[ad_1]
ಮಂಗಳೂರು: ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದಲ್ಲಿ (Mangaluru cooker blast) ಉಗ್ರ ಶಾರಿಕ್ 10 ವರ್ಷ ಜೈಲು ಶಿಕ್ಷೆಗೆ ಒಳಗಾಗಿರುವ ಬಗ್ಗೆ, ಸ್ಫೋಟದಲ್ಲಿ ಗಾಯಗೊಂಡಿದ್ದ ಆಟೋ ಚಾಲಕ ಪ್ರತಿಕ್ರಿಯೆ ನೀಡಿದ್ದಾರೆ.
‘ಪಬ್ಲಿಕ್ ಟಿವಿ’ ಜೊತೆ ಆಟೋ ಚಾಲಕ ಪುರುಷೋತ್ತಮ ಪೂಜಾರಿ ಮಾತನಾಡಿ, ಉಗ್ರನಿಗೆ ಹತ್ತು ವರ್ಷ ಅಲ್ಲ ಜೀವಾವಧಿ ಶಿಕ್ಷೆ ನೀಡಬೇಕಿತ್ತು. ಜೈಲಿನಿಂದ ಹೊರಬಂದ ನಂತರ ಮತ್ತೆ ಅಂತಹದ್ದೇ ಕೃತ್ಯದಲ್ಲಿ ಭಾಗಿಯಾಗುತ್ತಾನೆ. ಅವನಿಗೆ ಹಿಂದಿನಿಂದ ಸಹಾಯ ಮಾಡೋರು ಇದ್ದಾರೆ. ಹಣಕ್ಕಾಗಿ ಏನು ಬೇಕಾದ್ರೂ ಮಾಡುವ ವ್ಯಕ್ತಿಗಳು. ಹೀಗಾಗಿ, ಜೀವಾವಧಿ ಶಿಕ್ಷೆ ನೀಡಿದರೆ ಮುಂದೆ ಅವನಿಂದ ಯಾವುದೇ ಕೃತ್ಯ ನಡೆಯೋದಿಲ್ಲ ಎಂದು ಅಭಿಪ್ರಾಯಪಟ್ಟರು. ಇದನ್ನೂ ಓದಿ: ಮಂಗಳೂರು ಕುಕ್ಕರ್ ಬ್ಲಾಸ್ಟ್ ಕೇಸ್ – ಉಗ್ರ ಶಾರಿಕ್‌ಗೆ 10 ವರ್ಷ ಜೈಲು ಶಿಕ್ಷೆ
ಮಾಡದ ತಪ್ಪಿಗಾಗಿ ನಾನು ಶಿಕ್ಷೆ ಅನುಭವಿಸುತ್ತಿದ್ದೇನೆ. ಮೂರು ವರ್ಷದಿಂದ ನರಕಯಾತನೆ ಅನುಭವಿಸಿದ್ದೇನೆ. ಆಟೋದಲ್ಲೇ ಬಾಂಬ್ ಸ್ಫೋಟ ಆಗಿರುವುದರಿಂದ ನನಗೊಬ್ಬನಿಗೇ ತೊಂದರೆಯಾಯಿತು. ಇಲ್ಲದಿದ್ದಲ್ಲಿ ಸಾಕಷ್ಟು ಮಂದಿಗೆ ತೊಂದರೆಯಾಗುತ್ತಿತ್ತು. ಆರೋಪಿಗೆ ಜೀವಾವಧಿ ಶಿಕ್ಷೆ ನೀಡಿದ್ರೆನೇ ಒಳ್ಳೆಯದು ಆಟೋ ಚಾಲಕ ಹೇಳಿದರು.
ಮಂಗಳೂರಿನ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಉಗ್ರ ಶಾರಿಕ್‌ಗೆ (Mohammed Shariq) 10 ವರ್ಷ ಜೈಲು ಶಿಕ್ಷೆ ವಿಧಿಸಿ ಎನ್‌ಐಎ ಸ್ಪೆಷಲ್ ಕೋರ್ಟ್ ಆದೇಶ ಹೊರಡಿಸಿದೆ. ಸೆಕ್ಷನ್ 121 ಎ, ಸೆಕ್ಷನ್ 122, ಸೆಕ್ಷನ್ 326 ಹಾಗೂ ಯುಎಪಿಎ ಸೇರಿದಂತೆ ಹಲವು ಸೆಕ್ಷನ್‌ಗಳ ಅಡಿಯಲ್ಲಿ ಕೋರ್ಟ್ 10 ವರ್ಷ ಕಠಿಣ ಶಿಕ್ಷೆ, 10 ಸಾವಿರ ದಂಡ ವಿಧಿಸಿದೆ.
[ad_2]
Source link publictv.in

















Leave a Reply