಎಂದು ಟಾಂಗ್ ಕೊಟ್ಟರು. ಇದನ್ನೂ ಓದಿ: ಪೀಠಕ್ಕೆ ಬರುವ ಗುರುಕಾಣಿಕೆ ಶ್ವಾಸಕೇಂದ್ರಕ್ಕೆ ವರ್ಗಾವಣೆ – ವಂಚನಾನಂದ ಶ್ರೀಗಳ ಉಚ್ಚಾಟನೆ ಟ್ರಸ್ಟ್‌ ಕೊಟ್ಟ 10 ಕಾರಣಗಳೇನು?

[ad_2]

Source link publictv.in

Leave a Reply

Your email address will not be published. Required fields are marked *